Join Us on : WhatsApp | Mobile app

Showing posts with label kannada. Show all posts
Showing posts with label kannada. Show all posts

Monday, March 3, 2025

ದ. ರಾ. ಬೇಂದ್ರೆಯವರು ಯಾರು? ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳೇನು?

March 03, 2025 0
ದ. ರಾ. ಬೇಂದ್ರೆಯವರು ಯಾರು? ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆಗಳೇನು?

 ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಅಂದರೆ ಕನ್ನಡ ಸಾಹಿತ್ಯದ ನಿಜವಾದ ಸಾಕ್ಷಿ ಪ್ರಜ್ಞೆ.


ನಾನು, ನೀನು
ಆನು, ತಾನು
ನಾಕೆ ನಾಕು ತಂತಿ

ಅಂಬಿಕಾತನಯದತ್ತ ಕಾವ್ಯನಾಮದಿಂದ ಕನ್ನಡಿಗರ ಮನೆಮಾತಾಗಿರುವ ದತ್ತಾತ್ರೆಯ ರಾಮಚಂದ್ರ ಬೇಂದ್ರೆಯವರು 31ನೆ ಜನವರಿ 1896ರಂದು ಧಾರವಾಡದ ಪೋತನೀಸರ ಓಣಿಯಲ್ಲಿರುವ ಗುಣಾರಿಯವರ ಮನೆಯಲ್ಲಿ ಹುಟ್ಟಿದರು. ಅವರ ತಂದೆ ರಾಮಚಂದ್ರ ಪಂತರು. ತಾಯಿ ಅಂಬೂ ತಾಯಿ. ತಂದೆಯವರು ತೀರಿಕೊಂಡ ಮೇಲೆ ತನ್ನ ಇನ್ನೊಬ್ಬ ಚಿಕ್ಕಪ್ಪ ಬಂಡೋಪಂತರ ಆಶ್ರಯದಲ್ಲಿ ಬೇಂದ್ರೆಯವರ ಬಡಕುಟುಂಬ ಆಸರೆ ಪಡೆಯಿತು. ಚಿಕ್ಕಪ್ಪನ ಆಶ್ರಯದಲ್ಲಿಯೇ ಬಿ.ಎ. ವರೆಗಿನ ಅಭ್ಯಾಸ, ಪುಣೆಯ ಫರ್ಗೂಸನ್ ಕಾಲೇಜಿನಲ್ಲಿ ನಡೆಯಿತು.

ವಿಕ್ಟೋರಿಯಾ ಹೈಸ್ಕೂಲಿನಲ್ಲಿ ಮೂರು ವರ್ಷ, ಮುಂದೆ ರಾಷ್ಟ್ರೀಯ ಶಾಲೆಯಲ್ಲಿ ಉದ್ಯೋಗ, ತಮ್ಮ 28ನೆಯ ವಯಸ್ಸಿನಲ್ಲಿ ಮಾತೃವಿಯೋಗ, ಮಧ್ಯೆ ಸೊಂಡೂರು ಸಂಸ್ಥಾನದಲ್ಲೂ ಸ್ವಲ್ಪಕಾಲದ ನೌಕರಿ. ಒಂದು ವರ್ಷ ಅಲೆದಾಟ, 1925ರಿಂದ 1932ರವರೆಗೆ ವಿಕ್ಟೋರಿಯಾ ಹೈಸ್ಕೂಲಿನಲ್ಲಿ ವಿವಿಧ ಕ್ಷೇತ್ರಗಳ ದುಡಿಮೆ. ನರಬಲಿ ಕವನದ ಕಾರಣವಾಗಿ 3 ತಿಂಗಳು ಹಿಂಡಲಗಿ ಕಾರಾಗೃಹ ವಾಸ ಶಿಕ್ಷೆ. ಮತ್ತೆ ಅಲೆದಾಟ, 1935ರಿಂದ 1940ರವರೆಗೆ 5 ವರ್ಷಗಳ ಕಾಲ ನಿರುದ್ಯೋಗ. ಅನಂತರ ಅಣ್ಣ ಮಾಸ್ತಿ ಅವರ ಬೆಂಬಲದಿಂದ ‘ಜೀವನ’ ಪತ್ರಿಕೆಯ ಸಂಪಾದಕನೆಂಬ ಗೌರವ ವೃತ್ತಿ. ಒಂದು ವರ್ಷ ಗದಗಿನ ಚೌಹಾನ ಪ್ರೌಢಶಾಲೆಯಲ್ಲಿ ಶಿಕ್ಷಕ ವೃತ್ತಿ. ಮತ್ತೆ ಒಂದು ವರ್ಷ ಹುಬ್ಬಳ್ಳಿಯ ಇಂಗ್ಲಿಷ್ ಸ್ಕೂಲಿನಲ್ಲಿ ಅಲ್ಪಾವಧಿ ವೃತ್ತಿ. 1942-43ರಲ್ಲಿ ಪೂನಾದ ಕಾಮರ್ಸ್ ಕಾಲೇಜಿನಲ್ಲಿ ಅರ್ಧಕಾಲಿಕ ಕನ್ನಡ ಅಧ್ಯಾಪಕ ವೃತ್ತಿ. ಅನಂತರ 1944ರಲ್ಲಿ ಸೊಲ್ಲಾಪುರದ ಡಿ.ಎ.ವಿ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ವೃತ್ತಿ. ಸುಮಾರು 12ವರ್ಷಗಳ ಕಾಲ ಆ ಹುದ್ದೆಯಲ್ಲೇ ಇದ್ದ ಇವರಿಗೆ 60 ಆಯಿತೆಂದು ಅಲ್ಲಿ ನಿವೃತ್ತಿಯಾಯಿತು. 1956ರಲ್ಲಿ ಆಕಾಶವಾಣಿಯಲ್ಲಿ ಮೊದಲು ಪ್ರೊಡ್ಯೂಸರ್ ಆಗಿ, ಆಮೇಲೆ ಸಲಹೆಗಾರರಾಗಿ ಧಾರವಾಡದಲ್ಲಿ ಮತ್ತೆ ಒಂದು ಉದ್ಯೋಗ. ಸರ್ಕಾರಕ್ಕೆ ಆಕಾಶವಾಣಿಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ಪಿ.ಎಂ. ಲಾಡ್ ಅವರ ಮೂಲಕ ದೊರೆತ ಉದ್ಯೋಗ ಅದು. ಇಡೀ ಬದುಕಿನ ತುಂಬಾ ಉದ್ಯೋಗ ನಿರುದ್ಯೋಗಗಳ ಚೆಲ್ಲಾಟ. ಈ ಮಧ್ಯೆಯೂ ಧೃತಿಗೆಡದ ಕವಿಚೇತನ ಬೇಂದ್ರೆಯವರದು.

ಬೇಂದ್ರೆಯವರ ವಿವಾಹವಾದದ್ದು 1919ರಲ್ಲಿ, ಹುಬ್ಬಳ್ಳಿಯಲ್ಲಿ. ನರಗುಂದದಲ್ಲಿ ಸಾರ್ವಜನಿಕ ಸೇವಾ ಇಲಾಖೆಯಲ್ಲಿ ನೌಕರರಾಗಿದ್ದ ಶ್ರೀ ಜೋಗಳೇಕರ ವಾಸುದೇವರಾಯರ ಮಗಳಾದ ರಂಗೂತಾಯಿಯೇ ಇವರ ಮಡದಿ. ಬೇಂದ್ರೆ ಮನೆತನಕ್ಕೆ ಬಂದ ಮೇಲೆ ಅವರ ಹೆಸರು ಲಕ್ಷ್ಮೀಬಾಯಿ. ಲಕ್ಷ್ಮೀಬಾಯಿ ಹಾಗೂ ಬೇಂದ್ರೆಯವರ ಸಂಸಾರ ಕಂಡದ್ದು ಹೆಚ್ಚಾಗಿ ಕಷ್ಟದ ದಿನಗಳು. ಅದರಲ್ಲಿಯೂ ಹುಟ್ಟಿದ 9 ಮಕ್ಕಳಲ್ಲಿ 6 ಮಕ್ಕಳು ಕಣ್ಣ ಮುಂದೆಯೇ ಇಲ್ಲವಾಗಿ ಉಳಿದವರು 2 ಗಂಡು ಮಕ್ಕಳು (ವಾಮನ ಬೇಂದ್ರೆ ಮತ್ತು ಪಾಂಡುರಂಗ ಬೇಂದ್ರೆ) ಮತ್ತು ಒಬ್ಬಳು ಮಗಳು ಶ್ರೀಮತಿ ಮಂಗಳ. ಬಡತನದ ಕುಲುಮೆಯಲ್ಲಿ ಬೇಯುತ್ತಿದ್ದಂತೆಯೇ ಕರುಳ ಕುಡಿಗಳು ಕಣ್ಣಮುಂದೆ ಬಾಡಿಹೋದಾಗ ಆ ದುಃಖದ ಅನುಭವವನ್ನೂ ಎದೆಯಲ್ಲಿ ತುಂಬಿಕೊಂಡವರು ಅವರು.

ಇಷ್ಟಾದರೂ ಬೇಂದ್ರೆಯವರ ದೃಷ್ಟಿ ‘ಬಡತನ ಸಿರಿತನ ಕಡೇತನಕ ಉಳಿದಾವೇನ’ ಎಂಬುದು. ಅಲ್ಲದೆ ಅವರ ಕಾವ್ಯದ ಮೂಲದೃಷ್ಟಿ – ಎನ್ನಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ – ಎಂಬ ರಸಯೋಗಿಯ ಸಂಕಲ್ಪದಿಂದ ಪ್ರಚೋದಿತವಾದದ್ದು. ರಸವೆ ಜನನ ವಿರಸ ಮರಣ ಸಮರಸವೇ ಜೀವನ ಎಂದು ಬದುಕನ್ನು ಎದೆಗಪ್ಪಿಕೊಂಡು ಅರಳಿದ ಕಾವ್ಯಚೇತನ ಅವರದ್ದು.

ಬೇಂದ್ರೆ ಅಥವಾ ‘ಬೇನ್’ರೆ ಅಂದರೆ ದೇವಾಲಯಗಳಲ್ಲಿ ಋಕ್ ಮಂತ್ರಗಳನ್ನು ಪಠಿಸುವವರು ಎಂಬ ಅರ್ಥ ಇದೆಯಂತೆ. ಇವರ ಮೂಲ ವಂಶಜರು ಮಹಾರಾಷ್ಟ್ರದ ರತ್ನಗಿರಿಯಿಂದ ಬಂದು ಕರ್ನಾಟಕದ ಶಿರಹಟ್ಟಿಯಲ್ಲಿ ನೆಲೆಸಿದರು. ಇವರ ಮುತ್ತಜ್ಜ ರಾಮಭಟ್ಟ ಎಂಬುವರು ಕೊನೆಗೆ ಸಂನ್ಯಾಸ ದೀಕ್ಷೆ ಪಡೆದು ಸಮಾಧಿಸ್ತರಾದರೆ, ಬೇಂದ್ರೆಯವರ ಅಜ್ಜ ಅಪ್ಪಾಭಟ್ಟ ತಪಃಶಕ್ತಿಯ ಜೊತೆಗೆ ಕಾವ್ಯಶಕ್ತಿಯನ್ನೂ ಪಡೆದಿದ್ದರಂತೆ. ಇವರು ಸತ್ಯನಾರಾಯಣ ಕಥೆಯನ್ನು ರಚಿಸಿದ್ದರೆಂದು ಹೇಳುತ್ತಾರೆ.

ಬೇಂದ್ರೆಯವರ ಬದುಕಿನಲ್ಲಿ ಪ್ರಭಾವ ಬೀರಿದ ವ್ಯಕ್ತಿಗಳ ಹೆಸರುಗಳನ್ನು ಹೇಳುವುದು ಅಷ್ಟು ಸುಲಭದ ಮಾತಲ್ಲ. ಅಂಬೂ ತಾಯಿಯೇ ಅವರ ಬದುಕಿನ ಮೊದಲ ಪ್ರೇರಕ ಶಕ್ತಿ. ಅವರ ಸಂಕೇತವಾಗಿಯೇ ತಮ್ಮ ಕಾವ್ಯನಾಮವನ್ನು ಅಂಬಿಕಾತನಯದತ್ತ ಎಂದು ಮಾಡಿಕೊಂಡರು. ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಗೀತೆಯ ಕವಿ ಹುಯಿಲಗೋಳ ನಾರಾಯಣರಾಯರು ಇವರ ಶಿಕ್ಷಕ ವರ್ಗದಲ್ಲಿ ಒಬ್ಬರಾಗಿದ್ದರು. ಇನ್ನೊಬ್ಬ ಮಹತ್ವದ ವ್ಯಕ್ತಿಯೆಂದರೆ ಪುಣೆಯ ಫರ್ಗೂಸನ್ ಕಾಲೇಜಿನ ಆಂಗ್ಲಭಾಷೆಯ ಪ್ರಾಧ್ಯಾಪಕರಾದ ಪಟವರ್ಧನ ಅವರು. ಬಾಲ್ಯದುದ್ದಕ್ಕೂ ಆಸರೆಯಾಗಿದ್ದವರು ಅವರ ಕಕ್ಕ ಬಂಡೋಪಂತರು. ಅಧ್ಯಯನ ಬೇಂದ್ರೆಯವರ ಬದುಕಿನ ಒಂದು ಅವಿಭಾಜ್ಯ ಅಂಗ. ಸಂಸ್ಕೃತ, ಕನ್ನಡ, ಇಂಗ್ಲಿಷ್ ಹಾಗೂ ಮರಾಠಿ ಸಾಹಿತ್ಯಗಳನ್ನು ಅಧ್ಯಯನ ಮಾಡಿದವರು ಅವರು. ಎಲ್ಲಕ್ಕಿಂತ ಅತಿ ಮುಖ್ಯವಾದ ವಿಷಯ ಎಂದರೆ ಇವರ ಬದುಕು ಮರಾಠಿ, ಕನ್ನಡ ದ್ವಿಭಾಷಾ ವಾತಾವರಣದಲ್ಲಿದ್ದುದು. ಕನ್ನಡದಲ್ಲಿ ಇಂಥ ದ್ವಿಭಾಷಾ, ದ್ವಿಸಂಸ್ಕೃತಿಗಳ ವಾತಾವರಣದಲ್ಲಿ ಮಾಸ್ತಿ, ಡಿ.ವಿ.ಜಿ., ಪು.ತಿ.ನ ಅವರೂ ಇದ್ದವರೇ ಎಂದರೂ ಬೇಂದ್ರೆಯವರ ಕಾವ್ಯದಲ್ಲಿ ಮರಾಠಿ, ಕನ್ನಡ ಭಾಷಾ ಸಂಸ್ಕೃತಿಗಳ ಸಂಗಮದ ಫಲಸಮೃದ್ಧಿಯನ್ನು ಕಾಣಬಹುದಾಗಿದೆ. ಮರಾಠಿಯ ಜ್ಞಾನೇಶ್ವರಿ, ರಾಮಾಯಣ, ಮಹಾಭಾರತ, ಭಾಗವತ, ವಚನಗಳು, ಕೀರ್ತನ ಸಾಹಿತ್ಯ, ತತ್ವಜ್ಞಾನ, ಸಂಖ್ಯಾಶಾಸ್ತ್ರ, ಖಗೋಳಶಾಸ್ತ್ರ, ಜೋತಿಷ್ಯ ಶಾಸ್ತ್ರ, ಕಾವ್ಯಮೀಮಾಂಸೆ, ಅಲಂಕಾರ, ಉಪನಿಷತ್ತು, ಪಾಣಿನಿಯ ವ್ಯಾಕರಣ, ಕನ್ನಡ ಸಾಹಿತ್ಯ-ಹೀಗೆ ಬಹು ಮುಖ್ಯವಾದ ಅಧ್ಯಯನದಿಂದ ಸಮೃದ್ಧಗೊಂಡ ಚೇತನ ಬೇಂದ್ರೆಯವರದು. ವಿಶ್ವದ ಮಹಾಕವಿಗಳು, ಹಾಗೆಯೇ ಖಲಿಲ್ ಜಿಬ್ರಾನ್, ಜಾರ್ಜ್ ರಸೆಲ್, ಜೆ. ಕೃಷ್ಣಮೂರ್ತಿ, ಅರವಿಂದರು, ಸ್ವಾಮಿ ರಾಮದಾಸ್, ಮಾರಿಸ್ ಮೇಟರ್ಲಿಂಕ್ ಇಂಥ ದಾರ್ಶನಿಕರ ಅನುಭವ ಚಿಂತನ ಸಮುದ್ರಗಳನ್ನು ಕುಡಿದ ಅಗಸ್ತ್ಯ ಇವರು. ಇಂಗ್ಲಿಷ್, ಕನ್ನಡ ಸಂಸ್ಕೃತ ಮತ್ತು ಮರಾಠಿ ಸಾಹಿತ್ಯಗಳ ಅತ್ಯಂತ ಆತ್ಮೀಯವಾದ ಒಡನಾಟ ಪಡೆದಿದ್ದ ಈ ವ್ಯಕ್ತಿತ್ವದಲ್ಲಿ ಎರಡು ಭಾಷಾ ಸಂಸ್ಕೃತಿಗಳ ಸಂಗಮವಾಗಿದ್ದಂತೆಯೇ ನಗರ ಹಾಗೂ ಜಾನಪದ ಸಂಸ್ಕೃತಿಗಳು ಸಂಗಮಗೊಂಡಿದ್ದವು.

ಅವರ ಮೊದಲನೇ ಕವನ ಸಂಕಲನವಾದ ‘ಗರಿ’ಯಲ್ಲಿ “ಕನ್ನಡದ ಅಶರೀರವಾಣಿಯು ಸಾವಿರ ಬಾಯಿಗಳಿಂದ ತನ್ನ ಕನಸನ್ನು ಕನ್ನಡಿಸುತ್ತಿದೆ. ಆ ಸಾವಿರ ಬಾಯಿಗಳಲ್ಲಿ ನನ್ನದೊಂದು. ಅದೇ ನನ್ನ ಧನ್ಯತೆ” ಎಂದು ಸಹೃದಯರಿಗೆ ನಿವೇದಿಸಿಕೊಳ್ಳುವ ಮಾತು ಬೇಂದ್ರೆಯವರ ಪ್ರತಿಭೆಯ ದ್ಯೋತಕವಾಗಿದೆ. ಹೀಗಾದುದರಿಂದಲೇ ಕನ್ನಡದ ಎಲ್ಲ ಒಳ್ಳೆಯ ಕಾವ್ಯವು ತನ್ನದೇ ಎನ್ನುವ ನಿರ್ಮತ್ಸರದ ಅಭಿಮಾನ ತಾನೇ ತಾನಾಗಿ ಮೂಡಿತು. ‘ಗೆಳೆಯರ ಬಳಗ’ ಎಂಬ ವಿ.ಕೃ. ಗೋಕಾಕ, ಬೆಟಗೇರಿ ಕೃಷ್ಣಶರ್ಮ, ಮಧುರಚೆನ್ನ, ರಂ. ಶ್ರೀ ಮುಗಳಿಯಂಥ ಕವಿಗಳ ಬಳಗವನ್ನೇ ಕಟ್ಟಿದರು. ಆ ಗುಂಪು ಕರ್ನಾಟಕದ ಸಾಂಸ್ಕೃತಿಕ ಹಾಗೂ ಸಾಹಿತ್ಯಕ ಇತಿಹಾಸದ ಒಂದು ಜೀವಂತ ಭಾಗವಾಗಿ ಉಳಿದಿದ್ದಷ್ಟೇ ಅಲ್ಲ ಕವಿಗೆ ಕವಿ ಮುನಿವ ಎಂಬ ಗಾದೆಯನ್ನು ಸುಳ್ಳಾಗಿಸಿತು. ಅದಕ್ಕಿಂತ ಮುಖ್ಯವಾದ ಮಾತು ಎಂದರೆ ಕನ್ನಡದ ತಮ್ಮ ಸಮಕಾಲೀನ ಕವಿಗಳನ್ನು ಕುರಿತ ಅವರ ಧೋರಣೆ. ಯುಗದ ಕವಿಗೆ, ಜಗದ ಕವಿಗೆ ನಮಸ್ಕಾರ ಎಂದು ಕುವೆಂಪು ಅವರನ್ನು ಅಭಿನಂದಿಸುತ್ತ ಅವರ ಚಿತ್ರಾಂಗದಾ ಕಾವ್ಯವನ್ನು ಕುರಿತು ಹೇಳುವಾಗ ಹಿಂದಿನ ಮಹಾಕಾವ್ಯವನ್ನು ಮೀರಿಸಲಿದೆ ಎಂದು ಅಭಿಮಾನಪಟ್ಟಿದ್ದು ಬೇಂದ್ರೆಯವರ ಮುಕ್ತ ಪ್ರಶಂಸೆಯ ಕವಿಹೃದಯವನ್ನು ಪರಿಚಯಿಸುತ್ತದೆ. ಬೇಂದ್ರೆಯವರ ಸನಿಹಕ್ಕೆ ಹೋದ ಹೆಚ್ಚು ಕನ್ನಡ ಕವಿಗಳ ಭಾವನೆ ಇದೇ ತೆರನಾದದ್ದಾಗಿದೆ.

ರಸ ಋಷಿ, ಶ್ರೇಷ್ಠ ಕವಿ ಹೀಗೆ ಬಹುವಿಧವಾಗಿ ರಸಿಕರಿಂದ ಗೌರವಿಸಲ್ಪಟ್ಟ ಬೇಂದ್ರೆಯವರ ಕಾವ್ಯ ಕನ್ನಡ ಭಾಷೆ ಹಾಗೂ ಸಾಹಿತ್ಯಗಳನ್ನು ಶ್ರೀಮಂತಗೊಳಿಸಿದೆ. ಬೆಳಗು, ರಾಗರತಿ, ಶ್ರಾವಣ, ಯುಗಾದಿ, ಸಣ್ಣ ಸೋಮವಾರ, ಹಕ್ಕಿ ಹಾರುತಿದೆ ನೋಡಿದಿರಾ, ಪಾತರಗಿತ್ತಿ ಪಕ್ಕ, ಹೋತದ ಹುಣಸಿ, ಶ್ರಾವಣ ವೈಭವ, ಚಿತ್ತಿಯ ಮಳೆಯ ಸಂಜೆ ಇಂಥ ನಿಸರ್ಗವನ್ನು ಕುರಿತ ಕವಿತೆಗಳಾಗಲಿ; ಮಾಯಾಕಿನ್ನರಿ, ಹುಬ್ಬಳ್ಳಿಯಾಂವಾ, ಮನಸುಖರಾಯನ ಮಗಳು ಇಂತಹ ಮಾಂತ್ರಿಕ ಕವಿತೆಗಳಾಗಲಿ; ಪುಟ್ಟ ವಿಧವೆ, ನರಬಲಿ, ತುತ್ತಿನಚೀಲ, 33 ಕೋಟಿ, ಕನಸಿನೊಳಗೊಂದು ಕನಸು ಇಂಥ ಸಾಮಾಜಿಕ ಕವಿತೆಗಳಾಗಲಿ; ಕೇಳಿರೊಂದು ಸೋಜಿಗದಂಥ ಬದುಕಿನ ಗಹನತೆಯ ಕಡೆಗೆ ಮನಸೆಳೆಯುವ ಕವಿತೆಯಾಗಲಿ; ಗೆಳೆಯ ಶಂಕರದೇವ, ಗುರುದೇವರಂಥ ವ್ಯಕ್ತಿತ್ವಗಳನ್ನು ಕುರಿತು ಬರೆದ ಕವಿತೆಗಳಾಗಲಿ; ಅನಂತ ಪ್ರಣಯ, ಪ್ರೀತಿ ಇಂಥ ಪ್ರೇಮದ ವಿವಿಧ ಮುಖಗಳನ್ನು ಕುರಿತ ಕವಿತೆಗಳಾಗಲಿ ಬೇಂದ್ರೆಯವರ ಕವಿತೆ ತನ್ನ ಸಾಚಾತನದಿಂದ ಮೆರೆಯುತ್ತದೆ.

ಬೇಂದ್ರೆಯವರ ಕಾವ್ಯದ ಮತ್ತೊಂದು ವೈಶಿಷ್ಟ್ಯ ಎಂದರೆ ಬದುಕೇ ಕಾವ್ಯವಾಗುತ್ತ ಹೋಗುವ ಪವಾಡಸದೃಶ ಶಕ್ತಿ. ನೀ ಹಿಂಗ ನೋಡಬ್ಯಾಡ ನನ್ನ, ನಾನೊಂದು ನೆನೆದರೆ, ಸಖೀಗೀತ, ನಾದ ಲೀಲೆ, ಪಾಡು, ಹೋದ ಬುಧವಾರ – ಇಂಥ ಕವಿತೆಗಳು ಅವರ ಬದುಕಿಗೆ ತೀವ್ರವಾದ ಆಘಾತವುಂಟು ಮಾಡಿದ ಮಗನ ಸಾವು, ಸಂಸಾರದ ವಿರಸ, ತನ್ನ ಬದುಕಿನ ಕಥೆ-ವ್ಯಥೆಗಳು, ಮಡದಿ ತನ್ನನ್ನು ಬಿಟ್ಟು ಹೋದದ್ದು, ಇಂಥ ಘಟನೆಗಳಿಂದ ಮೂಡಿದವುಗಳಾಗಿವೆ. ಬದುಕೇ ಕಾವ್ಯವಾಗುವ ಸಹಜ ಕವಿ ಹೃದಯವನ್ನು ಇಂಥ ಕಡೆ ಗುರುತಿಸಬಹುದು. ಬದುಕಿಗೆ ತೀವ್ರವಾಗಿ ಸ್ಪಂದಿಸುವ ಕವಿಚೇತನವಾದದ್ದರಿಂದಲೇ ಭೃಂಗದ ಬೆನ್ನೇರಿ ಬಂತು ಕಲ್ಪನಾ ವಿಲಾಸ, ಪಾತರಗಿತ್ತಿ ಪಕ್ಕಗಳ ವೈಭವಗಳನ್ನು ನವಿಲು ಗರಿಗೆದರಿದಂತೆ ಮೈತೆರೆಯುತ್ತಾ ಹೋಗುತ್ತದೆ. ಶ್ರಾವಣವಾಗಲಿ, ಧಾರವಾಡದ ಚೆಲುವಾಗಲಿ ಬದುಕಿನ ಕಾವ್ಯ ಅಥವಾ ಸುಂದರ ಮುಖವಾಗಲೀ ಈ ಪ್ರತಿಭೆಗೆ ಸದಾ ಆಹ್ವಾನವಾಗಿರುತ್ತದೆ. ಕನ್ನಡದಲ್ಲಿ ಬೇಂದ್ರೆಯವರಷ್ಟು ವಿಫುಲವಾಗಿ ಹಾಗೂ ಕಾವ್ಯಮಯವಾಗಿ ಕೌಟುಂಬಿಕ ಗೀತೆಗಳನ್ನು ರಚಿಸಿದ ಕವಿಯನ್ನು ಕಾಣುವುದು ಕಷ್ಟ. ಗಂಡು ಹೆಣ್ಣಿನ ಪ್ರೀತಿ ಹಾಗೂ ವಿರಸ ವಿಕೋಪಗಳನ್ನು ತುಂಬಾ ಕಾವ್ಯಮಯವಾಗಿಸಿದ ಪ್ರತಿಭೆ ಇವರದ್ದು.

ಬೇಂದ್ರೆಯವರ 27ಕವನ ಸಂಕಲನಗಳು ಪ್ರಕಟವಾಗಿವೆ. ಈ ಕವನ ಸಂಕಲನಗಳನ್ನು ಅವಲೋಕಿಸಿದಾಗ ಬದುಕನ್ನು ಅದರ ಆಳ, ವಿಸ್ತಾರ ಹಾಗೂ ವೈವಿಧ್ಯದಲ್ಲಿ ಕಂಡಿರಿಸಿದ ಮಹಾ ಪ್ರತಿಭೆಯೊಂದು ನಮಗೆದುರಾಗುತ್ತದೆ. ವಚನ ಪರಂಪರೆಯಲ್ಲಿ ರಚಿತವಾದ ವಿನೂತನ ಕಾಂತಿಯ ಕರುಳಿನ ವಚನಗಳು, ಮಾಂತ್ರಿಕತೆಯಿಂದ ಕಳಕಳಿಸುವ ಸುನೀತಗಳು ಅಲ್ಲದೆ ಕನ್ನಡದ ಅನುಭಾವ ಪರಂಪರೆಯನ್ನು ಮುಂದುವರೆಸಿರುವುದು ಬೇಂದ್ರೆಯವರ ವೈಶಿಷ್ಟ್ಯವಾಗಿದೆ. ಬೆಳಗು ರೀತಿಯ ನಿಸರ್ಗ ಗೀತೆಯಿಂದ ಆರಂಭಿಸಿದ ಜೋಗಿ, ಓಂ ಸಚ್ಚಿದಾನಂದ ಇಂಥ ಕವಿತೆಗಳವರೆಗೆ ಇದರ ಹರವಿದೆ. ಕನ್ನಡದ ಪರಂಪರೆಯನ್ನು ಹಾಡಿ ಕರ್ನಾಟಕದ ಏಕೀಕರಣದ ಸಂಘಟನೆಯನ್ನು ಇವರ ಕಾವ್ಯ ನಡೆಸಿದ ರೀತಿ ಮುಖ್ಯವಾದದ್ದು. ಮಾನವನನ್ನು ಸದಾ ಕಾಡುವ ಹಸಿವು, ಬಡತನಗಳು ಕೂಡ ಅನ್ನದೇವರು, ಅನ್ನಬ್ರಹ್ಮದ ದೇಗುಲದಲ್ಲಿ ಇಂಥ ಕವಿತೆಗಳಿಗೆ ಕಾರಣವಾಗಿವೆ. ಬಂಗಾಳದಲ್ಲಿ ನಡೆದ ಮಾರಣ ಹೋಮವನ್ನು ಕುರಿತು ಬರೆದ ‘ನರಬಲಿ’ ಕವಿಯನ್ನು ಅಂದಿನ ಸರ್ಕಾರದ ಕೋಪಕ್ಕೂ ಗುರಿಯಾಗಿಸಿ ಸೆರೆಮನೆಗೆ ತಳ್ಳಿದ್ದು ಐತಿಹಾಸಿಕ ಘಟನೆ. ಬದುಕಿನ ಬಡತನ, ಕಷ್ಟ-ಕಾರ್ಪಣ್ಯದ ಮಧ್ಯೆಯೂ ನಿಸರ್ಗದ ಹಾಗೂ ಬದುಕಿನ ಸೌಂದರ್ಯವನ್ನು ಬೊಗಸೆ ಬೊಗಸೆಯಾಗಿ ಸವಿದ, ಹಾಗೆಯೇ ಬದುಕಿದ ಧೀಮಂತ ಪ್ರತಿಭೆ ಬೇಂದ್ರೆಯವರದು. ನಾದದ ನದಿಯೊಳು ಮಿಂದಾಗ ಸೂಜಿ ಹಿಂದ ದಾರದಾಂಗ ಇಂಥ ಅತ್ಯುತ್ತಮವಾದ ಅನೇಕ ಕಾವ್ಯಪಂಕ್ತಿಗಳನ್ನು ಬೇಂದ್ರೆಯವರ ಕಾವ್ಯದ ತುಂಬಾ ಕಾಣಬಹುದು. ಅದಕ್ಕೆ ಕಾರಣ ಈ ಪ್ರತಿಭೆ ವಿಶೇಷವಾಗಿ ರೂಪಕಗಳ ಮೂಲಕವೇ ಕ್ರಿಯಾತ್ಮಕವಾಗತೊಡಗುವುದು. ಉದಾಹರಣೆಗೆ ಅತ್ಯಂತ ಸರಳ ಎಂಬಂತೆ ಕಾಣುವ ಬಡವ ಬಡವಿ ಕವನವನ್ನೇ ನೋಡಬಹುದು.

ಜೋಗಿಯಂಥ ಹೆಚ್ಚು ಸಂಕೀರ್ಣವೂ, ಕಿಂಚಿದ್ ಸ್ಪಷ್ಟವೂ ಹಾಗೂ ಅಧ್ಯಾತ್ಮಿಕವೂ ಆದ ಕವಿತೆಯನ್ನು ಬಿಟ್ಟು ಇಡೀ ಸಂಜೆಯೇ ಒಬ್ಬ ಸುಂದರ ಪ್ರಣಯಿನಿಯಾಗಿ ಎದ್ದು ಮೂಡಿಬರುವಂತೆ ಚಿತ್ರಿತವಾಗಿರುವ ಮಾಂತ್ರಿಕವಾದ, ರಾಗರತಿಯಂಥ ಕವಿತೆಯನ್ನು ಬಿಟ್ಟು ಸರಳವೂ, ಸಹಜವೂ ಆದರೆ ಬೇಂದ್ರೆಯವರ ಕಾವ್ಯ ಪಡೆಯುವ ಸಾರ್ಥಕ್ಯದ ರೀತಿಯನ್ನು ವ್ಯಂಜಿಸುವಂಥದ್ದು ಆಗಿದೆ ‘ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು ಎಂದು ಸುಂದರವಾಗಿ ಮೂಡುವ’ ಬಡವ ಬಡವಿ ಕವನ. ಬೇಂದ್ರೆಯವರು ಅನೇಕ ಕವಿತೆಗಳನ್ನು ಅನುವಾದಿಸಿದ್ದಾರೆ. ಅವುಗಳಲ್ಲಿ ನಮ್ಮ ಕೊನೆಯ ಶರಣು ಹಾಗೂ ಮೇಘದೂತ ಕವಿತೆಗಳು ಅನುವಾದಗಳು. ಅರವಿಂದರ ಸಾವಿತ್ರಿಯನ್ನು ಮತ್ತೆ ಕೆಲವು ಕವಿತೆಗಳನ್ನು ಬೇಂದ್ರೆಯವರು ಅನುವಾದಿಸಿದ್ದಾರೆ. ಅದರಲ್ಲಿ ಬಂಗಾರದ ಹುಡುಗನಂಥ ಕವಿತೆಗಳು ಸ್ವತಂತ್ರ ಕವನವೆಂಬಂತೆ ಗಮನಾರ್ಹವಾಗಿವೆ.

ಭಾಷಣ ಹಾಗೂ ಕಾವ್ಯವಾಚನದಲ್ಲಂತೂ ಬೇಂದ್ರೆಯವರದು ಅಸದೃಶವಾದ ಸೃಜನಶೀಲ ಪ್ರತಿಭೆ. ನಾವು ಓದುವ ಕವಿತೆಯಷ್ಟೇ ಅಲ್ಲದೆ ಕವಿಗೋಷ್ಠಿಯಲ್ಲಿ ಭಾಗವಹಿಸುವ ಎಲ್ಲರೂ ಕವಿತೆಯನ್ನು ಸಹೃದಯನ ಹೃದಯಕ್ಕೆ ಮುಟ್ಟಿಸಬೇಕೆಂಬುದು ಅವರ ಸದಾಗ್ರಹ. ವಾಸ್ತವವಾಗಿ ಬೇಂದ್ರೆಯವರ ವ್ಯಕ್ತಿತ್ವ ಕನ್ನಡಿಗರ ಮೇಲೆ ಪ್ರಭಾವ ಬೀರಿದ್ದೆ ಅವರ ಕಾವ್ಯದ ವಾಚನದ ಮೂಲಕ ಎನ್ನಬಹುದು. 1929ರ ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಹಕ್ಕಿ ಹಾರುತಿದೆ ನೋಡಿದಿರಾ ಕವನವನ್ನು ಓದಿದಾಗ ವಾರಿ ರುಮಾಲು ಸುತ್ತಿದ್ದ ಬೇಂದ್ರೆಯವರ ಗಾರುಡಿಗ ವ್ಯಕ್ತಿತ್ವ ಮಾಸ್ತಿಯಂಥವರನ್ನೂ ಬೆರಗುಗೊಳಿಸಿತು. ಇಡೀ ಸಭೆಯ ಎದುರಿಗೆ ಕಾಲ ಪಕ್ಷಿ ಹಾರಿಹೋದ ಅದ್ಭುತ ಅನುಭವವನ್ನು ಸೃಷ್ಟಿಸಿದ ಕಾವ್ಯ ವಾಚನದ ಮಾಂತ್ರಿಕ ಕ್ರಿಯೆ ಅಂದು ನಡೆದುಹೋಯಿತು. ಇದಲ್ಲದೆ 1943ರಲ್ಲಿ ಶಿವಮೊಗ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಭಾಷಣ ಮಾಡುತ್ತಾ ಬೇಂದ್ರೆ ವಾಚಿಸಿದ್ದ ಗಂಗಾವತರಣ ಕವಿತೆಯ ಅನುಭವ ಎಂಥ ರೋಮಾಂಚನಕರವಾದುದೆಂಬುದನ್ನು ಅನೇಕ ಹಿರಿಯರು ಬಹು ಹಿಗ್ಗಿನಿಂದ ನೆನೆಯುತ್ತಿದ್ದರು.

ಬೇಂದ್ರೆಯವರು 14 ನಾಟಕವನ್ನು ಬರೆದಿದ್ದಾರೆ. 10 ವಿಮರ್ಶಾ ಗ್ರಂಥಗಳನ್ನು ಬರೆದಿದ್ದಾರೆ. ಇದಲ್ಲದೆ ಬೇಂದ್ರೆಯವರು ಮರಾಠಿಯಲ್ಲೂ ಕೆಲವು ಅಮೂಲ್ಯ ಗ್ರಂಥಗಳನ್ನು ರಚಿಸಿದ್ದಾರೆ. ಹಲವು ಗ್ರಂಥಗಳನ್ನು ಅನುವಾದಿಸಿದ್ದಾರೆ.

ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ, ‘ಅರಳು ಮರಳು’ ಕವನ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಗೌರವ, ಕೇಂದ್ರ ಸರ್ಕಾರದ ಪದ್ಮಶ್ರೀ, ಹಲವು ವಿಶ್ವವಿದ್ಯಾಲಯಗಳ ಡಾಕ್ಟರೇಟ್, ಕೇಂದ್ರ ಸಾಹಿತ್ಯ ಅಕಾಡೆಮಿ ಫೆಲೋಶಿಪ್, ‘ನಾಕು ತಂತಿ’ ಕವನ ಸಂಕಲನಕ್ಕೆ ಭಾರತದ ಅತ್ಯುಚ್ಚ ಸಾಹಿತ್ಯ ಪ್ರಶಸ್ತಿ ‘ಜ್ಞಾನಪೀಠ ಪ್ರಶಸ್ತಿ’ ದೊರಕಿತು. ಎಲ್ಲಕ್ಕಿಂತ ಹೆಚ್ಚಿನದು ಎಂದರೆ ಕರ್ನಾಟಕದಲ್ಲಿ ಬೇಂದ್ರೆಯವರನ್ನು ಕರೆದು ಸತ್ಕರಿಸದ ಊರೇ ಇಲ್ಲ ಎಂಬುದು. ಬೇಂದ್ರೆಯವರು ಅಕ್ಟೋಬರ್ 26, 1981ರ ದೀಪಾವಳಿಯಂದು ಕೀರ್ತಿಶೇಷರಾದರು. ಈ ಮಹಾನ್ ಕಾವ್ಯಗಾರುಡಿಗ ಚೇತನಕ್ಕೆ ನಮ್ಮ ಸಾಷ್ಟಾಂಗ ನಮನ.

ಆಧಾರ: ಈ ಲೇಖನವು ಡಾ. ಜಿ.ಎಸ್. ಸಿದ್ಧಲಿಂಗಯ್ಯ ಅವರು ದ.ರಾ. ಬೇಂದ್ರೆಯವರ ಕುರಿತು ಬರೆದಿರುವ ಲೇಖನವನ್ನು ಆಧರಿಸಿದೆ.

Saturday, January 11, 2025

ಕನ್ನಡ ಗಾದೆಗಳು

January 11, 2025 0

 


  • ಕುಂಬಾರನ ಮಗಳು ಲಾಭ ಬಂದ ಹೊರತು ಮಡಿಕೆ ಒಡೆಯುವುದಿಲ್ಲ.
  • ಕಾಗೆಗೆ ಯಜಮಾನನ ಸ್ಥಾನ ಕೊಟ್ಟರೆ ಮನೆ ತುಂಬಾ ಪಿಷ್ಟ.
  • ಇತರರ ಕಣ್ಣಿನ ಕಸ ಕಾಣುವುದು, ತನ್ನ ಕಣ್ಣಿನ ಕಸ ಕಾಣುವುದಿಲ್ಲ.
  • ತನ್ನ ಮೊಸರನ್ನು ಯಾರೂ ಹುಳಿ ಅನ್ನುವುದಿಲ್ಲ.
  • ನಾನು ಅಗೆಯುವಲ್ಲಿ ಕಲ್ಲು, ಅಜ್ಜ ಅಗೆಯುವಲ್ಲಿ ಮಣ್ಣು.
  • ದಡ್ಡ ಮನುಷ್ಯ ನೆಲಕ್ಕೆ ಭಾರ, ಅನ್ನಕ್ಕೆ ಖಾರ.
  • ದಡ್ಡನಿಗೆ ಹಗಲು ಕಳೆಯುವುದಿಲ್ಲ, ಒಳ್ಳೆಯವನಿಗೆ ರಾತ್ರಿ ಸಾಲುವುದಿಲ್ಲ.
  • ಹುಲಿಯ ಬಣ್ಣವನ್ನು ಮೆಚ್ಚಿ, ನರಿ ತನ್ನ ಕೂದಲನ್ನು ಭಸ್ಮ ಮಾಡಿಕೊಂಡಂತೆ.
  • ಬಾಯಲೆಲ್ಲಾ ವೇದಾಂತ, ಮಾಡುವುದೆಲ್ಲಾ ರಾದ್ಧಾಂತ.
  • ತಿನ್ನಲು, ಉಣ್ಣಲು ಇದ್ದರೆ ಯಾವತ್ತೂ ನೆಂಟರು.
  • ಶರೀರಕ್ಕೆ ಸುಖ, ಹೊಟ್ಟೆಗೆ ದುಃಖ.
  • ನೂರಾರು ರೋಗಿಗಳನ್ನು ಕೊಂದು ಒಬ್ಬ ವೈದ್ಯ ಆದಂತೆ !
  • ವಿವಿಧ ರೋಗಗಳಿಗೆ ಮದ್ದಿವೆ, ಹೊಟ್ಟೆ ಉರಿಗೆ ಮದ್ದಿಲ್ಲ.
  • ಅಡಿಕೆಕಾಯಿಯನ್ನು ಚೀಲದೊಳಗೆ ಹಾಕಬಹುದು, ಮರ ಆದ ನಂತರ ಹಾಕಬಹುದೇ?
  • ಲಾಭ ನೋಡಿ ಬಾಳೆ ಹಣ್ಣು ತಿಂದಂತೆ.
  • ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು.
  • ಹತ್ತು ಮಕ್ಕಳ ತಾಯಿ ದಾರಿಯಲ್ಲಿ ಸಿಕ್ಕಿದ್ದನ್ನು ತಿಂದಂತೆ.
  • ತಾಯಿಯನ್ನು ಹೊಡೆಯಬಾರದು, ಗುಬ್ಬಿಯ ಗೂಡನ್ನು ತೆಗೆಯಬಾರದು.
  • ನಾಯಿಯು ನಮ್ಮನ್ನು ಕಚ್ಚಿದರೆ ನಾಯಿಯನ್ನು ಕಚ್ಚಲು ನಮ್ಮಿಂದ ಆಗುವುದೇ?
  • ಬೆಲ್ಲ ಇದ್ದಲ್ಲಿ ನೊಣ ತಿರುಗಾಡಿದಂತೆ.
  • ಹುಣಸೆ ಹುಳಿಯೆಂದು ಅಂಬಡೆ ತಿಂದ ಹಾಗೆ.
  • ಮೃತ್ಯು ಬಂದ ಮೇಲೆ ವೈದ್ಯ ಬಂದ.
  • ಶಸ್ತ್ರದಿಂದಾದ ಗಾಯ ಮಾಯುತ್ತದೆ, ನಾಲಿಗೆಯಿಂದಾದ ಗಾಯ ಮಾಯುವುದಿಲ್ಲ.
  • ಚರ್ಮ ಹೋದರೂ ಪರವಾಗಿಲ್ಲ, ಕಾಸು ಹೋಗಬಾರದು ಎಂದಂತೆ.
  • ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ಹೇಳಿದ ಹಾಗೆ.
  • ರಾವಣನ ಮಾತಿಗೆ ಮನಸೋತವ, ರಾಮನ ಮಾತಿಗೆ ಜಾಣನಾಗುವನೇ?
  • ಮನೆಯೆಂಬ ಮರ ಮುರಿಯಬಾರದು, ಮನಸ್ಸೆಂಬ ಮಾರ್ಗ ಕತ್ತರಿಸಬಾರದು.
  • ದುಷ್ಟರ ಸಂಗದಿ ನೆರಳು ಕೊಯ್ಯದೆ ಬಿಡದು ಕೊರಳು.
  • ನೀನಾಗದೆ ರಣಹೇಡಿ, ಕೀರ್ತಿ ಪಡೆ ಪ್ರಾಣ ನೀಡಿ.
  • ನಿನ್ನಲ್ಲಿ ನೀ ಹುಡುಕು, ಅರಿಷಡ್ವರ್ಗಗಳ ಹೊರ ಹಾಕು.
  • ಸಜ್ಜನರ ಮಾತು ಸಿಹಿ, ದುರ್ಜನರ ತುತ್ತು ಕಹಿ.
  • ಬುದ್ಧಿ ಇದ್ದವನಲ್ಲಿ ಶ್ರದ್ಧೆ, ನಿದ್ದೆ ಬಾರದವನಲ್ಲಿ ವಿದ್ಯೆ.
  • ಉಗಮವಾಗದಿರಲಿ ಹಿಂಸೆ, ಹೆಚ್ಚಿಗೆಯಾಗದಿರಲಿ ಆಸೆ.
  • ನಾಳೆ ಎಂದವನಿಗೆ ಹಾಳು, ಇಂದೇ ಎಂದವನಿಗೆ ಬೀಳಾಗದು ಬಾಳು.
  • ಆಳಾಗದವ ಅರಸನಲ್ಲ, ಹಟ ಹಿಡಿದವ ಸಾಮ್ರಾಟನಲ್ಲ.
  • ಉಂಡಿದ್ದು ಹೊಟ್ಟೆಗಾಗಿ, ಮಾಡಿದ್ದು ಬಟ್ಟೆಗಾಗಿ.
  • ವಿಶ್ವಾಸಿ ನೀನಾಗು, ಘಾತುಕಕ್ಕೆ ಬಗ್ಗದೆ ಮುನ್ನುಗ್ಗು.
  • ಹೆಂಡತಿಯ ಮಾತು ಆಗದಿರಲಿ ಕೊಯ್ದುಕೊಳ್ಳುವಂತೆ ಕತ್ತು.
  • ಕಣ್ಣಿಗೆ ಕಂಡದ್ದೆಲ್ಲಾ ನುಣ್ಣಗಿರುವುದಿಲ್ಲ.
  • ನಿನ್ನದಲ್ಲ ಸರ್ವ ಆಸ್ತಿ, ಒಳ್ಳೆಯದಲ್ಲ ಗರ್ವ ಜಾಸ್ತಿ.
  • ಮನಸ್ಸು ಇಲ್ಲದಿದ್ದರೆ ಗಟ್ಟಿ, ಎಲ್ಲವೂ ಮೂರಾಬಟ್ಟಿ.
  • ಮಾಡಿ ಉಣ್ಣು ಬೇಡಿದಷ್ಟು, ತಗಾದೆ ಮಾಡದೇ ಉಣ್ಣು ನೀಡಿದಷ್ಟು.
  • ಒಣ ಮಾತು ಒಣಗಿದ ಹುಲ್ಲು, ಒಳ್ಳೆಯ ಮಾತು ಬೆಳ್ಳಗಿನ ಹಾಲು
  • ತತ್ವದಲ್ಲಿ ಸತ್ವ ಹುಡುಕು, ವ್ಯಥೆಯಲ್ಲಿ ಕಥೆ ಹುಡುಕು.
  • ಇಲಿ ಸಿಕ್ಕರೆ ಬೆಕ್ಕು ಆಗುವುದು ಹುಲಿ.
  • ಕಾಗೆಯ ಕೈಯಲ್ಲಿ ಕೊಟ್ಟರೆ ಕಾರಭಾರ, ಅದು ಮಾಡುವುದೇ ಉಪಕಾರ?
  • ಹೋಗುವುದು ಮೂಡಿದ ಹೊತ್ತು, ಹೋಗೋದಿಲ್ಲ ಆಡಿದ ಮಾತು.
  • ದೈವ ಕಾಡುವುದು ವಿಧಿಗಾಗಿ, ನೀರು ಸಮುದ್ರ ಸೇರುವುದು ನದಿಗಾಗಿ.
  • ಬಡವರ ಕಣ್ಣೀರಿಗೆ ಕರುಣೆ ಬಂದೀತೆ ಬೆಣ್ಣೆಗೆ?
  • ಸಲುಗೆ ಕೊಟ್ಟರೆ ಸಾಕೂ ಹೆಗ್ಗಣವೂ ಸಹ ಏರುವುದು ಹೆಗಲಿಗೆ.
  • ಹುಟ್ಟಿದ ಮಗು ತರುವುದು ತೊಟ್ಟಲಿಗೆ ನಗು.
  • ಸ್ವಾರ್ಥ ಉಳಿಸಿದವ ಪಾಪಾತ್ಮ, ನಿಸ್ವಾರ್ಥ ಗಳಿಸಿದವ ಪುಣ್ಯಾತ್ಮ.
  • ಬೇಸರವಿರಬಾರದು, ಅವಸರ ಮಾಡಬಾರದು.
  • ಎಚ್ಚರ ತಪ್ಪಿ ಮಾತನಾಡಬಾರದು, ಹುಚ್ಚನಂತೆ ವರ್ತಿಸಬಾರದು.
  • ಬಿಡುಕು ಮಾತಿಗೆ ಮಾಡಿಕೊಳ್ಳದಿರು ಕೆಡುಕು.
  • ಹಾಲಿಗೆ ಹುಳಿ ಹಿಂಡಿದರೆ ಮೊಸರು, ಮಣ್ಣಿಗೆ ನೀರು ಹಾಕಿದರೆ ಕೆಸರು.
  • ಗದ್ದೆ ಸುಟ್ಟರೂ ಹಾಳಾಗದು ಗಾದೆ.
  • ನಿನ್ನಲ್ಲಿರುವ ಮಾನ ನಿನಗೆ ಕೊಡುವುದು ಬಹುಮಾನ.
  • ಮಾಟ ಮಾಡಿದೋನ ಮನೆ ಹಾಳು.
  • ಒಬ್ಬರ ಕೂಳು ಇನ್ನೊಬ್ಬರ ಕುತ್ತು.
  • ಒಳಿತಾಗಿ ಮುಗಿದಿದ್ದೆಲ್ಲವೂ ಒಳ್ಳೆಯದೇ.
  • ಹೊಳೆಯುವುದೆಲ್ಲಾ ಚಿನ್ನವಲ್ಲ.
  • ಓಡಿದವನಿಗೆ ಓಣಿ ಕಾಣಲಿಲ್ಲ, ಹಾಡಿದವನಿಗೆ ಹಾದಿ ಕಾಣಲಿಲ್ಲ.
  • ಬರಿಗೈಯವರ ಬಡಿವಾರ ಬಹಳ.
  • ಎಲ್ಲ ಕೆಡುಕಿಗೂ ಮೂಲ ಹೊಟ್ಟೆಕಿಚ್ಚು.
  • ಸ್ವರ್ಗದಲ್ಲಿ ಸೇವೆಗೈಯುವುದಕ್ಕಿಂತ ನರಕದಲ್ಲಿ ಆಳುವುದೇ ಲೇಸು.
  • ಅರೆಗೊಡದ ಅಬ್ಬರವೇ ಬಹಳ.
  • ಮರಿ ಮಾಡುವ ಮೊದಲೇ ಮೊಟ್ಟೆಗಳನ್ನು ಎಣಿಸಬೇಡ.
  • ಆಪತ್ತಿಗಾದವನೇ ನಿಜವಾದ ಗೆಳೆಯ.
  • ಇಂದಿನ ಸೋಲು ನಾಳಿನ ಗೆಲುವು.
  • ಧೈರ್ಯವಿದ್ದವನಿಗೆ ದೈವವೂ ಅನುಕೂಲ.
  • ದುಡ್ಡಿಗಿಂತ ದೊಡ್ಡ ಹೆಸರೇ ಉತ್ತಮ.
  • ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.
  • ಉತ್ತಮವಾದ ನಗು ನೇಸರನ ಮಗು.
  • ಸದಾಚಾರಣೆಯ ಉದಾಹರಣೆಯೇ ಉತ್ತಮವಾದ ಉಪದೇಶ.
  • ಪ್ರಾಮಾಣಿಕತೆಯಿಂದಲೇ ಪಾರಮಾರ್ಥ
  • ಕರೆದುಣ್ಣುವ ಕೆಚ್ಚಲನ್ನು ಕೊರೆದುಂಡ ಹಾಗೆ.
  • ಉದ್ದುದ್ದ ಮಾತಿನವರ ಮೊಳಕೈ ಮೊಂಡ.
  • ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.
  • ನೋಡಿ ನಡೆದವರಿಗೆ ಕೇಡಿಲ್ಲ.
  • ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
  • ಚಿಂತೆ ಮಾಡಿದರೆ ಸಂತೆ ಸಾಗೀತೆ?
  • ದುಡ್ಡನ್ನು ಕಾದಿಟ್ಟುಕೊಳ್ಳದವನು ಹಣವಂತನು ಹೇಗೆ ಆದಾನು?
  • ಮಕ್ಕಳ ಬಾಯಿಗೆ ಹಣ್ಣು ಕೊಟ್ಟು ಮಣ್ಣು ಬಿಡಿಸು.
  • ತಾಯಿ ಬೇಕು ಇಲ್ಲವೇ ಬಾಯಿ ಬೇಕು.
  • ಸೀರಿಗೇಡಿಗೆ ಸೀರೆ ಉಡಿಸಿದರೆ ಕೆರಿ ದಂಡಿ ಮ್ಯಾಗ ನಿಂತು ಕೇಕೆ ಹಾಕಿದಳು.
  • ಪೀತಾಂಬರ ಉಟ್ಟರೂ ಕೊತ್ತಂಬರಿ ಮಾರೋದು ತಪ್ಪಲಿಲ್ಲ.
  • ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.
  • ಹಾರುವನ ತೊತ್ತಾಗಬೇಡ ಗಾಣಿಗನ ಎತ್ತಾಗಬೇಡ.
  • ಮಂತ್ರಕ್ಕಿಂತ ಉಗುಳೇ ಹೆಚ್ಚು.
  • ಹಂಪಿಗೆ ಹೋಗುವುದಕ್ಕಿಂತ ಕೊಂಪೆಯಲ್ಲಿರುವುದೇ ಲೇಸು.
  • ಎಡಗಣ್ಣು ಹೊಡೆದರೆ ನಾರಿಗೆ ಶುಭ.
  • ಊಟವೆಂದರೆ ಊರು ಬಿಟ್ಟುಹೋದಂತೆ.
  • ಎಲ್ಲ ಮುಗಿದ ಮೇಲೆ ತೀರ್ಥಯಾತ್ರೆಗೆ ಹೊರಟಂತೆ.
  • ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
  • ಒಕ್ಕಣ್ಣ ತನಗೆ ಹತ್ತು ಕಣ್ಣು ಅಂತಿದ್ನಂತೆ.
  • ಕಣ್ಣಿಗೂ ಮೂಗಿಗೂ ಮೂರು ಗಾವುದ.
  • ಕಲಹವೇ ಕೇಡಿಗೆ ಮೂಲ.
  • ಮಾತಿಗೆ ಸಿಕ್ಕಿದರೆ ಮಳೆಗೆ ಸಿಕ್ಕಂತೆ.
  • ನಾಲಿಗೆಯಿಂದ ಕೆಳಗೆ ಬಿದ್ದರೆ ನರಕ.
  • ಮಾಡಿದ ರಾಗಿ ಕೊಟ್ರೂ ಮೂರ್ಖನ ಸಹವಾಸ ಬೇಡವೆಂದಂತೆ.
  • ಲೋಕ ತಿಳೀಬೇಕು ಲೆಕ್ಕ ಕಲೀಬೇಕು.
  • ಸಾಲ್ಗಾರ ಸುಮ್ಮನಿದ್ರು ಸಾಕ್ಷಿಗಾರ ಸುಮ್ಮನಿರ.
  • ಹಲ್ಲಿರುವ ತನಕ ಊಟ ಕಣ್ಣಿರುವ ತನಕ ನೋಟ.
  • ದಕ್ಷಿಣೆಗಾದರೆ ಮಾತು ಹಿಡಿದಾನು, ಮಂತ್ರಕ್ಕಾದರೆ ಬೆನ್ನು ತೋರ್ಸಿಯಾನು.
  • ಭಾವಿಸಿದರೆ ಬಳಗ, ಕೂಡಿಸಿದರೆ ಕಾಸು.
  • ಭಾಷೆ ಕೊಟ್ಟವನು ಪೋಷಣೆ ಮಾಡನೇ?
  • ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆಯಿಲ್ಲ.
  • ಭಿಕಾರಿಯಾದವ ಕಾಶಿಗೆ ಹೋದರೂ, ಭಿಕ್ಷಾನ್ನವಲ್ಲದೆ ಪಕ್ವಾನ್ನ ಉಂಡಾನೇ?
  • ಮಣದಷ್ಟು ಮಾತಿಗಿಂತ ಕಣದಷ್ಟು ಕೆಲಸ ಲೇಸು.
  • ಮಳೆ ನೀರನ್ನು ಬಿಟ್ಟು ಮಂಜಿನ ನೀರಿಗೆ ಕೈಯೊಡ್ಡಿದ ಹಾಗೆ.
  • ದುಡಿಯೋ ತನಕ ಮಡದಿ.
  • ದೂರವಿದ್ದ ಮಗನಿಗೂ, ಹತ್ತಿರವಿದ್ದ ಮಗನಿಗೂ ಸರಿಬಾರದು.
  • ದೊಂಬರಾಟ ಆಡಬಹುದು ಮಕ್ಕಳಾಟ ಆಡೊಕ್ಕಾಗಲ್ಲ.
  • ನನಗೆ ನಿನಗೆ ಹಿತ ಇಲ್ಲ, ನಿನ್ನ ಬಿಟ್ಟು ನನಗೆ ಗತಿ ಇಲ್ಲ ಎಂದಂತೆ.
  • ನೆಂಟ್ರು ಮನೆಗೆ ಮೂಲ, ಕುಂಟೆತ್ತು ಹೊಲಕ್ಕೆ ಮೂಲ.
  • ನರಗುಂದಕ್ಕೆ ಹೊದರೆ ಕುರು ತಪ್ಪೀತೆ?
  • ನಾಮವಿದ್ದವನಿಗೆ ಕಾಮ ಕಡಿಮೆಯೇ?
  • ಹಲ್ಲಿ ಶಕುನ ಕೇಳಿ ಕಲ್ಲಿಂದ ಹೊಡೆಸಿಕೊಂಡಂತೆ.
  • ಸಾಲಗಾರನ ಹೆಂಡತಿ ಶೋಕಿಮಾಡಿದರೇನು?
  • ವೈಕುಂಠಕ್ಕೆ ಹೋಗಲಿಕ್ಕೆ ಕುಂಟು ದಾಸಯ್ಯನ ಮಧ್ಯಸ್ತಿಕೆಯೇ?
  • ಮೂರು ಕಾಸಿನ ಮಾಂಸವಿಲ್ಲದಿದ್ದರೂ, ಮಾತು ಮಾತ್ರ ಜೋರು.
  • ರೊಕ್ಕ ಕೊಟ್ಟು ರಟ್ಟೆ ಮುರಿಸಿಕೊಂಡಂತೆ
  • ಜಾತಿ ನೀತಿಯಿಲ್ಲ, ಮಾರಿಗೆ ಕರುಣೆ ಇಲ್ಲ.
  • ಹೂಡಿದರೆ ಒಲೆ, ಮಡಿದರೆ ಮನೆ.
  • ಹತ್ತು ಜನರ ಹುಲ್ಲು ಕಡ್ಡಿ ಒಬ್ಬನಿಗೆ ತಲೆ ಹೊರೆ.
  • ಪಂಗಡವಾದವ ಸಂಗಡ ಬಂದಾನೆ?
  • ಅಗ್ನಿಗೆ ತಂಪುಂಟೆ, ವಿಷಕ್ಕೆ ರುಚಿಯುಂಟೆ, ದಾರಿಕೋರನಿಗೆ ಧರ್ಮವುಂಟೆ?
  • ಬಸವನ ಹಿಂದೆ ಬಾಲ, ಲಗ್ನದ ಹಿಂದೆ ಸಾಲ.
  • ತುಪ್ಪ ತಿಂದ ಮಾತಿಗಷ್ಟು ತಪ್ಪು ಮಾತು ಬಂತು.
  • ತೇರಾದ ಮೇಲೆ ಜಾತ್ರೆ ಸೇರಿತು.
  • ಆಸೆಗೆ ತಕ್ಕ ಪರಿಶ್ರಮ ಬೇಕು.
  • ಎಲ್ಲರಿಗೂ ಹಿಡಿಸುವ ಸಂಪ್ರದಾಯ ಯಾವುದೂ ಇಲ್ಲ.
  • ಏನಾದರೂ ಆಗು ಮೊದಲು ಮಾನವನಾಗು.
  • ಬಕ್ಕಳ ಹೊನ್ನಿದ್ದರೆ ಊರೆಲ್ಲಾ ನೆಂಟರು.
  • ಕಷ್ಟಗಳು ಹೇಳದೆ ಕೇಳದೆ ಬರೋ ನೆಂಟರ ಹಾಗೆ.
  • ಕರ್ಪೂರವ ತಿಪ್ಪೇಲಿಟ್ರೂ ತನ್ನ ಸುವಾಸನೆ ಬಿಡದು.
  • ಗಣೇಶನ್ನ ಮಾಡು ಅಂದ್ರೆ ಅವರ ಅಪ್ಪನ ಮಾಡಿದನಂತೆ.
  • ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.
  • ಚಿನ್ನದ ಸೂಜಿ ಅಂತ ಕಣ್ಣು ಚುಚ್ಚಿಕೊಂಡಾರೆ?
  • ಟೊಳ್ಳು ಮಾತು ಸುಳ್ಳಿಗಿಂತ ಕಡೆ.
  • ಠಕ್ಕು ಇರುವವನಿಗೆ ಠಿಕಾಣಿ ಸಿಗದು.
  • ತೂಕ ಸರಿಯಿದ್ದರೆ ವ್ಯಾಪಾರ.
  • ನಡೆದಷ್ಟು ನೆಲ, ಪಡೆದಷ್ಟು ಫಲ.
  • ಮುಳ್ಳು ಬಿತ್ತಿದವನಿಗೆ ನೀನು ಹೂಬಿತ್ತು.
  • ಪುಷ್ಪ ಡೊಂಕಾದರೇನು, ಪರಿಮಳ ಡೊಂಕೇ?
  • ಬುದ್ಧಿಯಿಲ್ಲದವನ ಐಶ್ವರ್ಯ, ಕಡಿವಾಣ ಇಲ್ಲದ ಕುದುರೆಯಂತೆ.
  • ರಸ್ತೇಲಿ ಕುತ್ಕೊಂಡು ಗಳಗಳನೆ ಅತ್ತರೆ ಹೋದ ಪ್ರಾಯ ಬಂದೀತೆ?
  • ವೈರತ್ವ ನಾಶಕ್ಕೆ ವಾತ್ಸಲ್ಯವೇ ಮದ್ದು.
  • ಸಂತೋಷವೇ ಯೌವನ, ಚಿಂತೆಯೇ ಮುಪ್ಪು
  • ಹಸಿದವರ ಮುಂದೆ ಭಾಷಣ ಮಾಡಿದ ಹಾಗೆ.
  • ಹಳೆಯ ಕೋಟು ಧರಿಸಿ, ಹೊಸ ಪುಸ್ತಕ ಕೊಳ್ಳಿ.
  • ಊಟಕ್ಕೆ ಮೊದಲು ಉಪ್ಪಿನ ಕಾಯಿ, ಮಾತಿಗೆ ಮೊದಲು ಗಾದೆ.
  • ಆರಿದ್ರೆ ಮಳೆಯಲ್ಲಿ ಆದವನೇ ಒಡೆಯ.
  • ಸ್ವಾತಿ ಮಳೆ ಬಿದ್ರೆ ಮುತ್ತಿನಂಥ ಜೋಳ.
  • ಕುಲ ಬಿಟ್ಟರೂ ಛಲ ಬಿಡಬೇಡ.
  • ಹೊಸ ಮಂಜು ಹಳೆಯದನ್ನು ಕೊಚ್ಚದಿದ್ದೀತೆ.
  • . ಕೆಟ್ಟದಲ್ಲದ ಮೇಲೆ ಪಿಸುಗುಟ್ಟೋದು ಯಾಕೆ?
  • ಇಬ್ಬರು ಒಪ್ತಾರೆ ಮೂವರು ವಿರೋಧಿಸುತ್ತಾರೆ ಎಂದಂತೆ!
  • ಮನೇಲಿ ಕತ್ತಲೆ, ಪರರಿಗೆ ದೀಪ ದಾನ ಮಾಡಿದ.
  • ಇರೋದು ಕಲಿಸುತ್ತೆ, ಇಲ್ಲದ್ದು ನಾಚಿಸುತ್ತೆ.
  • ಒಬ್ಬನ ಗಡ್ಡಕ್ಕೆ ಬೆಂಕಿ ಹತ್ತಿದಾಗ, ಮತ್ತೊಬ್ಬ ಕೈ ಕಾಯಿಸಿದ.
  • ಮನೆಯೊಡತಿ ಮುಖದ ಮೇಲೆ ಉಗುಳಿದರೂ ಹೊರಗೆ ಬಂದು ನಾನು ಬೆವತಿದ್ದೇನೆ ಅಂದಂತೆ!
  • ಹುಲಿ ಹಸಿದಾಗ ಹುಲ್ಲು ತಿಂದೀತೆ?
  • ಕುದುರೆ ಕುರುಡಾದರೂ ಕಡಿಮೆಯೇನೂ ತಿನ್ನುವುದಿಲ್ಲ!
  • ದುರುಳನಿಂದಲೇ ದುರುಳುತನ.
  • ಅಕಾಲದಲ್ಲಿ ಬೆಳೆಯಿದ್ದಂತೆ ವೃದ್ಧಾಪ್ಯದಲ್ಲಿ ಮಕ್ಕಳು.
  • ನೆಂಟರನ್ನು ಲಕ್ಷಿಸದಿರಲು, ಸ್ನೇಹಿತರನ್ನು ಅಲಕ್ಷಿಸದಿರು.
  • ಕಸದಲ್ಲಿ ಮಲಗಿ ಅರಮನೆ ಕನಸು ಕಂಡಂತೆ.
  • ಮಧ್ಯಾಹ್ನದ ಊಟವಾದಮೇಲೆ ಮುಳ್ಳಿನ ಮೇಲಾದರೂ ಮಲಗು, ರಾತ್ರಿ ಊಟವಾದ ಮೇಲೆ ಅರ್ಧ ಮೈಲಿ ನಡೆ.
  • ಹುಟ್ಟಿನಿಂದಲೇ ವಕ್ರವಾದದ್ದು, ಪೋಷಣೆಯ ಮೂಲಕ ಸರಿಯಾದಂತೆ.
  • ಬಾವಿಯ ಬಾಯನ್ನು ಮುಚ್ಚಬಹುದು, ಜನಗಳ ಬಾಯನ್ನಲ್ಲ.
  • ಆಳವಿಲ್ಲದ ನೀರು ಭಾರಿ ಶಬ್ದ ಮಾಡೀತು.
  • ತನ್ನ ಯಂತ್ರಕ್ಕೆ ಎಣ್ಣೆ ಹಾಕಲೂ ಆಗದವ ಇನ್ನೊಬ್ಬರಿಗೆ ಉಪದೇಶ ನೀಡಿದಂತೆ.
  • ಪಾದಕ್ಕೆ ತಕ್ಕಂತೆ ಚಪ್ಪಲಿ ತಗೊ, ಬಾಗಿಲಿನೆತ್ತರಕ್ಕೆ ತಕ್ಕಂತೆ ಬಗ್ಗಿ ನಡಿ.
  • ಮನೆಯ ಕಷ್ಟಕ್ಕೆ ನೆರೆಮನೆಯವರು ಹೊಣೆ ಏನು?
  • ಮನೆಯ ಬಾಗಿಲಿಗೆ ಬೀಗ ಹಾಕಿಕೋ, ಮನದ ಬಾಗಿಲನ್ನು ತೆರೆದಿಡು.
  • ನಗುವೇ ಆರೋಗ್ಯದ ಗುಟ್ಟು.
  • ಈರುಳ್ಳಿ, ಬೆಳ್ಳುಳ್ಳಿಯನ್ನು ತಿನ್ನು, ರೋಗವನ್ನು ದೂರವಿಡು.
  • ಬೆಕ್ಕು ನಮ್ಮನೇದು, ಹಾಲು ಪಕ್ಕದ ಮನೇದು.
  • ಕಹಿ ಪದಾರ್ಥ ತಿಂದು ಸಿಹಿ ಮಾತನಾಡು.
  • ಮುಖ ನೋಡಿ ಮನ ತಿಳಿ.
  • ಮಾತು ಚಿಕ್ಕದಾಗಿರಲಿ, ಕೆಲಸ ಚೊಕ್ಕವಾಗಿರಲಿ.
  • ಮಾತು ಮೊಳದುದ್ದ, ಕೆಲಸ ಕಿರುಬೆರಳುದ್ದ.
  • ಮನೆ, ಮನ ಓಡೆದರೆ ಅಂಟಿಸಲಾಗದ ಕನ್ನಡಿಯಂತೆ.
  • ಕೋಪ ಕೆಲಸ ಕೆಡಿಸುತ್ತೆ, ಶಾಂತಿ ಮುಂದೆ ನಡೆಸುತ್ತೆ.
  • ಮನುಜನಾಗಿ ಹುಟ್ಟಿ ಪಶುವಿನಂತೆ ಬದುಕಿದಂತೆ!
  • ಕಳೆದ ದಿನಗಳು ಬರೆದ ಪುಟಗಳಂತೆ.
  • ಪರಿಚಿತರ ಮರೆಯಬೇಡ, ಅಪರಿಚಿತರ ನಂಬಬೇಡ.
  • ಹಲ್ಲಿಲ್ಲದಿದ್ದರೂ ಚಕ್ಕುಲಿ ತಿನ್ನೋ ಚಪಲ.
  • ಒಗ್ಗಿದರೆ ಮನೆಯಾದರೇನು, ಸ್ಮಶಾನವಾದರೇನು?
  • ಕೆಡುವವರು ಮನೇಲಿದ್ರು ಕೆಡುತ್ತಾರೆ.
  • ನಮ್ಮಬುದ್ಧಿ ಪರರ ಕೈಯಲ್ಲಿದ್ದಂತೆ.
  • ಮೆತ್ತಗಿದ್ರೆ ತುಳೀತಾರೆ, ಜೋರಾಗಿದ್ರೆ ಹೆದ್ರತಾರೆ.
  • ನೋಡಿ ನಡೆದಾಗ ಎಡವೋದು ತಪ್ಪುತ್ತೆ.
  • ತೀರ್ಥ ಎಂದು ಎಲ್ಲೆಲ್ಲೋ ನೀರು ಕುಡಿದಂತೆ!
  • ಹಳೇ ಚಪ್ಪಲಿ ಆದ್ರೂ ಪರವಾಗಿಲ್ಲ, ಬರಿಗಾಲಲ್ಲಿ ನಡೀಬೇಡ.
  • ರೈತನ ಮುಗ್ಗು ನಾಡಿನ ಕುಗ್ಗು.
  • ದರಿದ್ರ ಏಳಗೊಡುವುದಿಲ್ಲ, ಆಲಸ್ಯ ಉಣಗೊಡುವುದಿಲ್ಲ.
  • ನಾಚಿಕೆ ಬಿಟ್ಟವ ಊರಿಗೇ ದೊಡ್ಡವ.
  • ಎರೆ-ತೆರೆ ಬಂಗಾರ, ಮರಳು ಬರೀ ಸಿಂಗಾರ!
  • ಹತ್ತೋಕ್ ಮೊದ್ಲು ಕುದರೆ ನೋಡು, ಬಿತ್ತೊಕ್ ಮೊದ್ಲು ಹೊಲ ನೋಡು.
  • ಅಶ್ವಿನೀ ಸಸ್ಯನಾಶಿನೀ.
  • ಭರಣಿ ಮಳೆ ಧರಣಿ ಬೆಳೆ.
  • ರೋಹಿಣಿ ಮಳೆ ಓಣಿಯೆಲ್ಲಾ ಕೆಸರು
  • ಉತ್ತರಿ ಮಳೆ ಹುಯ್ದರೆ ಹೆತ್ತಮ್ಮನೂ ಆಗೋಲ್ಲ.
  • ಆದರೆ ಆರಿದ್ರಾ ಇಲ್ವಾದ್ರೆ ದರಿದ್ರ!
  • ಹಸ್ತ ಇಲ್ದಿದ್ರೆ ಒಕ್ಕಲಿಗ ಹಲ್ಲು ಕಿಸ್ದ.
  • ಸ್ವಾತಿ ಮಳೆ ಮುತ್ತಿನ ಬೆಳೆ.
  • ವಿಶಾಖ ಮಳೆ ಪಿಶಾಚಿ ಹಿಡಿದ ಹಾಗೆ.
  • ಅನುರಾಧ ಬಂದರೆ ನಮ್ಮ ರಾಗಿ ನಮ್ಮದು.
  • ಚಿತ್ತಾ ಮಳೆ ವಿಚಿತ್ರ ಬೆಳೆ!
  • ಪೂರ್ವಾಷಾಢ-ಉತ್ತರಾಷಾಢ ಬೇಡವೇ ಬೇಡ.
  • ಬಾಡಿಗೆ ಎತ್ತು ಅಂತ ಹೊಡಿದು ಬಡಿಬಾರದು.
  • ಆಕಳಿಲ್ಲದವ ಬೆಳೆಸು ಮಾಡ್ಯಾನ, ಆಕಳಿದ್ದವ ಮಕ್ಕಳ ಸಾಕ್ಯಾನ.
  • ಉಣಬೇಕು- ಉಡಬೇಕು ಎಂಬೋದಾದ್ರೆ ಎಮ್ಮೆ ಕಟ್ಟಬೇಕು.
  • ಬಾಳೆ ಬೆಳೆದವ ಬಾಳಿಯಾನು.
  • ತೆಂಗು ಬೆಳೆದವನಿಗೂ ಗಂಡು ಹೆಡೆದವಳಿಗೂ ಚಿಂತೆಯಿಲ್ಲ.
  • ತೋಟ ಮಾಡಿದವನಿಗೆ ಕೋಟಲೆಯಿಲ್ಲ.
  • ಬಲ್ಲಿದವನಿಗೆ ಕಬ್ಬು.
  • ಆದರೆ ಒಂದಡಿಕೆ ಮರ, ಹೋದರೆ ಒಂದು ಗೋಟು.
  • ತಂದೆ, ತಾಯಿ ಸತ್ತರೂ ಸೋದರ ಮಾವ ಇರಬೇಕು.
  • ವಿದ್ಯಾವಂತನಾದರೆ ಜಗತ್ತಿನ ಆಡಳಿತವನ್ನೇ ನಡೆಸಬಹುದು.
  • ಪರಿಸರ ಮಾಲಿನ್ಯ ವಿನಾಶಕ್ಕೆ ಕಾರಣ.
  • ದೇಹಕ್ಕೆ ಮುಪ್ಪಾದರೇನಾಯ್ತು, ಅಧ್ಯಯನಕ್ಕೆ ಮುಪ್ಪಿದೆಯೇ?.
  • ಶರಣು ಆದವನಿಗೆ ಮರಣವಿಲ್ಲ.
  • ಜಾಣನಿಗೆ ಮೂರು ದಾರಿ, ಕೋಣನಿಗೆ ಒಂದೇ ದಾರಿ.
  • ಗುರುವಿಲ್ಲದೇ ಮಠವಿಲ್ಲ, ಹಿರಿಯರಿಲ್ಲದೆ ಮನೆಯಿಲ್ಲ.
  • ಮನೆ ಗೆದ್ದು ಮಾರು ಗೆಲ್ಲು.
  • ಮಾತು ಅಂಗಾರ ಮೌನ ಬಂಗಾರ
  • ಗುರಿಯಿಟ್ಟು ಗುಂಡು ಹಾಕು, ಸಮಯ ಸಾಧಿಸಿ ಬೇಟೆಯಾಡು.
  • ಮನೆಯಲ್ಲಿ ರಾಮಣ್ಣನಂತೆ, ಬೀದಿಯಲ್ಲಿ ಕಾಮಣ್ಣನಂತೆ.
  • ಕೆಟ್ಟದ್ದನ್ನು ಬಯಸಬೇಡ, ಒಳ್ಳೆಯದನ್ನು ಬಿಡಬೇಡ.
  • ಮಾನವನಾದ ಮೇಲೆ ಮೂರು ಆಕ್ಷರ ಮೊದಲು ಕಲಿ.
  • ಒಲೆಯಮೇಲೆ ಇಟ್ಟಾಗ ಉಕ್ಕಿದಂತೆ ಹಾಲು, ಒಗ್ಗಟ್ಟಿಲ್ಲದ ಮನೆ ಬೀದಿಪಾಲು.
  • ಬಾಲ್ಯವಿಲ್ಲದೆ ಯೌವ್ವನವಿಲ್ಲ, ಯೌವ್ವನವಿಲ್ಲದೆ ಮುಪ್ಪಿಲ್ಲ.
  • ದಯವಿಲ್ಲದ ಧರ್ಮವಿಲ್ಲ.
  • ಮಾತಿಗೆ ನೆಲೆಯಿಲ್ಲ, ಪ್ರೇಮಕ್ಕೆ ಬೆಲೆಯಿಲ್ಲ.
  • ಕೋಣನಿಗೆ ಏನು ಗೊತ್ತು ಲತ್ತೆ ಪೆಟ್ಟು.
  • ಆಸೆಯಿಲ್ಲದವನು ದೇಶಕ್ಕೆ ಶ್ರೀಮಂತ.
  • ಇನ್ನೊಬ್ಬರ ಮಾತಿಗೆ ಕಿವಿಗೊಡಬೇಡ, ಚಾಡಿಹೇಳಿ ಜಗಳ ಹಚ್ಚಬೇಡ.
  • ಕೋಣನಾಗಿರುವುದಕ್ಕಿಂತ ಜಾಣನಾಗಿರುವುದು ಲೇಸು.
  • ಗೆಳೆತನದಲ್ಲಿ ಮೋಸಮಾಡಬೇಡ.
  • ಬಾಯಿಯಲ್ಲಿ ಬೆಲ್ಲ ಎದೆಯಲ್ಲಿ ನೀಚತನ.
  • ಹಿಮಾಲಯದಲ್ಲಿ ಹಿಮ ಹೆಚ್ಚಂತೆ, ವೀರಭದ್ರನಲ್ಲಿ ಅವತಾರ ಹೆಚ್ಚಂತೆ.
  • ಕಾಯಕವನ್ನು ಸದಾ ಮಾಡು, ಸೋಮಾರಿತನವನ್ನು ಬಿಡು.
  • ಮೈತುಂಬ ಕಣ್ಣಿರಲಿ, ಕೈಯಲ್ಲಿ ಪೆನ್ನಿರಲಿ.
  • ಹಿರಿಯರ ಮಾತಿಗೆ ಕಿವಿಗೊಡು, ಚುಚ್ಚುಮಾತಿಗೆ ಬೆನ್ನು ಕೊಡು.
  • ವಿನಯದಿಂದ ವಿಶ್ವವನ್ನು ಗೆಲ್ಲು, ಪರನಿಂದೆ ಮಹಾಪಾಪ.
  • ಮೊದಲು ಕಣ್ಣು ಬಿಡು, ನಂತರ ಕೈ ಮಾಡು.
  • ನಿನ್ನಿಂದ ಆದ ಪಾಪ, ಅದೇ ನಿನಗೆ ಶಾಪ.
  • ನಿಂತ ನೀರಿನಲ್ಲಿ ಕ್ರಿಮಿ ಹುಟ್ಟುತ್ತವೆ, ಕೆಲಸವಿಲ್ಲದ ಮನುಷ್ಯನಲ್ಲಿ ಕೆಟ್ಟ ವಿಚಾರಗಳು ಜನಿಸುತ್ತವೆ.
  • ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ.
  • ಯಾದವೇಂದ್ರ ದನ ಕಾದ, ರಾಘವೇಂದ್ರ ರಾಜ್ಯವಾಳಿದ.
  • ಹಟ್ಟಿ ತುಂಬಾ ಹಸು, ಹಾಲು ಮಾತ್ರ ತುಸು.
  • ಹಾಲು ಕುಡಿದು ಹಾಗಲಕಾಯಿ ತಿಂದಂತೆ.
  • ಹುಲಿಗಲ್ಲ, ಸಿಂಹಕ್ಕಲ್ಲ, ಮನೆಯ ಹೆಂಡತಿಯ ನೆರಳಿಗಂಜಿದ.
  • ಕೋಳಿಯ ಕಾಲಿಗೆ ಗೆಜ್ಜೆ ಕಟ್ಟಿದರೆ ತಿಪ್ಪೆ ಕೆದರುವುದನ್ನು ಬಿಟ್ಟೀತೆ?
  • ಏನು ಬೇಡಿದರೊಬ್ಬ ದಾನಿಯನ್ನು ಬೇಡು, ದೀನನಾ ಬೇಡಿದರೆ ಆ ದೀನ ಏನು ಕೊಟ್ಟಾನು?
  • ಇತ್ತಿತ್ತ ಬಾ ಎಂದರೆ ಹೆಗಲೇರಿ ಕುಳಿತ.
  • ಹಣದಲ್ಲಿ ಬಡವನಾದರೂ ಬುದ್ಧಿಯಲ್ಲಿ ಬಡವನಾಗಬಾರದು.
  • ಹಣವಿಲ್ಲದ ಮನುಷ್ಯ, ರೆಕ್ಕೆ ಇಲ್ಲದ ಪಕ್ಷಿಯಂತೆ.
  • ಹಡಗಿನ ವ್ಯಾಪರ, ಉಪ್ಪಿಗೆ ಬಡತನ.
  • ಬುದ್ಧಿಗಳ್ಳನಿಗೆಲ್ಲಿ ಸತ್ಯ, ಸದಾಚಾರ!
  • ಚಾತುರ್ಯ ಬಲ್ಲವನಿಗೆ ಚಾಚೂ ಚಿಂತಿಲ್ಲ.
  • ಸತ್ತವರಿಗೆ ಸಂಗವಿಲ್ಲ, ಕೆಟ್ಟವರಿಗೆ ನೆಂಟರಿಲ್ಲ
  • ನಿದ್ದೆಗೆ ಮದ್ದಿಲ್ಲ, ವಜ್ರಕ್ಕೆ ಬೆಲೆಯಿಲ್ಲ.
  • ಮನೆ ಮಕ್ಕಳು ಮಾಣಿಕ್ಯ, ನೆರೆಮನೆ ಮಕ್ಕಳು ಕಸಿವಿಸಿ.
  • ಹೆಣ್ಮಕ್ಕಳಿಗೆ ತಾಯಿ ಶಿಕ್ಷೆ,, ಗಂಡ್ಮಕ್ಕಳ್ಳಿಗೆ ತಂದೆ ಶಿಕ್ಷೆ.
  • ಮುಖಕ್ಕೆ ಮೂಗು ಚೆಂದ, ಮೂಗಿಗೆ ಮೇಲೆರಡು ಕಣ್ಣು ಚೆಂದ.
  • ವಯಸ್ಸಿಗೆ ತಕ್ಕ ಬುದ್ಧಿ ಕಲಿ.
  • ಕಾಲಿದ್ದವನಿಗೆ ಆಟ, ಕಣ್ಣಿದ್ದವನಿಗೆ ನೋಟ.
  • ಉಗುಳಿ ಉಗುಳಿ ರೋಗ, ಬೊಗಳಿ ಬೊಗಳಿ ರಾಗ.
  • ಆಸೆ ಆಸ್ತಿ ಮಾಡ್ತು, ದುರಾಸೆ ನಾಶ ಮಾಡ್ತು.
  • ಅಪಕೀರ್ತಿ ತರುವ ಮಗನಿಗಿಂತ, ಸತ್ಕೀರ್ತಿ ತರುವ ಆಳೇ ಮೇಲು.
  • ಕೊಟ್ಟು ಕೆಟ್ಟವರಿಲ್ಲ, ತಿಂದು ಬದುಕಿದವರಿಲ್ಲ.
  • ಸಮಯಕ್ಕೆ ಬಾರದ ಬುದ್ಧಿ, ಸಾವಿರ ಇದ್ದರು ಲದ್ದಿ,
  • ಹೊರಗೆ ಝಗ ಝಗ, ಒಳಗೆ ಭಗ ಭಗ.
  • ಕಲ್ಲಾದರು ಕರಗಬಹುದು, ಕಪಟಿಯ ಮನಸ್ಸು ಕರಗದು.
  • ಮೂಕವೇದನೆಯು ಸತ್ಯಕ್ಕಿಂತ ಮೇಲು.
  • ಕೃತಿಯಿಲ್ಲದ ಮಾತು, ಕಸ ಬೆಳೆದ ತೋಟವಿದ್ದಂತೆ.
  • ಒಳ್ಳೆಯ ಕೆಲಸಕ್ಕೆ ವಿಘ್ನ ಹೆಚ್ಚು.
  • ಲೆಕ್ಕಕ್ಕಿಂತ ಹೆಚ್ಚು ಹೊರಬಾರದು, ಲೆಕ್ಕಕ್ಕಿಂತ ಹೆಚ್ಚು ದೂರೆಬಾರದು.
  • ಅರ್ಧ ಕಲಿತವನ ಆಬ್ಬರ ಹೆಚ್ಚು.
  • ದೇಶ ತಿರುಗಬೇಕು, ಭಾಷೆ ಕಲಿಯಬೇಕು.
  • ಆಸೆಗೆ ಮಿತಿಯಿಲ್ಲ, ಆಕಾಶಕ್ಕೆ ಅಳತೆಯಿಲ್ಲ.
  • ಅಲ್ಪರ ಸಂಗ ಅಭಿಮಾನ ಭಂಗ.
  • ಸಂಕೋಚ ಮಾಡಿದರೆ ಸಂಕಪಾಷಾಣವೂ ಸಿಗದು.
  • ಬಾವಿ ತೋಡದೆ ನೀರು ಸಿಗದು, ಪ್ರಯತ್ನ ಮಾಡದೆ ಫಲ ಸಿಗದು.
  • ಪಡಿತಿಂದು ಗುಡಿಯಲ್ಲಿ ಉರುಳಾಡಿದ.
  • ನೋಡಿ ನಡೆದವನಿಗೆ ಕೇಡಿಲ್ಲ.
  • ಪದವೂ ಮುಗಿಯಿತು, ತಂತಿಯೂ ಹರಿಯಿತು
  • ಪದವಿ ಬಂದ ಬಳಿಕ ಮದವೂ ಬರತಕ್ಕದ್ದೆ.
  • ಪಾಪಕ್ಕೆ ಹೆದರು, ತಾಪಕ್ಕೆ ಹೆದರದಿರು.
  • ಪುಷ್ಪವಿಲ್ಲದ ಪೂಜೆ, ಅಶ್ವವಿಲ್ಲದ ಅರಸನಿಗೆ ಸಮ.
  • ಮಗ ಸಣ್ಣವನಾದರೂ, ಮಾತು ಸಣ್ಣದಲ್ಲ.
  • ಮಂತ್ರ ಸ್ವಲ್ಪ, ಉಗುಳೇ ಬಹಳ.
  • ಮಾನ ಹೋದ ಮೇಲೆ ಮರಣ ಬಂದ ಹಾಗೆ.
  • ಬೆಲ್ಲವಿದ್ದಲ್ಲಿ ನೊಣ, ಕೆಂಡವಿದ್ದಲ್ಲಿ ಕಾವು.
  • ಬೇಕಾದ ಮಾತು, ಬೆಲ್ಲಕ್ಕಿಂತ ಸವಿ.
  • ಬಾಯಿ ಬಂಗಾರ, ಮನ ಅಂಗಾರ.
  • ಬಾಯಿಯಿದ್ದ ಮಗ ಬದುಕುವನು.
  • ಭಾರವಾದ ಪಾಪಕ್ಕೆ ಘೋರವಾದ ನರಕ.
  • ಬೀಜದಂತೆ ವೃಕ್ಷ, ವೃಕ್ಷದಂತೆ ಬೀಜ.
  • ಬಿಸಿಯಾದರೆ ಮಾತ್ರ ಬೆಣ್ಣೆ ಕರಗುವುದು.
  • ಕಲಿತವನಿಗಿಂತ ನುರಿತವನೇ ಮೇಲು.
  • ಕಷ್ಟದಂತೆ ಫಲ, ಮನದಂತೆ ಮಹಾದೇವ.
  • ಕೀಟ ಸಣ್ಣದಾದರೂ ಕಾಟ ಬಹಳ.
  • ಕುರಿ ಹಿಂಡಲ್ಲಿ ತೋಳ ಹೊಕ್ಕಂತೆ.
  • ಕೂಳಿಗೆ ಮೂಲ ಭೂಮಿಗೆ ಭಾರ.
  • ಕೇಳುವವರ ಮುಂದೆ ಹೇಳುವವರು ದಡ್ಡರು.
  • ಹಿರಿಯರಿಗೆ ಶಿರಬಾಗು, ಗುರುವಿಗೆ ತಲೆಬಾಗು.
  • ಹಿಡಿ ತುಂಬ ಹಣವಿದ್ದರು ಗುಡಿ ಚೆನ್ನಾಗಿರಬೇಕು.
  • ಹಸಿದವನಿಗೆ ಹಳಸಿದ್ದೇ ಪಾವನ.
  • ಹರಿದಿದ್ದೇ ಹಳ್ಳ, ನಿಂತಿದ್ದೇ ತೀರ್ಥ.
  • ಸುಳ್ಳು ಹೇಳುವುದಕ್ಕಿಂತ ಸುಮ್ಮನಿರುವುದು ಲೇಸು.
  • ಸುಣ್ಣ ತಿಂದ ಮಂಗ ಹಲ್ಲು ಕಿಸಿದಂತೆ.
  • ಸುಡುಗಾಡಿನಲ್ಲಿ ಕುಳಿತು ಸುಖ ಬಯಸಿದಂತೆ.
  • ಎಣ್ಣೆ ತಣ್ಣಗಾದರೆ ಬೆಣ್ಣೆಯ ಹಾಗೆ ಇದ್ದೀತೆ?
  • ಅಹಂಕಾರ ಇದ್ದ ಮನುಷ್ಯ ಏನನ್ನೂ ಸಾಧಿಸಲಾರ.
  • ಕಡಲೆಗೆ ಮುಂದು ಕಡಿವಾಣಕ್ಕೆ ಹಿಂದು.
  • ಆಸೆಯೇ ಜೀವನ, ಜೀವನವೇ ಆಸೆ.
  • ಎಡವಿದ ಕಾಲೇ ಎಡವುದು ಹೆಚ್ಚು.
  • ಸಾವಿಲ್ಲದ ಮನೆಯಿಲ್ಲ, ಸೋಲಿಲ್ಲದ ಮನುಷ್ಯನಿಲ್ಲ.
  • ಎಣ್ಣೆ ಬರುವಾಗ ಗಾಣ ಮುರೀತು.
  • ಆಸೆ ಆಕಾಶದಷ್ಟು, ಸಾಧನೆ ಸಾಸಿವೆಯಷ್ಟೇ.
  • ಇಲಿ ಬೇಟೆಗೆ ತಮಟೆ ಬಡಿದಂಗೆ.
  • ಉಳಿ ಸಣ್ಣದಾದರು ಕುಳಿ ತೋಡದೆ ಬಿಡಲಾರದು.
  • ಕಡಲೆ ತಿಂದು ಕೈತೊಳೆದ ಹಾಗೆ.
  • ಮದುವೆ ಸಂಭ್ರಮದಲ್ಲಿ ತಾಳಿ ಕಟ್ಟುವುದನ್ನೇ ಮರೆತಂತೆ.
  • ತುಂಟ ಮಂಟಪಕ್ಕೋದರೂ ತುಂಟತನ ಬಿಡಲಿಲ್ಲ.
  • ಹೆಂಡತಿ ಮುಂದಿರಬೇಕು, ಮಗ ಹಿಂದಿರಬೇಕು.
  • ಕಜ್ಜಿ ಕೆರೆದಷ್ಟು ಹಿತ, ಚಾಕೂ ಮಸೆದಷ್ಟೂ ಹರಿತ.
  • ಕೋಟಿಗೆ ಒಬ್ಬ ಕುಬೇರ, ನೋಟಕ್ಕೆ ಒಬ್ಬ ಸುಂದರ.
  • ಜಾತಿ ಜಾತಿಗೆ ವೈರಿ, ನಾಯಿ ನಾಯಿಗೆ ವೈರಿ.
  • ಮದುವೆ ಸಾಲ ಮಸಣಾದವರೆಗೂ.
  • ನೂಲಿನಂತೆ ಸೀರೆ, ಬೀಜದಂತೆ ವೃಕ್ಷ.
  • ಶ್ರೀಮಂತನ ಮನೆ ಸೀಮಂತಕ್ಕೆ ಬಡವ ಬಡಬಡಿಸಿದ ಹಾಗೆ.
  • ಮೊಸರು ಇಟ್ಟುಕೊಂಡು ಮಜ್ಜಿಗೆಗೆ ಅತ್ತಹಾಗೆ.
  • ಕುಡಿಗೆ ಕುಂಬಳಕಾಯಿ ಭಾರವೇ?
  • ಮಾವನು ಇಲ್ಲದ ಮನೆಯೇಕೆ, ಹೆಂಡತಿಯಿಲ್ಲದ ಒಡವೆಯೇಕೆ?
  • ಊಟವಿಲ್ಲದ ಉಪದೇಶಿ ಊರಿಗೆಲ್ಲಾ ನಿವಾಸಿ.
  • ಸೋಲಿಲ್ಲದ ಸರದಾರನಿಲ್ಲ, ಸಂಗಮವಿಲ್ಲದ ಸಾವಿಲ್ಲ.
  • ಪ್ರೇಮಿಗಳಿಲ್ಲದ ನಾಡು ಬರೀ ಶೂನ್ಯದ ಬೀಡು.
  • ಆತ್ಮೀಯವಾದ ಪ್ರೇಮ ಅಮರವಾದದ್ದು.
  • ಸ್ನೇಹ ಎಂಬ ಸಂಪಿಗೆ ಸುಮಧುರವಾದದ್ದು.
  • ತಾಯಿಯ ಪ್ರೀತಿ ಸುಖವಾದದ್ದು, ತಂದೆಯ ಪ್ರೀತಿ ಮಧುರವಾದದ್ದು.
  • ಮಮತೆಯ ಮಡಿಲಲ್ಲಿ ತೂಗಬೇಕು, ಮನಸ್ಸೆಂಬ ಬಂಧನದಲ್ಲಿ ಬೀಳಬೇಕು.
  • ಸಂಸಾರದಲ್ಲಿ ಸುಖವಿದೆ, ಬಾಳೆಂಬ ಬಂಧನದಲ್ಲಿ ಕಷ್ಟವಿದೆ.
  • ತಾಯಿಯನ್ನು ನಿಂದಿಸಬೇಡ, ಒಳ್ಳೆಯವರನ್ನು ಬಂಧಿಸಬೇಡ.
  • ಮನಸ್ಸನ್ನು ನಿಯಂತ್ರಿಸಿ ಜೀವನ ಸಾಗಿಸಿ.
  • ಮನೆ ಬೆಳಗಲಿ ದೀಪ ಬೇಕು, ಮಾನವ ಬೆಳಗಲು ಅಕ್ಷರ ಬೇಕು.
  • ಕತ್ತೆಗೆ ತಿಪ್ಪೆಯೇ ತವರುಮನೆ.
  • ಕತ್ತೆಗೆ ಯಾಕೆ ಹತ್ತಿಕಾಳು?
  • ಸಣ್ಣದಿರುವಾಗ ಕತ್ತೆಯೂ ಬಹಳ ಸುಂದರ.
  • ಕತ್ತೆಯಾಗಬೇಡ ಕಾಗೆಯಾಗು.
  • ಕತ್ತೆಯ ಹಿಂದೆ ಹೋಳಿಹುಣ್ಣಿಮೆಯಲ್ಲಿ ಮಾತ್ರ ಹೋಗು.
  • ಅಪದ್ದಕ್ಕೆ ಅಪ್ಪಣೆ ಕೊಟ್ರೆ ಬಾಯಿಗೆ ಬಂದದ್ದೇ ಮಾತು.
  • ಅಪ್ಪ ಮಾಡಿದ ಪುಣ್ಯ ಮಕ್ಕಳ ಕಾಲಕ್ಕೆ.
  • ಅಪ್ಪನ ಸಾಲಕ್ಕೆ ಮಗನನ್ನು ತಿಪ್ಪೆ ಮೇಲೆ ಎಳೆದರು.
  • ಅರಿತರೆ ಮಾತನಾಡು, ಮರೆತರೆ ಕೂತು ನೋಡು.
  • ಆಕಾಶ ನೋಡೋಕೆ ನೂಕಾಟವೇಕೆ?
  • ಗುರುಕೊಟ್ಟ ಜೋಳಿಗೆ ಅಂತ ಗೂಟಕ್ಕೆ ಹಾಕಿದರೆ ಊಟ ಹಾಕೀತೆ?
  • ಜಾರುವುದು ತಪ್ಪಿದರೆ ಏರುವುದು ಸಾಧ್ಯ.
  • ಧೂಳಿ ಧೂಪವಾದೀತೆ, ಮಾಳಿಗೆ ಸ್ವರ್ಗವಾದೀತೆ?
  • ಬಾಳೆಂಬ ಬಂಧನದಲ್ಲಿ ಈಜಬೇಕು, ಸಂಸಾರ ಎಂಬ ಸಾಗರದಲ್ಲಿ ತೇಲಬೇಕು.
  • ಹೆಸರು ಸಂಪತ್ತು, ಕೂಳಿಗಿಲ್ಲ ಒಪ್ಪತ್ತು.
  • ನೇಯುವ ಕಾಲ ತಪ್ಪಿದರೂ, ಸಾಯುವ ಕಾಲ ತಪ್ಪದು.
  • ಕೀಳನ ಕೆಣಕಬೇಡ, ಮೇಗಾಲು ತುರಿಸಬೇಡ.
  • ಹೊಟ್ಟೆ ತುಂಬಿದ ಮೇಲೆ ಕಜ್ಜಾಯವೂ ವಿಷ
  • ದೇವರನ್ನು ಬಯ್ಯುವವರು ಅರ್ಚಕನನ್ನು ಬಿಟ್ಟಾರೆ?

Friday, January 10, 2025

ಕನ್ನಡದ ಕವಿ ಚಕ್ರವರ್ತಿಗಳು

January 10, 2025 0


1) ಪಂಪ :

ಸುಮಾರು 600 ವರ್ಷಗಳ ಹಿಂದೆ ಪುಣ್ಯಶ್ರವ ಚಂಪೂ ಕೃತಿ ರಚಿಸಿದ ನಾಗರಾಜ ಎಂಬ ಕವಿ ಬರೆದ ಸ್ತುತಿ ಪದ್ಯವಿದು

ಜಗತ್ತಿನ ಮಹಾಕವಿಗಳ ತಾರಾಗಣದಲ್ಲಿ ಪಂಪನಿಗೆ ಅಗ್ರಸ್ಥಾನ ಸಲ್ಲುತ್ತದೆ.

ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ಬರೆದಿದ್ದರೂ ಅದರ ನಕಲಲ್ಲ ಪ್ರಬುದ್ಧ ಪ್ರಜ್ಞೆಯ ಪರಿಪಕ್ವ ಅನುಭವವಿದೆ.

ಈ ಸತ್ವತೆಯಲ್ಲಿ ಬರೆದ ಆದಿ ಪುರಾಣ ಮತ್ತು ವಿಕ್ರಮಾರ್ಜುನ ವಿಜಯವು ಅವನಿಗಿದ್ದ ಬಿರುದುಗಳಾದ

ಕವಿತಾಗುಣಾ ರ್ಣವ'

,ಸುಕವಿ

ಜನಮಾನಕೊತ್ತಂಸಹಂಸ೦.

ಸಂಸಾರಸಾರೋದಯಂ'

ಸರಸ್ವತೀ ಮಣಿಹಾರಂ

ಇದೇ ಮೊದಲಾದ ಬಿರುದುಗಳನ್ನು ಆಧರಿಸಿ ನೋಡಿದಾಗ ಅವನ ವ್ಯಕ್ತಿತ್ವ ದರ್ಷಣಕ್ಕೆ ಸೂಕ್ತವಾಗಿವೆ.

  • ಅವನ ಕೃತಿಗಳು ಓಜೋನ್ವಿತವಾಗಿದ್ದರೂ ಸ್ವಂತಿಕೆಯಿದೆ.
  • ಇಂದಿನ ಆಂಧ್ರಪ್ರದೇಶದಲ್ಲಿರುವ ಅಂದಿನ ವೆಂಗಿಮಂಡಲದ ವೆಂಗಿ ಪೊಳಲಲ್ಲಿ ಅವರ ಪೂರ್ವಜರಾದ ಶ್ರೀವತ್ಸ ಗೋತ್ರ ಬ್ರಾಹ್ಮಣ ಕುಲದ - ಮಾಧವ ಸೋಮಯಾಜಿ - ಅಭಿಮಾನ ಚಂದ್ರ - ಕೊಮರಯ್ಯ - ಭೀಮಪಯ್ಕ -ಪಂಪನಾಗಿ ಜನಿಸಿದನು.
  • "ಜಾತಿಯೊಳೆಲ್ಲ ಮುತ್ತಮದ ಜಾತಿ ವಿಪ್ರ ಕುಲವನ್ನು " ಜಿನೇಂದ್ರ ಧರ್ಮಮೇವಲ೦. ದೊರೆ ದರ್ಮದೊಳೆಂದು ನಂಬಿ ಜೈನಧರ್ಮಾವಲಂಭಿಯಾಗುತ್ತಾನೆ.
  • ತನ್ನ ಬಾಲ್ಯದ ಬಹುಕಾಲವನ್ನು ತಾಯಿಯ ತಾಯಿ ತವರಾದ ಬೆಳ್ವಲದ ' ಅಣ್ಣಿಗೆರೆಯ ' ತವರೂರಲ್ಲಿ ಬೆಳೆದು, ಬನವಾಸಿ ಪ್ರದೇಶದಲ್ಲಿ ಸುತ್ತಾಡಿ ಬೆಳೆದು ಅಲ್ಲಿ ಮೈಗೂಡಿದ ಆ ಪ್ರಾಂತ್ಯದಲ್ಲಿನ ಆಡುನುಡಿಯಾಗಿದ್ದ ಪುಲಿಗೆರೆಯ ತಿರುಳ್ಗನ್ನಡ ವನ್ನೇ ರಕ್ತಗತವಾಗಿಸಿಕೊಂಡು ತನ್ನ ಪೂರ್ವಜರ ಸಂಸ್ಕಾರಯುತ ಪಾಂಡಿತ್ಯ , ಅಜ್ಜ -ಅಜ್ಜಿ ಮಾವಂದಿರಡಿ ಅರಿತು -ನುರಿತ ವನಾದನು.
  • ಪಶ್ಚಿಮ ಚಾಲುಕ್ಯ ಅರಿಕೇಸರಿಯ ಆ ಸ್ಥಾನದಲ್ಲಿ ಕೃಷ್ಣಾರ್ಜುನರ ಸಖ್ಯದಂತೆ ಬೆಳೆದ ಆತ್ಮೀಯತೆಯಿಂದ , ತನ್ನನ್ನು ಪ್ರಾಣಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ ಅರಿಕೇಸರಿಯನ್ನೇ ಅರ್ಜುನನಿಗೆ ಸಮೀಕರಿಸಿ , ಗಾಢಾನು ರಾಗವನ್ನು ಧಾರೆ ಎರೆದು , ವಿಕ್ರಮಾರ್ಜುನ ವಿಜಯ ಬರೆಯುತ್ತಾರೆ.
  • ತಾನು ರಚಿಸಿದ ಪಾತ್ರಗಳಲ್ಲಿ ಕವಿ ಲೀನವಾಗಿ ಕವಿತೆಯೊಳಾಸೆಗೆಯ್ವ ಫಲ ಯಾವುದೊ ?.
  • ಪೂಜೆ ನೆಗಳ್ತೆ ಲಾಭವೆಂಬಿವೆ ವಲಂ -
  • ಎಂಬಂತೆ ಜಿನೇಂದ್ರ ಗಣಸ್ತುತಿಯಿಂದೆ ತಾಮೆ ಸಾರವೆ? ಎಂಬ ಶ್ರದ್ಧೆ ಅವನದು.


2) ರನ್ನ :

  • ಬೆಳಗಾಂನ ಬಿಜಾಪುರಪ್ರಾಂತ್ಯದ ಭಾಗಕ್ಕೆ ಸೇರಿದ ಕೃಷ್ಣ - ಘಟಪ್ರಭಾ ನದಿಗಳು ಹರಿಯುತ್ತಿದ್ದ ಜಮುಖಂಡಿ ಪ್ರಾಂತ್ಯದ ಮುಧವೂಳಲು ಎಂಬ ಊರಿನಲ್ಲಿ ಕವಿ ಬಳೆಗಾರ ಕುಲದ ಜಿನವಲ್ಲಭೇಂದ್ರ - ಅಬ್ಬಲಬ್ಬೆಯರಲ್ಲಿ ಕ್ರಿ.ಶ.94 9ರಲ್ಲಿ ಜನಿಸಿದನು.
  • ಬಂಕಾಪುರದಲ್ಲಿದ್ದ ವಿದ್ಯಾ ಕೇಂದ್ರಕ್ಕೆ ಬಂದು ಅಜಿತಸೇನಾಚಾರ್ಯರ ಬಳಿ ಜೈನಾಗಮ ಸಾಹಿತ್ಯ ಕುರಿತು ಓದಿಕೊಂಡ , ನಂತರ ಗಂಗ ಸಾಮ್ರಾಜ್ಯದ ಮಂತ್ರಿಯಾಗಿದ್ದ ಚಾವುಂಡರಾಯ ಮತ್ತು ರಾಜಮಾತೆ ಅತ್ತಿಮಬ್ಬೆಯರ ಬಳಿ ಉಪಕೃತನಾಗಿದ್ದುಕೊಂಡು ಆ ಸ್ಥಾನ ಕವಿಯಾಗಿದ್ದನು.
  • ಪರಶುರಾಮ ಚರಿತ
  • ಚಕ್ರೇಶ್ವರ ಚರಿತೆ
  • ಸಾಹಸ ಭೀಮ ವಿಜಯ -
  • ಅಜಿತ ಪುರಾಣ -
  • ರನ್ನ ಕಂದ

ಬರೆದಿರುವುದಾಗಿ ಕವಿಯೇ ಹೇಳಿದ್ದಾನೆ.

  • ಮೊದಲೆರಡು ಕೃತಿಗಳು ಉಪಲಬ್ಧವಿಲ್ಲ 'ಶಾಂತಿ' ಮತ್ತು ' ಜಕ್ಕಿ' ಎಂಬ ಇಬ್ಬರು ಮಡದಿಯರನ್ನು ಮದುವೆಯಾಗಿ ತನ್ನ ಮಕ್ಕಳಿಗೆ ಹೆಸರುಗಳನ್ನು ಚಾವುಂಡರಾಯ ಮತ್ತು ರಾಜಮಾತೆ ' ಅತ್ತಿಮಬ್ಬೆಯರ ' ಸ್ಮರಣೆಗೆ ಈ ಎರಡು ಹೆಸರುಗಳನ್ನು ತನ್ನ ಮಕ್ಕಳಿಗಿ ಇಟ್ಟು ಸಲಹುತ್ತಾನೆ.
  • ಪಂಪನಂತೆ ಅದ್ವಿತೀಯನಲ್ಲದಿದ್ದರೂ
  • ದ್ವಿತೀಯ ವರ್ಗದ ಮಹಾಕವಿ ಎನ್ನ ಲು ಅವಕಾಶವುಂಟು.
  • ಸಾಹಸ ಭೀಮ ವಿಜಯದಲ್ಲಿ ಮಹಾಕಾವ್ಯದ ಲಕ್ಷಣಗಳಿದ್ದರೂ, ದೀರ್ಘತೆ ಸಾಲದೆಂದುದೇ . ದ್ವಿತೀಯ ವರ್ಗದ ಮಹಾಕವಿ ಎಂಬ ಅಭಿಪ್ರಾಯವನ್ನು ದೇ.ಜವರೇಗೌಡರು ಅಭಿಪ್ರಾಯ ಪಡುತ್ತಾರೆ.
  • ಆದರೆ ಅವನಲ್ಲಿ ಪಂಪ ಮಹಾಕವಿಯ ಆತ್ಮಪ್ರತ್ಯಯವಿದೆ. ಹೇಗೆಂದರೆ,
  • ಆದಿಪುರಾಣ ಮತ್ತು ಅಜಿತ ಪುರಾಣಗಳು ಮೂರು ಲೋಕಗಳಲ್ಲಿಯೂ ಹರಡಿದೆಯೆಂದು ಕವಿಗಳಲ್ಲಿ ತಾನು - ಮತ್ತು ಪಂಪ ಮಾತ್ರ ಪುಣ್ಯವಂತರೆಂದು ಕೃತಾರಾರ್ಥ ರೆಂದು 'ಸೊಬಗ ' ರೆಂದು ಹೇಳುವಲ್ಲಿ ಆತ್ಮಪ್ರಶಂಸೆಯ ಜೊತೆಗೆ ಪಂಪನ ಮೇಲಣ ಗೌರವವು ವ್ಯಕ್ತವಾಗುತ್ತದೆ.
  • ಮಹಾ ಭಾರತದ ಯುದ್ಧದ ಕೊನೆಯ ಅರ್ಧ ದಿನದ ಭೀಮ ದುರ್ಯೋಧನರ ನಡುವೆ ನಡೆಯುವಸಂಗ್ರಾಮವು 10 ಅಶ್ವಾಸಗಳಲ್ಲಿ 13 ನೇ ಅಶ್ವಾಸದ ಕಥೆಯನ್ನು ತನ್ನ ಕೃತಿಗೆ ಬಳಸಿಕೊಂಡಿದ್ದಾನೆ.
  • ಭಾಸ ಭಟ್ಟ ' 'ನಾರಾಯಣನ ' ಊರುಭಂಗ ' . ವೇಣಿ ಸಂಹಾರ ನಾಟಕಗಳ ಪ್ರಯೋಜನ ಪಡೆದುಕೊಂಡಿದ್ದಾರೆ. -
  • "ಕಥೆಯಲ್ಲಿಮೀಗಧಾಯುದ್ಧದಳಂತೊಳಕೊಂಡತ್ತೆನೆ " . ಎಂದು ಸಾಹಸ ಭೀಮ ವಿಜಯವನ್ನು ಸಿಂಹಾವಲೋಕನ ಕ್ರಮದಿಂದ ರಚಿಸಿದ್ದಾನೆ.
  • ಭೀಮ ದ್ರೌಪದಿಯರ ಸಂವಾದ, ಭೀಮನ ಉಗ್ರ ಪ್ರತಿಜ್ಞೆ, ದುರ್ಯೋಧನನ ರಣರಂಗ ಸಂಚಾರ,ದ್ರೋಣಾಶ್ವತ್ಥಾಮರ ವಾಗ್ವಾದ ಪಾಂಡವರ ಅವಹೇಳನ - ಸಂಜಯನಿಂದ ಪಾಂಡವರ ಪ್ರಶಂಸೆ ,ದೃತರಾಷ್ಟ್ರ ಗಾಂಧಾರಿಯ ಸಂತಾಪ ' ಅಲ್ಲದೆ '
  • ಅಭಿಮನ್ಯು. ಕರ್ಣ ದುಶ್ಯಾಸನರ ಕುರಿತು ದುರ್ಯೋಧನನ ಕರುಳು ಕರಗಿಸುವ ಶೋಕ ಗೀತೆ .
  • ದುರ್ಯೋಧನ ವೈಶಂಪಾಯನ ಸರೋವರ . ಪ್ರವೇಶ , ಆ ಸಂದರ್ಭದ ಗಾಂಭಿರ್ಯವಾದ ವರ್ಣನೆ
  • ಅಶ್ವಥಾಮನ ಲಕ್ಷ್ಮಿ ವಿಡಂಬನೆ,
  • ಭೀಮನ ಪಟ್ಟಾಭಿಷೇಕ ನಾಟಕೀಯತೆಯಲ್ಲಿ
  • ಓಜೋನ್ವಿತ ಶೈಲಿಯಲ್ಲಿ ಈ ಕೃತಿಗೆ ಸರಿಗಟ್ಟುವ ಕಾವ್ಯಗಳು ವಿರಳ ವೆನ್ನಬಹುದು.

3) ಪೊನ್ನ:

  • ಸಾ ಶ 9 39 - 968 ರಲ್ಲಿ ರಾಷ್ಟ್ರಕೂಟರ 3 ನೇ ಕೃಷ್ಣನ ಆಸ್ಥಾನದಲ್ಲಿ ಇದ್ದರು..ಆಂಧ್ರಪ್ರದೇಶದ ' ಕಮ್ಮನಾಡಿನ'ಪುಂಗನೂರಿನ ವೆಂಗಿ ಜಿಲ್ಲೆಯಲ್ಲಿ ಜನಿಸಿ ದರು.
  • 'ಜೈನ 'ಧರ್ಮ ಸ್ವೀಕರಿಸಿದ ನಂತರ ಕುಬುರ್ಗಿಗೆ ವಲಸೆ ಬರುತ್ತಾನೆ.


ಸಾ ಶ . 939-968ರ ವರೆಗೂ ರಾಷ್ಟ್ರಕೂಟರ 3 ನೇ ಕೃಷ್ಣನ ಆಸ್ಥಾನದಲ್ಲಿ ಇದ್ದನು.

ಈಗಿನ ಆಂಧ್ರಪ್ರದೇಶದ ಕಮ್ಮ ನಾಡು, ಪುಂಗನೂರಿನ 'ವೆಂಗಿ 'ಜಿಲ್ಲೆಗೆ ಸೇರಿದೆ. ಜೈನ ಧರ್ಮ ಸ್ವೀಕರಿಸಿದ ನಂತರ ಕರ್ನಾಟಕದ ಕಲಬುರಗಿಗೆ ವಲಸೆ ಬರುತ್ತಾನೆ.

ಇವನು ರಚಿಸಿದ ಕೃತಿಗಳು

'ಜಿನಾಕ್ಷರಮಾಲೆ'

'ಭುವನೈಕ ರಾಮಾಭ್ಯುದಯ'

'ಶಾಂತಿ ಪುರಾಣ ' ಗಳನ್ನು ಬರೆದನು.

ಬಿರುದುಗಳು :

  • ಸಂಸ್ಕೃತ ಮತ್ತು ಕನ್ನಡ ಎರಡೂ ಭಾಷೆಯ ಹಿಡಿತವಿದ್ದುದರಿ೦ದ ' ಉಭಯಕವಿ' ಮತ್ತು 'ಕವಿಚಕ್ರವರ್ತಿ' ಎಂಬ ಬಿರುದು ಹೊಂದಿದ್ದರು..
  • ಇವನ ಶಾಂತಿ ಪುರಾಣವು ಚಂಪೂ ಶೈಲಿಯಲ್ಲಿ ಇದ್ದು 16ನೇ ಜೈನ ತೀರ್ಥಂಂಕರರ ಸ್ತೋತ್ರವಾಗಿದೆ.
  • ಇದು 'ಆ ಸಗ' ನ ಮೂಲ ಕಾವ್ಯ ಆಧರಿಸಿ ಬರೆದಿದೆ.
  • 3 ನೇ ಕೃಷ್ಣನ ಸಾಮಂತ ದೊರೆ ಶಂಕರ ಗಂಡ ನ ಸ್ತುತಿಸಿ ಬರೆದುದಾಗಿದೆ. -
  • ಈ ರೀತಿ ಮೂರು ಜನ ರತ್ನತ್ರಯರು ಕನ್ನಡ ನಾಡಿನ ಕನ್ನಡ ಸಾಹಿತ್ಯದ ಶಾಸ್ತ್ರೀಯ ಯುಗದ ಪ್ರಮುಖರಾಗಿದ್ದಾರೆ. -
  • ಹೆಚ್ಚಿನ ವಿಷಯ ಕ್ಕಾಗಿ - ಪ್ರೊ. ದೇ. ಜೆ . ಗೌಡ ರವರ "ಪೂರ್ವಕವಿಗಳಿಗೆ ನಮನ " ಕೃತಿ ಓದಿ

ಕೃಪೆ - ಗೂಗಲ್ ಮತ್ತು ಕೋರಾ (Quora) ದಿಂದ 

Thursday, January 9, 2025

ಕನ್ನಡದ ರಾಷ್ಟ್ರ ಕವಿಗಳು ಮತ್ತು ಸಾಹಿತಿಗಳ ಕಾವ್ಯನಾಮಗಳು

January 09, 2025 0
ಕನ್ನಡದ ರಾಷ್ಟ್ರ ಕವಿಗಳು ಮತ್ತು ಸಾಹಿತಿಗಳ ಕಾವ್ಯನಾಮಗಳು

 

ಕನ್ನಡದ ರಾಷ್ಟ್ರ ಕವಿಗಳು

ಎಂ ಗೋವಿಂದ ಪೈ 
ಮದ್ರಾಸ್ 1949

ಕುವೆಂಪು 
ಕರ್ನಾಟಕ 1964

ಜಿ.ಎಸ್.ಶಿವರುದ್ರಪ್ಪ 
ಕರ್ನಾಟಕ ೨೦೦೬

ಸಾಹಿತಿಗಳ ಕಾವ್ಯನಾಮಗಳು

1 ಅಜ್ಜಂಪುರ ಸೀತಾರಾಂ - ಆನಂದ


2 ಅರಕಲಗೂಡು ನರಸಿಂಗರಾವ್ ಕೃಷ್ಣರಾವ್ - ಅ.ನ.ಕೃ


3 ಅರಗದ ಲಕ್ಷ್ಮಣರಾವ್ - ಹೊಯ್ಸಳ


4 ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ - ಅ.ರಾ.ಮಿತ್ರ


5 ಆದ್ಯರಂಗಾಚಾರ್ಯ - ಶ್ರೀರಂಗ


6 ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ - ಕೆ.ಎಸ್.ಎನ್


7 ಕೆ.ವಿ.ಪುಟ್ಟಪ್ಪ - ಕುವೆಂಪು


8 ಕುಂಬಾರ ವೀರಭದ್ರಪ್ಪ - ಕುಂವೀ


9 ಕಯ್ಯಾರ ಕಿಞ್ಞಣ್ಣರೈ - ದುರ್ಗಾದಾಸ


10 ಕಸ್ತೂರಿ ರಘುನಾಥಚಾರ ರಂಗಾಚಾರ -  ರಘುಸುತ


11 ಕುಳಕುಂದ ಶಿವರಾಯ -  ನಿರಂಜನ


12 ಕೆ.ಪಿ.ಪೂರ್ಣಚಂದ್ರ ತೇಜಸ್ವಿ - ಪೂಚಂತೇ


13 ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ -  ಜಿ ಎಸ್ ಎಸ್


14 ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ - ಜಡಭರತ


15 ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ -  ಮಧುರಚೆನ್ನ


16 ಚಂದ್ರಶೇಖರ ಪಾಟೀಲ - ಚಂಪಾ


17 ಜಾನಕಿ ಶ್ರೀನಿವಾಸ ಮೂರ್ತಿ - ವೈದೇಹಿ


18 ತಳುಕಿನ ರಾಮಾಸ್ವಾಮಿ ಸುಬ್ಬರಾವ್ - ತ.ರಾ.ಸು

.
19 ತಿರುಮಲೆ ರಾಜಮ್ಮ - ಭಾರತಿ


20 ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ - ತೀನಂಶ್ರೀ


21 ದ.ರಾ.ಬೇಂದ್ರೆ - ಅಂಬಿಕಾತನಯದತ್ತ


22 ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ - ಡಿವಿಜಿ


23 ದೇ.ಜವರೇಗೌಡ - ದೇಜಗೌ


24 ದೊಡ್ಡರಂಗೇಗೌಡ - ಮನುಜ


25 ದೇವುಡು ನರಸಿಂಹ ಶಾಸ್ತ್ರಿ ಕುಮಾರ - ಕಾಳಿದಾಸ


26 ನಂದಳಿಕೆ ಲಕ್ಷ್ಮೀನಾರಾಯಣ - ಮುದ್ದಣ


27 ಪಾಟೀಲ ಪುಟ್ಟಪ್ಪ - ಪಾಪು


28 ಪಂಜೆ ಮಂಗೇಶರಾಯ - ಕವಿಶಿಷ್ಯ


29 ಪುರೋಹಿತ ತಿರುನಾರಾಯಣ ನರಸಿಂಗರಾವ್ - ಪುತಿನ


30 ರಾಯಸಂ ಭಿಮಸೇನರಾವ್ - ಬೀಚಿ


31 ಬಾಳಾಚಾರ್ಯ ಗೊಪಾಲಚಾರ್ಯ - ಸಕ್ಕರಿ ಶಾಂತಕವಿ


32 ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ - ಬಿಎಂಶ್ರೀ


33 ಬೆಟಗೇರಿ ಕೃಷ್ಣಶರ್ಮ - ಆನಂದಕಂದ


34 ಅಂಬಳ ರಾಮಕೃಷ್ಣಶಾಸ್ತ್ರಿ - ಶ್ರೀಪತಿ


35 ಎ.ಆರ್.ಕೃಷ್ಣಶಾಸ್ತ್ರಿ - ಎ.ಆರ್.ಕೃ


36 ಮಾಸ್ತಿ ವೆಂಕಟೇಶ ಅಯ್ಯಂಗಾರ್ - ಶ್ರೀನಿವಾಸ


37 ರಾಮೇಗೌಡ - ರಾಗೌ


38 ವಿನಾಯಕ ಕೃಷ್ಣ ಗೋಕಾಕ್ - ವಿನಾಯಕ


39 ವೆಂಕಟೇಶ ತಿರುಕೊ ಕುಲಕರ್ಣಿ  - ಗಳಗನಾಥ


40 ಸಿದ್ದಯ್ಯಪುರಾಣಿಕ - ಕಾವ್ಯಾನಂದ


41 ಎಂ.ಆರ್.ಶ್ರೀನಿವಾಸಮೂರ್ತಿ  - ಎಂ.ಆರ್.ಶ್ರೀ


42 ಸಿ.ಪಿ.ಕೃಷ್ಣಕುಮಾರ್ - ಸಿ.ಪಿ.ಕೆ


43 ಎಚ್.ಎಸ್.ಅನುಸೂಯ - ತ್ರಿವೇಣಿ


ಪಂಪ ಪ್ರಶಸ್ತಿ ವಿಜೇತರ ಪಟ್ಟಿ

January 09, 2025 0



1 ಕುವೆಂಪು 

ಶ್ರೀ ರಾಮಾಯಣ ದರ್ಶನಂ 1987

2 ತೀ.ನಂ.ಶ್ರೀಕಂಠಯ್ಯ 
ಭಾರತೀಯ ಕಾವ್ಯ ಮೀಮಾಂಸೆ 1988

3 ಶಿವರಾಮ ಕಾರಂತ 
ಮೈಮನಗಳ ಸುಳಿಯಲ್ಲಿ 1989

4 ಸಂ.ಶಿ.ಭೂಸನೂರಮಠ 
ಶೂನ್ಯ ಸಂಪಾದನೆ -
ಪರಾಮರ್ಶೆ 1990

5 ಪು.ತಿ.ನ. 
ಹರಿಚರಿತೆ 1991

6 ಎ.ಎನ್.ಮೂರ್ತಿರಾವ್ 
ದೇವರು 1992

7 ಗೋಪಾಲಕೃಷ್ಣ ಅಡಿಗ 
ಸುವರ್ಣ ಪುತ್ಥಳಿ 1993

8 ಸೇಡಿಯಾಪು ಕೃಷ್ಣಭಟ್ಟ 
ವಿಚಾರ ಪ್ರಪಂಚ 1994

9 ಕೆ.ಎಸ್.ನರಸಿಂಹಸ್ವಾಮಿ 
ದುಂಡು ಮಲ್ಲಿಗೆ 1995

10 ಎಂ.ಎಂ.ಕಲಬುರ್ಗಿ 
ಸಮಗ್ರ ಸಾಹಿತ್ಯ 1996

11 ಜಿ.ಎಸ್.ಶಿವರುದ್ರಪ್ಪ 
ಸಮಗ್ರ ಸಾಹಿತ್ಯ 1997

12 ದೇಜಗೌ 
ಸಮಗ್ರ ಸಾಹಿತ್ಯ 1998

13 ಚನ್ನವೀರ ಕಣವಿ 
ಕವಿತೆಗಳು 1999

14 ಡಾ. ಎಲ್.ಬಸವರಾಜು 
ಸಮಗ್ರ ಸಾಹಿತ್ಯ (ಸಂಶೋಧನೆ )2000

15 ಪೂರ್ಣಚಂದ್ರ ತೇಜಸ್ವಿ 
ಕನ್ನಡ ಸಾಹಿತ್ಯ ಸೇವೆ 2001

16 ಚಿದಾನಂದಮೂರ್ತಿ 
ಕನ್ನಡ ಸಾಹಿತ್ಯ ಸೇವೆ 2002

17 ಡಾ. ಚಂದ್ರಶೇಖರ ಕಂಬಾರ 
ಕನ್ನಡ ಸಾಹಿತ್ಯ ಸೇವೆ 2003

18 ಹೆಚ್.ಎಲ್.ನಾಗೇಗೌಡ 
ಕನ್ನಡ ಸಾಹಿತ್ಯ ಸೇವೆ 2004

19 ಎಸ್.ಎಲ್.ಭೈರಪ್ಪ 
ಕನ್ನಡ ಸಾಹಿತ್ಯ ಸೇವೆ 2005

20 ಜಿ.ಎಸ್.ಆಮೂರ್ 
ಕನ್ನಡ ಸಾಹಿತ್ಯ ಸೇವೆ 2006

21 ಯಶವಂತ ಚಿತ್ತಾಲ 
ಕನ್ನಡ ಸಾಹಿತ್ಯ ಸೇವೆ 2007

22 ಟಿ.ವಿ.ವೆಂಕಟಾಚಲಶಾಸ್ತ್ರಿ 
ಕನ್ನಡ ಸಾಹಿತ್ಯ ಸೇವೆ 2008

22 ಚಂದ್ರಶೇಖರ ಪಾಟೀಲ 
ಕನ್ನಡ ಸಾಹಿತ್ಯ ಸೇವೆ 2009

23 ಜಿ.ಹೆಚ್.ನಾಯಕ 
ಕನ್ನಡ ಸಾಹಿತ್ಯ ಸೇವೆ 2010

24 ಬರಗೂರು ರಾಮಚಂದ್ರಪ್ಪ 
ಕನ್ನಡ ಸಾಹಿತ್ಯ ಸೇವೆ 2011