1) ಪಂಪ :
ಸುಮಾರು 600 ವರ್ಷಗಳ ಹಿಂದೆ ಪುಣ್ಯಶ್ರವ ಚಂಪೂ ಕೃತಿ ರಚಿಸಿದ ನಾಗರಾಜ ಎಂಬ ಕವಿ ಬರೆದ ಸ್ತುತಿ ಪದ್ಯವಿದು
ಜಗತ್ತಿನ ಮಹಾಕವಿಗಳ ತಾರಾಗಣದಲ್ಲಿ ಪಂಪನಿಗೆ ಅಗ್ರಸ್ಥಾನ ಸಲ್ಲುತ್ತದೆ.
ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ಬರೆದಿದ್ದರೂ ಅದರ ನಕಲಲ್ಲ ಪ್ರಬುದ್ಧ ಪ್ರಜ್ಞೆಯ ಪರಿಪಕ್ವ ಅನುಭವವಿದೆ.
ಈ ಸತ್ವತೆಯಲ್ಲಿ ಬರೆದ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯವು ಅವನಿಗಿದ್ದ ಬಿರುದುಗಳಾದ
ಕವಿತಾಗುಣಾ ರ್ಣವ'
,ಸುಕವಿ
ಜನಮಾನಕೊತ್ತಂಸಹಂಸ೦.
ಸಂಸಾರಸಾರೋದಯಂ'
ಸರಸ್ವತೀ ಮಣಿಹಾರಂ
ಇದೇ ಮೊದಲಾದ ಬಿರುದುಗಳನ್ನು ಆಧರಿಸಿ ನೋಡಿದಾಗ ಅವನ ವ್ಯಕ್ತಿತ್ವ ದರ್ಷಣಕ್ಕೆ ಸೂಕ್ತವಾಗಿವೆ.
- ಅವನ ಕೃತಿಗಳು ಓಜೋನ್ವಿತವಾಗಿದ್ದರೂ ಸ್ವಂತಿಕೆಯಿದೆ.
- ಇಂದಿನ ಆಂಧ್ರಪ್ರದೇಶದಲ್ಲಿರುವ ಅಂದಿನ ವೆಂಗಿಮಂಡಲದ ವೆಂಗಿ ಪೊಳಲಲ್ಲಿ ಅವರ ಪೂರ್ವಜರಾದ ಶ್ರೀವತ್ಸ ಗೋತ್ರ ಬ್ರಾಹ್ಮಣ ಕುಲದ - ಮಾಧವ ಸೋಮಯಾಜಿ - ಅಭಿಮಾನ ಚಂದ್ರ - ಕೊಮರಯ್ಯ - ಭೀಮಪಯ್ಕ -ಪಂಪನಾಗಿ ಜನಿಸಿದನು.
- "ಜಾತಿಯೊಳೆಲ್ಲ ಮುತ್ತಮದ ಜಾತಿ ವಿಪ್ರ ಕುಲವನ್ನು " ಜಿನೇಂದ್ರ ಧರ್ಮಮೇವಲ೦. ದೊರೆ ದರ್ಮದೊಳೆಂದು ನಂಬಿ ಜೈನಧರ್ಮಾವಲಂಭಿಯಾಗುತ್ತಾನೆ.
- ತನ್ನ ಬಾಲ್ಯದ ಬಹುಕಾಲವನ್ನು ತಾಯಿಯ ತಾಯಿ ತವರಾದ ಬೆಳ್ವಲದ ' ಅಣ್ಣಿಗೆರೆಯ ' ತವರೂರಲ್ಲಿ ಬೆಳೆದು, ಬನವಾಸಿ ಪ್ರದೇಶದಲ್ಲಿ ಸುತ್ತಾಡಿ ಬೆಳೆದು ಅಲ್ಲಿ ಮೈಗೂಡಿದ ಆ ಪ್ರಾಂತ್ಯದಲ್ಲಿನ ಆಡುನುಡಿಯಾಗಿದ್ದ ಪುಲಿಗೆರೆಯ ತಿರುಳ್ಗನ್ನಡ ವನ್ನೇ ರಕ್ತಗತವಾಗಿಸಿಕೊಂಡು ತನ್ನ ಪೂರ್ವಜರ ಸಂಸ್ಕಾರಯುತ ಪಾಂಡಿತ್ಯ , ಅಜ್ಜ -ಅಜ್ಜಿ ಮಾವಂದಿರಡಿ ಅರಿತು -ನುರಿತ ವನಾದನು.
- ಪಶ್ಚಿಮ ಚಾಲುಕ್ಯ ಅರಿಕೇಸರಿಯ ಆ ಸ್ಥಾನದಲ್ಲಿ ಕೃಷ್ಣಾರ್ಜುನರ ಸಖ್ಯದಂತೆ ಬೆಳೆದ ಆತ್ಮೀಯತೆಯಿಂದ , ತನ್ನನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ ಅರಿಕೇಸರಿಯನ್ನೇ ಅರ್ಜುನನಿಗೆ ಸಮೀಕರಿಸಿ , ಗಾಢಾನು ರಾಗವನ್ನು ಧಾರೆ ಎರೆದು , ವಿಕ್ರಮಾರ್ಜುನ ವಿಜಯ ಬರೆಯುತ್ತಾರೆ.
- ತಾನು ರಚಿಸಿದ ಪಾತ್ರಗಳಲ್ಲಿ ಕವಿ ಲೀನವಾಗಿ ಕವಿತೆಯೊಳಾಸೆಗೆಯ್ವ ಫಲ ಯಾವುದೊ ?.
- ಪೂಜೆ ನೆಗಳ್ತೆ ಲಾಭವೆಂಬಿವೆ ವಲಂ -
- ಎಂಬಂತೆ ಜಿನೇಂದ್ರ ಗಣಸ್ತುತಿಯಿಂದೆ ತಾಮೆ ಸಾರವೆ? ಎಂಬ ಶ್ರದ್ಧೆ ಅವನದು.
2) ರನ್ನ :
- ಬೆಳಗಾಂನ ಬಿಜಾಪುರಪ್ರಾಂತ್ಯದ ಭಾಗಕ್ಕೆ ಸೇರಿದ ಕೃಷ್ಣ - ಘಟಪ್ರಭಾ ನದಿಗಳು ಹರಿಯುತ್ತಿದ್ದ ಜಮುಖಂಡಿ ಪ್ರಾಂತ್ಯದ ಮುಧವೂಳಲು ಎಂಬ ಊರಿನಲ್ಲಿ ಕವಿ ಬಳೆಗಾರ ಕುಲದ ಜಿನವಲ್ಲಭೇಂದ್ರ - ಅಬ್ಬಲಬ್ಬೆಯರಲ್ಲಿ ಕ್ರಿ.ಶ.94 9ರಲ್ಲಿ ಜನಿಸಿದನು.
- ಬಂಕಾಪುರದಲ್ಲಿದ್ದ ವಿದ್ಯಾ ಕೇಂದ್ರಕ್ಕೆ ಬಂದು ಅಜಿತಸೇನಾಚಾರ್ಯರ ಬಳಿ ಜೈನಾಗಮ ಸಾಹಿತ್ಯ ಕುರಿತು ಓದಿಕೊಂಡ , ನಂತರ ಗಂಗ ಸಾಮ್ರಾಜ್ಯದ ಮಂತ್ರಿಯಾಗಿದ್ದ ಚಾವುಂಡರಾಯ ಮತ್ತು ರಾಜಮಾತೆ ಅತ್ತಿಮಬ್ಬೆಯರ ಬಳಿ ಉಪಕೃತನಾಗಿದ್ದುಕೊಂಡು ಆ ಸ್ಥಾನ ಕವಿಯಾಗಿದ್ದನು.
- ಪರಶುರಾಮ ಚರಿತ
- ಚಕ್ರೇಶ್ವರ ಚರಿತೆ
- ಸಾಹಸ ಭೀಮ ವಿಜಯ -
- ಅಜಿತ ಪುರಾಣ -
- ರನ್ನ ಕಂದ
ಬರೆದಿರುವುದಾಗಿ ಕವಿಯೇ ಹೇಳಿದ್ದಾನೆ.
- ಮೊದಲೆರಡು ಕೃತಿಗಳು ಉಪಲಬ್ಧವಿಲ್ಲ 'ಶಾಂತಿ' ಮತ್ತು ' ಜಕ್ಕಿ' ಎಂಬ ಇಬ್ಬರು ಮಡದಿಯರನ್ನು ಮದುವೆಯಾಗಿ ತನ್ನ ಮಕ್ಕಳಿಗೆ ಹೆಸರುಗಳನ್ನು ಚಾವುಂಡರಾಯ ಮತ್ತು ರಾಜಮಾತೆ ' ಅತ್ತಿಮಬ್ಬೆಯರ ' ಸ್ಮರಣೆಗೆ ಈ ಎರಡು ಹೆಸರುಗಳನ್ನು ತನ್ನ ಮಕ್ಕಳಿಗಿ ಇಟ್ಟು ಸಲಹುತ್ತಾನೆ.
- ಪಂಪನಂತೆ ಅದ್ವಿತೀಯನಲ್ಲದಿದ್ದರೂ
- ದ್ವಿತೀಯ ವರ್ಗದ ಮಹಾಕವಿ ಎನ್ನ ಲು ಅವಕಾಶವುಂಟು.
- ಸಾಹಸ ಭೀಮ ವಿಜಯದಲ್ಲಿ ಮಹಾಕಾವ್ಯದ ಲಕ್ಷಣಗಳಿದ್ದರೂ, ದೀರ್ಘತೆ ಸಾಲದೆಂದುದೇ . ದ್ವಿತೀಯ ವರ್ಗದ ಮಹಾಕವಿ ಎಂಬ ಅಭಿಪ್ರಾಯವನ್ನು ದೇ.ಜವರೇಗೌಡರು ಅಭಿಪ್ರಾಯ ಪಡುತ್ತಾರೆ.
- ಆದರೆ ಅವನಲ್ಲಿ ಪಂಪ ಮಹಾಕವಿಯ ಆತ್ಮಪ್ರತ್ಯಯವಿದೆ. ಹೇಗೆಂದರೆ,
- ಆದಿಪುರಾಣ ಮತ್ತು ಅಜಿತ ಪುರಾಣಗಳು ಮೂರು ಲೋಕಗಳಲ್ಲಿಯೂ ಹರಡಿದೆಯೆಂದು ಕವಿಗಳಲ್ಲಿ ತಾನು - ಮತ್ತು ಪಂಪ ಮಾತ್ರ ಪುಣ್ಯವಂತರೆಂದು ಕೃತಾರಾರ್ಥ ರೆಂದು 'ಸೊಬಗ ' ರೆಂದು ಹೇಳುವಲ್ಲಿ ಆತ್ಮಪ್ರಶಂಸೆಯ ಜೊತೆಗೆ ಪಂಪನ ಮೇಲಣ ಗೌರವವು ವ್ಯಕ್ತವಾಗುತ್ತದೆ.
- ಮಹಾ ಭಾರತದ ಯುದ್ಧದ ಕೊನೆಯ ಅರ್ಧ ದಿನದ ಭೀಮ ದುರ್ಯೋಧನರ ನಡುವೆ ನಡೆಯುವಸಂಗ್ರಾಮವು 10 ಅಶ್ವಾಸಗಳಲ್ಲಿ 13 ನೇ ಅಶ್ವಾಸದ ಕಥೆಯನ್ನು ತನ್ನ ಕೃತಿಗೆ ಬಳಸಿಕೊಂಡಿದ್ದಾನೆ.
- ಭಾಸ ಭಟ್ಟ ' 'ನಾರಾಯಣನ ' ಊರುಭಂಗ ' . ವೇಣಿ ಸಂಹಾರ ನಾಟಕಗಳ ಪ್ರಯೋಜನ ಪಡೆದುಕೊಂಡಿದ್ದಾರೆ. -
- "ಕಥೆಯಲ್ಲಿಮೀಗಧಾಯುದ್ಧದಳಂತೊಳಕೊಂಡತ್ತೆನೆ " . ಎಂದು ಸಾಹಸ ಭೀಮ ವಿಜಯವನ್ನು ಸಿಂಹಾವಲೋಕನ ಕ್ರಮದಿಂದ ರಚಿಸಿದ್ದಾನೆ.
- ಭೀಮ ದ್ರೌಪದಿಯರ ಸಂವಾದ, ಭೀಮನ ಉಗ್ರ ಪ್ರತಿಜ್ಞೆ, ದುರ್ಯೋಧನನ ರಣರಂಗ ಸಂಚಾರ,ದ್ರೋಣಾಶ್ವತ್ಥಾಮರ ವಾಗ್ವಾದ ಪಾಂಡವರ ಅವಹೇಳನ - ಸಂಜಯನಿಂದ ಪಾಂಡವರ ಪ್ರಶಂಸೆ ,ದೃತರಾಷ್ಟ್ರ ಗಾಂಧಾರಿಯ ಸಂತಾಪ ' ಅಲ್ಲದೆ '
- ಅಭಿಮನ್ಯು. ಕರ್ಣ ದುಶ್ಯಾಸನರ ಕುರಿತು ದುರ್ಯೋಧನನ ಕರುಳು ಕರಗಿಸುವ ಶೋಕ ಗೀತೆ .
- ದುರ್ಯೋಧನ ವೈಶಂಪಾಯನ ಸರೋವರ . ಪ್ರವೇಶ , ಆ ಸಂದರ್ಭದ ಗಾಂಭಿರ್ಯವಾದ ವರ್ಣನೆ
- ಅಶ್ವಥಾಮನ ಲಕ್ಷ್ಮಿ ವಿಡಂಬನೆ,
- ಭೀಮನ ಪಟ್ಟಾಭಿಷೇಕ ನಾಟಕೀಯತೆಯಲ್ಲಿ
- ಓಜೋನ್ವಿತ ಶೈಲಿಯಲ್ಲಿ ಈ ಕೃತಿಗೆ ಸರಿಗಟ್ಟುವ ಕಾವ್ಯಗಳು ವಿರಳ ವೆನ್ನಬಹುದು.
3) ಪೊನ್ನ:
- ಸಾ ಶ 9 39 - 968 ರಲ್ಲಿ ರಾಷ್ಟ್ರಕೂಟರ 3 ನೇ ಕೃಷ್ಣನ ಆಸ್ಥಾನದಲ್ಲಿ ಇದ್ದರು..ಆಂಧ್ರಪ್ರದೇಶದ ' ಕಮ್ಮನಾಡಿನ'ಪುಂಗನೂರಿನ ವೆಂಗಿ ಜಿಲ್ಲೆಯಲ್ಲಿ ಜನಿಸಿ ದರು.
- 'ಜೈನ 'ಧರ್ಮ ಸ್ವೀಕರಿಸಿದ ನಂತರ ಕುಬುರ್ಗಿಗೆ ವಲಸೆ ಬರುತ್ತಾನೆ.
ಸಾ ಶ . 939-968ರ ವರೆಗೂ ರಾಷ್ಟ್ರಕೂಟರ 3 ನೇ ಕೃಷ್ಣನ ಆಸ್ಥಾನದಲ್ಲಿ ಇದ್ದನು.
ಈಗಿನ ಆಂಧ್ರಪ್ರದೇಶದ ಕಮ್ಮ ನಾಡು, ಪುಂಗನೂರಿನ 'ವೆಂಗಿ 'ಜಿಲ್ಲೆಗೆ ಸೇರಿದೆ. ಜೈನ ಧರ್ಮ ಸ್ವೀಕರಿಸಿದ ನಂತರ ಕರ್ನಾಟಕದ ಕಲಬುರಗಿಗೆ ವಲಸೆ ಬರುತ್ತಾನೆ.
ಇವನು ರಚಿಸಿದ ಕೃತಿಗಳು
'ಜಿನಾಕ್ಷರಮಾಲೆ'
'ಭುವನೈಕ ರಾಮಾಭ್ಯುದಯ'
'ಶಾಂತಿ ಪುರಾಣ ' ಗಳನ್ನು ಬರೆದನು.
ಬಿರುದುಗಳು :
- ಸಂಸ್ಕೃತ ಮತ್ತು ಕನ್ನಡ ಎರಡೂ ಭಾಷೆಯ ಹಿಡಿತವಿದ್ದುದರಿ೦ದ ' ಉಭಯಕವಿ' ಮತ್ತು 'ಕವಿಚಕ್ರವರ್ತಿ' ಎಂಬ ಬಿರುದು ಹೊಂದಿದ್ದರು..
- ಇವನ ಶಾಂತಿ ಪುರಾಣವು ಚಂಪೂ ಶೈಲಿಯಲ್ಲಿ ಇದ್ದು 16ನೇ ಜೈನ ತೀರ್ಥಂಂಕರರ ಸ್ತೋತ್ರವಾಗಿದೆ.
- ಇದು 'ಆ ಸಗ' ನ ಮೂಲ ಕಾವ್ಯ ಆಧರಿಸಿ ಬರೆದಿದೆ.
- 3 ನೇ ಕೃಷ್ಣನ ಸಾಮಂತ ದೊರೆ ಶಂಕರ ಗಂಡ ನ ಸ್ತುತಿಸಿ ಬರೆದುದಾಗಿದೆ. -
- ಈ ರೀತಿ ಮೂರು ಜನ ರತ್ನತ್ರಯರು ಕನ್ನಡ ನಾಡಿನ ಕನ್ನಡ ಸಾಹಿತ್ಯದ ಶಾಸ್ತ್ರೀಯ ಯುಗದ ಪ್ರಮುಖರಾಗಿದ್ದಾರೆ. -
- ಹೆಚ್ಚಿನ ವಿಷಯ ಕ್ಕಾಗಿ - ಪ್ರೊ. ದೇ. ಜೆ . ಗೌಡ ರವರ "ಪೂರ್ವಕವಿಗಳಿಗೆ ನಮನ " ಕೃತಿ ಓದಿ
ಕೃಪೆ - ಗೂಗಲ್ ಮತ್ತು ಕೋರಾ (Quora) ದಿಂದ
No comments:
Post a Comment