ಹಿನ್ನಲೆ
- ಮಧು ಮೇಹ ಒಂದು ವಿಶೇಷ ವೈದ್ಯಕೀಯ ಸ್ಥಿತಿ. ಆಗ ರಕ್ತದಲ್ಲಿನ ಸಕ್ಕರೆ ಪ್ರಮಾಣವು ನಿಗದಿತ ಮಟ್ಟಕ್ಕಿಂತ ಹೆಚ್ಚಾಗುವುದು. ಈ ಪರಿಸ್ಥಿತಿಯಲ್ಲಿ ವ್ಯಕ್ತಿಯು ಪ್ರಜ್ಞಾಹೀನನಾಗ ಬಹುದು. ಇದು ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ನಿರ್ದಿಷ್ಟ ಮಟ್ಟಕ್ಕಿಂತ ಕಡಿಮೆ ಆದಾಗಲೂ ಸಂಭವಿಸುವುದು.
- ಎಲ್ಲ ಮಾನವರಲ್ಲೂ ಪ್ರಜ್ಞಾ ಸ್ಥಿತಿಯು ರಕ್ತದಲ್ಲಿರುವ ಸರಿಯಾದ ಪ್ರಮಾಣದ ಸಕ್ಕರೆ ದ್ರಾವಣವನ್ನು ಅವಲಂಬಿಸಿದೆ. ಚಿಕಿತ್ಸೆ ಪಡೆಯದ ಮಧುಮೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವು ಕಾಲಾನುಕ್ರಮವಾಗಿ (ಕೆಲವು ದಿನಗಳು, ವಾರಗಳು) ಹೆಚ್ಚುತ್ತದೆ. ಅದು ತುಂಬ ಹೆಚ್ಚಾದಾಗ ಆ ವ್ಯಕ್ತಿಯ ಪ್ರಜ್ಞೆ ತಪ್ಪುತ್ತದೆ.
- ಚಿಕಿತ್ಸೆ ಪಡೆಯುತ್ತಿರುವ ಮಧುಮೇಹಿಗಳಲ್ಲಿ, ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವವರಲ್ಲಿ ಇನ್ನೊಂದು ರೀತಿಯಲ್ಲಿ ಪ್ರಜ್ಞೆ ತಪ್ಪಬಹುದು. ಇಲ್ಲವೆ ಕೋಮಾದಲ್ಲಿ ಹೋಗಬಹುದು. ಇನ್ಸುಲಿನ್ ದೇಹದಲ್ಲಿ ಹರಿಯುವ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದು. ಅದು ಸಕ್ಕರೆಯ ಪ್ರಮಾಣವನ್ನು ಅತಿ ಬೇಗ ಮಾಡಿದರೆ, ಇಲ್ಲವೆ ತುಂಬ ಕಡಿಮೆ ಮಾಡಿದರೆ ಬಾಧಿತನು ತಕ್ಷಣವೇ ಪ್ರಜ್ಞೆ ಕಳೆದು ಕೊಳ್ಳುತ್ತಾನೆ. ಕೆಲವೇ ನಿಮಿಷ ಅಥವಾ ಸೆಕೆಂಡುಗಳ ಅವಧಿಯ ಎಚ್ಚರಿಕೆ ನೀಡಬಹುದು. ಆ ಅವಧಿಯಲ್ಲಿ ಬಾಧಿತನ ಮಾತು ಸ್ಪಷ್ಟವಾಗಿರುವುದಿಲ್ಲ ಕಿರಿಕಿರಿ ಮಾಡುವನು, ಮತ್ತು ಸುಸ್ತಾಗುವವನು. ಅವನನ್ನು ಎಚ್ಚರಿಕೆಯಿಂದ ಪರೀಕ್ಷಿಸಿದರೆ ಕಾರ್ಡ್ ಅಥವಾ ವೈದ್ಯಕೀಯ ವಿವರದ ಬ್ರಾಸ್ಲೆಟ್ ನಿಂದ ಅವನ ಮಧುಮೇಹದ ಸಮಸ್ಯೆಯನ್ನು ತಿಳಿಸಬಹುದು. ಒಂದು ಸಲ ಎಚ್ಚರ ತಪ್ಪಿದರೆ ಅವನು ವೈದ್ಯರು ಚಿಕಿತ್ಸೆ ಕೊಡುವ ತನಕ ತೀವ್ರ ಕೊಮಾದಲ್ಲಿಯೇ ಇರುವನು.
ಆರೈಕೆ
- ಅಸ್ಪಷ್ಟ ಮಾತು , ಕಿರಿ ಕಿರಿ ಇದ್ದರೆ ತಕ್ಷಣ ಸಕ್ಕರೆಯನ್ನು ತಿನ್ನಲು ಕೊಡಿ. ಆದರೆ ಅವನು ಪ್ರಜ್ಞಾಹೀನನಾದರೆ ಏನನ್ನು ಕೊಡಬಾರದು. ತಕ್ಷಣ ವೈದ್ಯರನ್ನು ಕರೆಯಬೇಕು ಮತ್ತು ಆಸ್ಪತ್ರೆಗೆ ಸಾಗಿಸಬೇಕು
- ಅವನು ಪ್ರಜ್ಞಾಹೀನನಾದ ತಕ್ಷಣ ಅವನ ಭಂಗಿಯನ್ನು ಬದಲಿಸಿ. ಉಸಿರಾಟ ಸರಾಗವಾಗುವಂತೆ ನೋಡಿಕೊಳ್ಳಿ
- ಅವನು ಪ್ರಜ್ಞಾಹೀನ ಸ್ಥಿತಿಯಲ್ಲಿ ಇರುವಾಗ ಒಬ್ಬನನ್ನೇ ಬಿಡಬೇಡಿ
ಮೂಲ: ಪೋರ್ಟಲ್ ತಂಡ
No comments:
Post a Comment