Join Us on : WhatsApp | Mobile app

Friday, October 28, 2022

ಸರ್ದಾರ್ ವಲ್ಲಭ ಭಾಯಿ ಪಟೇಲ್

October 28, 2022 0

 ಒಮ್ಮೆ ನ್ಯಾಯಾಲಯದಲ್ಲಿ ಒಂದು ಮೊಕದ್ದಮೆಯ ವಾದ ನಡೆಯುತ್ತಿತ್ತು, ನ್ಯಾಯವಾದಿಗಳು ತಮ್ಮ ಎಂದಿನ ಲಹರಿಯಲ್ಲಿ ವಾದ ಮಾಡುತ್ತಿದ್ದರು. ಹೀಗಿರುವಾಗ ನ್ಯಾಯವಾದಿಗಳ ಕೈಗೊಂದು ತಂತಿ ಸುದ್ದಿ ಬಂತು.ಚೀಟಿಯನ್ನು ನೋಡಿದ ನ್ಯಾಯವಾದಿಗಳು ಮತ್ತೆ ಎಂದಿನ ಲಹರಿಯಲ್ಲಿ ತಮ್ಮ ವಾದ ಮುಗಿಸಿ ಮೊಕದ್ದಮೆಯ ವಿಚಾರಣೆ ಮುಗಿಯುವರೆರೆಗೂ ತಮ್ಮ ಎಂದಿನ ಸಮಚಿತ್ತದಲ್ಲಿದ್ದರು. ವಾದವೆಲ್ಲ ಮುಗಿದ ಮೇಲೆ  ಅಲ್ಲಿದ್ದ ಸಹೋದ್ಯೋಗಿಗಳಿಗೆ ಗೊತ್ತಾಯಿತು ಆ ನ್ಯಾಯವಾದಿಗಳಿಗೆ ಬಂದ ಚೀಟಿಯಲ್ಲಿದ್ದ ಸುದ್ದಿ ‘ಅವರ ಹೆಂಡತಿಯ ಹೆಂಡತಿಯ ನಿಧನದ ‘ ಸುದ್ದಿಯಾಗಿತ್ತು ಎಂದು. ಅಂತಹ ಸುದ್ದಿ ಬಂದರು ಎದೆಗುಂದದೆ  ತಮ್ಮ ಕಕ್ಷಿದಾರನಿಗೆ ಅನ್ಯಾಯವಾಗಬಾರದು ಎಂದು  ತಮ್ಮ ವಾದ ಮುಂದುವರೆಸಿದ ರೀತಿ ಆ ನ್ಯಾಯವಾದಿಗಳ ಕರ್ತವ್ಯ ನಿಷ್ಠೆಯನ್ನು ಎತ್ತಿ ಹಿಡಿದಿತ್ತು.  ಆ ನ್ಯಾಯವಾದಿಗಳು  ಮತ್ತಾರು ಅಲ್ಲ ಭಾರತದ ಉಕ್ಕಿನ ಮನುಷ್ಯನೆಂದು ಖ್ಯಾತಿವೆತ್ತ ‘ ಸರ್ದಾರ್ ವಲ್ಲಭ ಭಾಯಿ ಪಟೇಲ್ ‘ . ವಲ್ಲಭರು ತಮ್ಮ ಜೀವನದಲ್ಲಿ ಎಂತಹ ಕಷ್ಟ ಬಂದರೂ  ಎಂತಹ ಪರಿಸ್ಥಿತಿಯಿದ್ದರೂ ಗಟ್ಟಿ ನಿರ್ಧಾರ ಮಾಡಿ ತಮ್ಮ ಕೆಲಸವನ್ನು ಮಾಡುತ್ತಿದ್ದರು.



ಪಟೇಲರು ಸ್ವತಂತ್ರ ಚಳುವಳಿಯಲ್ಲಿ ಭಾಗವಹಿಸ ತೊಡಗಿದಾಗ ಭಾರತದ ಸ್ವತಂತ್ರ ಚಳುವಳಿಗೆ ಆನೆ ಬಲ ಬಂದಂತಾಯಿತು. ಒಂದರ್ಥದಲ್ಲಿ ಆಂಗ್ಲರಿಗೆ ಚಳಿ ಬಿಡಿಸಿದರು ಎಂದರೆ ತಪ್ಪಾಗಲಾರದು ಅದಕ್ಕೆ ಸಾಕ್ಷಿ ಬರ್ಡೋಲಿ ಚಳುವಳಿ. ಪಟೇಲರ ಮಹತ್ವ ನಮಗೆ ಅರಿವಾಗುವುದು ನಮ್ಮ ದೇಶಕ್ಕೆ ಸ್ವತಂತ್ರ ಬಂದಾಗ ಅಂದರೆ ೧೯೪೭ರಲ್ಲಿ, ಸ್ವತಂತ್ರ ಬಂದಾಗ ನಮ್ಮ ದೇಶದಲ್ಲಿ ೬೦೦ಕ್ಕೂ ಹೆಚ್ಚು ರಾಜರ ಆಳ್ವಿಕೆಯಿದ್ದ ಸಂಸ್ಥಾನಗಳಿದ್ದವು. ಕೆಲವರು ತಾವಾಗಿಯೇ ಭಾರತದ ಒಕ್ಕೂಟವನ್ನು  ಸೇರಿದರೆ ಕೆಲವರು ಪ್ರತಿರೋಧ ಒಡ್ಡಿದರು. ಅಂದು ಏನಾದರೂ ಪಟೇಲರು ಒಂದು ಗಟ್ಟಿ ನಿರ್ಧಾರ ಮಾಡದೆ ಇದ್ದಿದ್ದರೆ ಬಹುಶ ಭಾರತವೇ ಒಂದು ಖಂಡವಾಗುತ್ತಿತ್ತು ಏನೂ. ನಾವು ಒಂದು ಸಂಸ್ಥಾನದಿಂದ ಮತ್ತೊಂದು ಸಂಸ್ಥಾನಕ್ಕೆ ಹೋಗಬೇಕೆಂದರೆ ವೀಸಾ ಮತ್ತು ಪಾಸ್ಪೋರ್ಟ್ ಇಟ್ಟುಕೊಂಡೇ ಹೋಗುವ ಪರಿಸ್ಥಿತಿ ಇರುತ್ತಿತ್ತೋ ಏನೂ. ಪ್ರತಿ ಸಂಸ್ಥಾನವು ಮತ್ತೊಂದು ಸಂಸ್ಥಾನದ ಮೇಲೆ ಸದಾ ಯುದ್ದ ಮಾಡುತ್ತಲೇ ಇರುತ್ತಿತ್ತೇನೊ ಇವೆಲ್ಲಾ ಊಹಿಸಲಾಗದ ಯಕ್ಷ ಪ್ರಶ್ನೆಗಳು ಇವು. ಈಗ ಇರುವ ಕಾಶ್ಮೀರವೇ ಒಂದು ಸಮಸ್ಯೆಯಾದರೆ ಇನ್ನೂ ೬೦೦ ಸಂಸ್ಥಾನಗಳ ಸಮಸ್ಯೆ ಎಂದರೆ ಸ್ವತಂತ್ರ ಭಾರತ ಎಂಬುದು  ಭಾರತೀಯರ ಕೈಗೆ ಬಂಗಾರದಲ್ಲಿ ತೊಡಿಸಿದ ಕೋಳವಾಗುತ್ತಿತ್ತು.
ಅಂದು ಪಟೇಲರು ಎಲ್ಲ ಸಂಸ್ಥಾನದ ರಾಜರಿಗೆ “ನಾವೆಲ್ಲ ಒಂದಾದರೆ ಏಳಿಗೆಯನ್ನು ಬೇಗ ಸಾಧಿಸಬಹುದು,ಬನ್ನಿ ಸಹಕಾರ ನೀಡಿ” ಎಂದು ಮನವಿ ಮಾಡಿದರು. ದೇಶಭಕ್ತ ರಾಜ ಮಹಾರಾಜರು ತಾವಾಗಿಯೇ ಭರತ ಖಂಡದೋಳು ತಮ್ಮ ಸಂಸ್ಥಾನವನ್ನು ವಿಲೀನ ಮಾಡಿದರು. ಆದರೆ ಹೈದರಾಬಾದಿನ ನಿಜಾಮ ಮತ್ತು ಜುನಾಗಡದ ನವಾಬನು ಪಾಕಿಸ್ತಾನ ಸೇರುವ ಸಂಚು ನಡೆಸುತ್ತಿದ್ದರು. ಪರಿಸ್ಥಿತಿಯು ವಿಕೋಪಕ್ಕೆ ಹೋಗುವುದನ್ನು ಅರಿತ ಪಟೇಲರು ಜುನಾಗಡಕ್ಕೆ ಸೈನ್ಯವನ್ನು ಕಳುಹಿಸಿದರು. ಜುನಾಗಡ ನವಾಬನು ಮುಂಬರುವ ಸೋಲನ್ನು ತಪ್ಪಿಸಿಕೊಳ್ಳುವ ಸಲುವಾಗಿ ಪಾಕಿಸ್ತಾನಕ್ಕೆ ಪರಾರಿಯಾದನು. ಆದರೆ ಹೈದರಾಬಾದಿನ ನಿಜಾಮ ಭಾರತದ ಒಕ್ಕೂಟಕ್ಕೆ ಸೇರಲು ಇನ್ನೂ ಒಪ್ಪಿರಲಿಲ್ಲ. ಆಗಾಗಲೇ ಕೋಟ್ಯಂತರ ಹಣವನ್ನು ಪಾಕಿಸ್ತಾನಕ್ಕೆ ರವಾನೆ ಮಾಡಿ ಪಾಕಿಸ್ತಾನದ ಸೇನೆಯ ನೆರವು ಪಡೆಯಲು ಯೋಜಿಸಿದ್ದ. ಹೈದರಾಬಾದಿನ ಹಿಂದೂಗಳಿಗೆ ರಜಾಕ್ ಪಡೆಯನ್ನು ಬಿಟ್ಟು ಹಿಂಸಿಸಲು ಆರಂಭಿಸಿದ್ದ, ರಜಾಕ್ ಪಡೆಗಳು ಕಂಡ ಕಂಡ ಹಿಂದೂಗಳನ್ನೆಲ್ಲ ಕತ್ತರಿಸಿ ರಕ್ತದ ಓಕಳಿಯನ್ನಾಡಿದ್ದರು.ಪರಿಸ್ಥಿತಿ ಮತ್ತೆ ವಿಷಮಕ್ಕೆ ಹೋಗುವುದನ್ನು ಅರಿತ ಪಟೇಲರು ಪೊಲೀಸ್ ಕಾರ್ಯಾಚರಣೆ ನಡೆಸಿ ಐದೆ ದಿನಗಳಲ್ಲಿ ನಿಜಾಮ ಅಟ್ಟಹಾಸ ನಿಲ್ಲಿಸಿ, ಹೈದರಾಬಾದ್ ನಿಜಾಮ ತನ್ನ ಸಂಸ್ಥಾನವನ್ನು ಬಿಟ್ಟು ಕೊಟ್ಟ. ನಂತರ ಇದೆ ಚಾಳಿಯನ್ನು ಕಾಶ್ಮೀರದ ಮಹಾರಾಜ ಮುಂದುವರೆಸಿದ ಕಡೆಗೂ ಅವನ ಆಟ ಹೆಚ್ಚು ನಡೆಯದೆ ಅವನು ಸಹ ತನ್ನ ಸಂಸ್ಥಾನವನ್ನು ಭಾರತಕ್ಕೆ ಸಹ ಬಿಟ್ಟು ಕೊಟ್ಟ. ಅದೇ ಸಮಯಕ್ಕೆ ಪಾಕಿಸ್ತಾನವು ಕಾಶ್ಮೀರ ಮೇಲೆ ಆಕ್ರಮಣ ಮಾಡಿ ಒಂದಿಷ್ಟು ಭೂ ಭಾಗವನ್ನು ಕಬಳಿಸಿತು. ಇದನ್ನು ಕಂಡು ಕೆಂಡಮಂಡಲರಾದ ಪಟೇಲರು ಆಕ್ರಮಿತ ಕಾಶ್ಮೀರದ ಭೂ ಭಾಗವನ್ನು ವಶಕ್ಕೆ ಪಡೆಯುವ ಯೋಜನೆಯನ್ನು ನಿರೂಪಿಸಿದರು. ಆದರೆ ಇದು ವಿದೇಶಾಂಗ  ಖಾತೆಗೆ  ಸೇರುವುದರಿಂದ ಆ ಯೋಜನೆಯನ್ನು ಅಲ್ಲಿಯೇ ಬಿಟ್ಟರು. ಇದೇನಾದರೂ ಗೃಹ ಖಾತೆಗೆ ಸೇರಿದ್ದರೆ ಕತೆ ಬೇರೆಯೇ ಆಗುತ್ತಿತ್ತು.
ಭಾರತ ಸ್ವತಂತ್ರ ಪಡೆದಾಗ ಆಂಗ್ಲರು ನಿಯೋಜಿಸಿದ್ದ ಇಂಡಿಯನ್ ಸಿವಿಲ್ ಸರ್ವೀಸ್ ಅಧಿಕಾರಿಗಳು ಭಾರತದಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈ ಅಧಿಕಾರಿಗಳು ಆಂಗ್ಲರಿಗೆ ನಿಷ್ಠರಾಗಿದ್ದರು ಹಾಗೂ ಭಾರತದ ಆಡಳಿತವನ್ನು ನಡೆಸುವಲ್ಲಿ ಪಳಗಿದ್ದರು. ಈ ಅಧಿಕಾರಿಗಳು ಸ್ವತಂತ್ರ ಭಾರತದಲ್ಲಿ ಆಡಳಿತ ನಡೆಸಲು ಬೇಕೆ ಬೇಡವೇ ಎನ್ನುವ ಮಹತ್ವದ ನಿರ್ಧಾರವನ್ನು ಪಟೇಲರು ತಗೆದುಕೊಂಡರು. ಆಂಗ್ಲ ಐಸಿಸ್ ಅಧಿಕಾರಿಗಳನ್ನು ತಮ್ಮ ದೇಶಕ್ಕೆ ವಾಪಸಾಗುವಂತೆ ಮಾಡಿ ,ಕೇವಲ ದಕ್ಷ ಭಾರತೀಯ ಅಧಿಕಾರಿಗಳನ್ನು ಉಳಿಸಿಕೊಂಡರು. ಸಮರ್ಥ ಐಸಿಸ್ ಅಧಿಕಾರಿಗಳ ಪಡೆಯನ್ನು ಕಟ್ಟಿಕೊಂಡು ಭಾರತದ ಆಡಳಿತವನ್ನು ಹತೋಟಿಗೆ ತಂದರು. ಈ ಇಂಡಿಯನ್ ಸಿವಿಲ್ ಸರ್ವೀಸ್ ಮುಂದೆ ಭಾರತೀಯ ಆಡಳಿತಾತ್ಮಕ ಸೇವೆ ಎಂದು ಹೆಸರುವಾಸಿಯಾಯಿತು.
ನಮ್ಮ ದೇಶದಲ್ಲಿ ಇಂದು ೨೯ ರಾಜ್ಯಗಳಿದ್ದು ಸಹ ಗಡಿ ವಿವಾದಗಳ ಬಗ್ಗೆ ಮಾತನಾಡುತ್ತಿವೆ, ಇನ್ನೂ ದೇಶದ ತುಂಬಾ ೬೦೦ ಸಂಸ್ಥಾನಗಳು ಇದ್ದಿದ್ದರೆ ಎನಾಗುತ್ತಿತ್ತು ಎನ್ನುವುದು ಚರ್ಚೆ ಮಾಡಲೇಬೇಕಾದ ವಿಚಾರ. ಇಂತಹ ಸಂದರ್ಭದಲ್ಲಿ ದೇಶದ ಏಕೀಕರಣಕ್ಕಾಗಿ ದುಡಿದ ಭಾರತ ಮಾತೆಯ ಹೆಮ್ಮೆಯ ಪುತ್ರ ಸರ್ದಾರ್ ವಲ್ಲಭ ಭಾಯಿ ಪಟೇಲರನ್ನು ಸದಾ ಸ್ಮರಿಸುತ್ತಿರಬೇಕು.
ನಾಳೆ ಅಂದರೆ ಆಗಸ್ಟ್ ೧೫ ನಮ್ಮ ದೇಶಕ್ಕೆ ಸ್ವತಂತ್ರ ಬಂದು ೬೮ ವರ್ಷ ಕಳೆದು ೬೯ಕ್ಕೆ ಕಾಲಿಡುತ್ತಿದ್ದೇವೆ, ನಾವು  ನಮ್ಮ ದೇಶಕ್ಕೆ ಭಾರವಾಗದೆ ನಮ್ಮಿಂದಾದ  ಕೊಡುಗೆ ನೀಡೋಣ

Monday, March 29, 2021

Current affairs

March 29, 2021 0
Current affairs
👉 ಇತ್ತೀಚೆಗೆ ನೌಕಾಪಡೆಯ ವಿಮಾನ ಮ್ಯೂಸಿಯಂ ಅನ್ನು ಎಲ್ಲಿ ನಿರ್ಮಿಸಲಾಗಿದೆ?
- ಕಾರವಾರ

👉 ಭಾರತದ ಮೊದಲ ನೌಕಾಪಡೆ ವಿಮಾನ ಮ್ಯೂಸಿಯಂ ಎಲ್ಲಿದೆ...?
- ವಿಶಾಖ ಪಟ್ಟಣ

👉 ಹುಸೇನ್ ಬೋಲ್ಟ್ ಅವರು 100 ಮೀಟರ್ ದೂರವನ್ನು ಎಷ್ಟು ಸೆಕೆಂಡ್ ನಲ್ಲಿ ಓಡಿದ್ದರು...?
- 9.58 ಸೆಕೆಂಡ್
👉 ಶ್ರೀನಿವಾಸಗೌಡ ಅವರು 100 ಮೀಟರ್ ದೂರವನ್ನು ಎಷ್ಟು ಸೆಕೆಂಡ್ ನಲ್ಲಿ ಓಡಿದ್ದಾರೆ...?
- 9.53 ಸೆಕೆಂಡ್

👉 ಜಗತ್ತಿನಲ್ಲಿ ಅತ್ಯಂತ ಹೆಚ್ಚು ಭಾಷೆಗೆ ಭಾಷಾಂತರಗೊಂಡ ಕೃತಿ ಯಾವುದು?
- ಬೈಬಲ್
ಎರಡನೇ ಸ್ಥಾನದಲ್ಲಿ ಪಂಚತಂತ್ರ ಕೃತಿ ಇದೆ

👉 ನಲಂದ ವಿಶ್ವವಿದ್ಯಾಲಯದ ಗ್ರಂಥಾಲಯದ 3 ಕಟ್ಟಡಗಳಿಗೆ ಏನೆಂದು ಹೆಸರಿಡಲಾಗಿದೆ?
- ರತ್ನೋದದಿ
- ರತ್ನರಂಜಕ
- ರತ್ನಸಾಗರ

👉 ವಜ್ರಕೋಶ ನೌಕಾನೆಲೆ & ಕದಂಬ ನೌಕಾ ನೆಲೆಗಳು ಕಾರವಾರದಲ್ಲಿವೆ.

👉 ಸಬರಮತಿ ಆಶ್ರಮದ ಇತರೆ ಹೆಸರುಗಳು ಯಾವುವು?
- ಗಾಂಧಿ ಆಶ್ರಮ
- ಹರಿಜನ ಆಶ್ರಮ
- ಸತ್ಯಾಗ್ರಹ ಆಶ್ರಮ

👉 ಸಮುದ್ರಗುಪ್ತ ದಕ್ಷಿಣ ಭಾರತದ ಮೇಲಿನ ದಾಳಿಯ ಸಂದರ್ಭದಲ್ಲಿ ಅನುಸರಿಸಿದ 3 ಪದ್ಧತಿಗಳು ಯಾವುವು...?
- ಗ್ರಹಣ  
- ಮೋಕ್ಷ 
- ಅನುಗ್ರಹ
👉 ಸಮುದ್ರಗುಪ್ತ ಅಧಿಕಾರಕ್ಕೆ ಬಂದ ಘಟನೆಯನ್ನು ಏನೆಂದು ಕರೆಯುತ್ತಾರೆ?
- ಆರ್ಯವರ್ತ

👉 ಮಲಬಾರ ಸಮರಭ್ಯಾಸ ಯಾವ ಯಾವ ದೇಶಗಳ ನಡುವೆ ನಡೆಯುತ್ತದೆ?
- ಭಾರತ
- ಜಪಾನ್
- ಅಮೇರಿಕಾ

👉 ಭಾರತದ ರಾಷ್ಟ್ರಪತಿ ಅವರ ಅಧಿಕೃತ ನಿವಾಸದ ಹೆಸರೇನು?
- ರಾಷ್ಟ್ರಪತಿ ಭವನ

👉 ಭಾರತದ ಪ್ರಧಾನಮಂತ್ರಿ ಅವರ ಅಧಿಕೃತ ನಿವಾಸದ ಹೆಸರೇನು?
- ಪಂಚವಟಿ

👉 CBI ಸಂಸ್ಥೆಯು ಯಾವ ಸಚಿವಾಲಯದ ಅಡಿಯಲ್ಲಿ ಕೆಲಸ ಮಾಡುತ್ತದೆ?
- ಸಾರ್ವಜನಿಕ ಕುಂದು ಕೊರತೆ & ಪಿಂಚಣಿ ಸಚಿವಾಲಯ

👉 CBI ಸಂಸ್ಥೆಯ ಮೊದಲ ಹೆಸರೇನು?
- ವಿಶೇಷ ಪೊಲೀಸ್ ಸಂಸ್ಥಾಪನಾ

ಇದನ್ನು 1941 ರಲ್ಲಿ ಆರಂಭಿಸಲಾಗಿತ್ತು. ಅ ನಂತರ 1946 ರಲ್ಲಿ ದೆಹಲಿ ಪೊಲೀಸ್ ಸಂಸ್ಥಾಪನಾ ಎಂದು ಮರು ನಾಮಕರಣ ಮಾಡಲಾಯಿತು.

👉 ನಮ್ಮ ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಅತ್ಯಂತ ದೊಡ್ಡ ಸಂಸ್ಥೆ ಯಾವುದು?
- ಕೇಂದ್ರ ಜಾಗೃತ ದಳ

👉 ಕೆ.ಸಂತಾನಂ ಸಮಿತಿ ಯಾವುದಕ್ಕೆ ಸಂಬಂಧಿಸಿದೆ?
- ಭ್ರಷ್ಟಾಚಾರ ನಿರ್ಮೂಲನೆ

👉 ಪುಲ್ವಾಮಾ ದಾಳಿ ಮಾಡಿದ ಉಗ್ರ ಸಂಘಟನೆ ಯಾವುದು?
- ಜೈಶ್-ಇ-ಮೊಹಮ್ಮದ್

👉 ಕರೋನಾ ವೈರಸ್ ಯಾವ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ?
- ಒಂಟೆ
- ಬಾವಲಿ
- ಬೆಕ್ಕು

👉 ಲ್ಯಾಟಿನ್ ಭಾಷೆಯಲ್ಲಿ ಕರೋನಾ ಪದದ ಅರ್ಥ ಏನು?
- ಕಿರೀಟ

👉 ಆಕ್ಸಿಜನ್ ಬಾರ್ -
 ಶುದ್ಧ ಆಮ್ಲಜನಕ ಸಿಗುವ ಸ್ಥಳ 

- ಆಕ್ಸಿಜನ್ ಬಾರ್ ಮೊದಲಿಗೆ ಸ್ಥಾಪಿಸಿದ ನಗರ - ದೆಹಲಿ

👉 ಓಜೋನ್ ಸುಸ್ಥಿರತೆಯನ್ನು ನಿಯಂತ್ರಿಸುವ ಸಮಿತಿ
- ಪ್ರೋಟೋಕಾಲ್ 
( Protocal Committee)

👉 ನೀರಿನ ಶುದ್ಧೀಕರಣದಲ್ಲಿ ಕ್ಲೋರಿನ್ ಮತ್ತು ಓಜೋನ್ ಬಳಸುತ್ತಾರೆ.

👉 ಸಸ್ಯಜೀವಕೋಶದ ಕೋಶಬಿತ್ತಿಯು "ಲಿಗ್ನೀನ್ ಮತ್ತು ಪೆಕ್ಟೀನ್" ಎಂಬ ವರ್ಣಕವನ್ನು ಹೊಂದಿದೆ.

👉 ಅತ್ಯಂತ ಚಿಕ್ಕ ಗಾತ್ರದ ಜೀವಕೋಶ 
- ಮೈಕೋಪ್ಲಾಸ್ಮ ( 0.1ಮೈಕಾನ್ ) 

👉 ಅತ್ಯಂತ ದೊಡ್ಡ ಜೀವಕೋಶ 
- ಆಸ್ಟ್ರೀಚ್ ಮೊಟ್ಟೆ ( 1.70 mm )

Monday, December 14, 2020

ಪ್ರಚಲಿತ

December 14, 2020 0
ಪ್ರಚಲಿತ
 ಹಿರಿಯ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಇನ್ನಿಲ್ಲ
=================
ನಾಡಿನ ಹಿರಿಯ ವಿದ್ವಾಂಸರು ಹಾಗೂ ಪದ್ಮಶ್ರೀ ಪುರಸ್ಕೃತರಾದ ಡಾ.ಬನ್ನಂಜೆ ಗೋವಿಂದಾಚಾರ್ಯ (84) ಭಾನುವಾರ ಬೆಳಿಗ್ಗೆ 11.15ಕ್ಕೆ ಅಂಬಲಪಾಡಿಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.
================
2009ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, ಮಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ದೊರೆತಿದೆ. ‌1979ರಲ್ಲಿ ಅಮೆರಿಕಾದಲ್ಲಿ ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಬನ್ನಂಜೆ ಗೋವಿಂದಾಚಾರ್ಯರು ಭಾಗವಹಿಸಿದ್ದರು.
===============
👉 ವಿದ್ಯಾವಾಚಸ್ಪತಿ, ಪದ್ಮಶ್ರೀ ಪುರಸ್ಕೃತ, ಡಾ.ಬನ್ನಂಜೆ ಗೋವಿಂದಾಚಾರ್ಯ ಪರಿಚಯ:
==================
> ಹೆಸರು: ಡಾ ಬನ್ನಂಜೆ ಗೋವಿಂದಾಚಾರ್ಯ
> ತಂದೆ: ದಿವಂಗತ  ಪಡುಮನ್ನೂರು ನಾರಾಯಣ ಆಚಾರ್ಯ
> ಊರು: ಉಡುಪಿ ತಾಲೂಕು
> ಸಾಧನೆಯ ಕ್ಷೇತ್ರ : ಪತ್ರಕರ್ತ - ಸಾಹಿತ್ಯ -ಸಂಶೋಧಕ - ಕವಿ - ಅನುವಾದಕ - ಉಪನ್ಯಾಸಕ - ಪ್ರವಚನ ವಿದ್ವಾಂಸ 
> ಉದ್ಯೋಗ : ಪ್ರತಿಷ್ಠಿತ ಉದಯವಾಣಿ ದಿನಪತ್ರಿಕೆಯಲ್ಲಿ ಪತ್ರಕರ್ತ, ಸಾಪ್ತಾಹಿಕ ವಿಭಾಗ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ .
> ಸಾಹಿತ್ಯಿಕ ಸಾಧನೆಗಳು : ಈ ತನಕ ಸಂಸ್ಕೃತದಲ್ಲಿ ಸುಮಾರು ಕೃತಿಗಳು ಕನ್ನಡದಲ್ಲಿ ಸುಮಾರು 120 ಕೃತಿಗಳ (ಸಂಸ್ಕೃತದಿಂದ ಕನ್ನಡಕ್ಕೆ ಅನುವಾದ ಸುಮಾರು 50 ಕೃತಿ ಸೇರಿ) ರಚನೆ ಮತ್ತು ಪ್ರಕಾಶನ. ಭಾರತದ ಪ್ರಾಚೀನ ಜ್ಞಾನ ಶಾಖೆಗಳಾದ ವೇದ - ಉಪನಿಷತ್ತು - ಪುರಾಣ- ರಾಮಾಯಣ - ಮಹಾಭಾರತ ಇತ್ಯಾದಿಗಳ ಕುರಿತು ದೇಶ ವಿದೇಶಗಳಲ್ಲಿ ಈ ತನಕ ಸುಮಾರು 26,000 ಗಂಟೆಗೂ ಹೆಚ್ಚು ಕಾಲ ಉಪನ್ಯಾಸ ಪ್ರವಚನಗೈದ ದಾಖಲೆ .
=========
👉 ಸಾಧನೆಗೆ ಸಂದ ಪ್ರಶಸ್ತಿ ಪುರಸ್ಕಾರಗಳು : 
===========
> ರಾಜ್ಯ ಮಟ್ಟದ ಪ್ರಶಸ್ತಿಗಳು : 

ಉಡುಪಿ ಶ್ರೀ ಕೃಷ್ಣ ಮಠ ಅಷ್ಟಮಠಗಳು ಸೇರಿದಂತೆ ಅನೇಕ ಪ್ರಸಿದ್ಧ ಮಠ ಸಂಸ್ಥಾನಗಳಿಂದ ವಿದ್ಯಾ ವಾಚಸ್ಪತಿ, ವಿದ್ಯಾರತ್ನಾಕರ , ಪಂಡಿತರತ್ನ, ಸಂಶೋಧನಾ ವಿಚಕ್ಷಣ ಪಂಡಿತಾಚಾರ್ಯ ಇತ್ಯಾದಿ ಬಿರುದು ಪ್ರದಾನ, 
ಉಡುಪಿ ಶ್ರೀ ಕೃಷ್ಣ ಮಠದ ಆಸ್ಥಾನ‌ ವಿದ್ವಾನ್, 
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ 1974,
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ಆಳ್ವಾಸ್ ನುಡಿಸಿರಿ ಪ್ರಶಸ್ತಿ,
ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ,
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, 
ಮಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್
========
👉 ರಾಷ್ಟ್ರೀಯ ಪ್ರಶಸ್ತಿಗಳು :
========
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ಭಾರತ ಸರ್ಕಾರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ–2009.
=========
👉 ಅಂತರರಾಷ್ಟ್ರೀಯ ಮಾನ್ಯತೆ : 
==========
1979ರಲ್ಲಿ ಅಮೇರಿಕಾದಲ್ಲಿ ( ಪ್ರಿನ್ಸ್ಟನ್)  ನಡೆದ ವಿಶ್ವಶಾಂತಿ ಸಮ್ಮೇಳನಕ್ಕೆ ವಿಶೇಷ ಆಹ್ವಾನಿತರಾಗಿ ಭಾಗಿ  
=========
👉 ಸಾಮಾಜಿಕ ಸೇವೆ : 
===========
ನೆರೆ ಪ್ರವಾಹಗಳ ಸಂದರ್ಭಗಳಲ್ಲಿ ಸಂತ್ರಸ್ತರ ನೆರವಿಗಾಗಿ ಮಾನವೀಯತೆಯ ನೆಲೆಯಲ್ಲಿ ರಾಜ್ಯ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಲಕ್ಷಕ್ಕೂ ಹೆಚ್ಚು ಆರ್ಥಿಕ ದೇಣಿಗೆ, ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸಂತ್ರಸ್ತರಾದ ಬಡವರಿಗೆ ಆಹಾರ ಸಾಮಗ್ರಿ‌ ವಿತರಣೆ.
=========

Monday, November 16, 2020

PARKS IN NEWS

November 16, 2020 0
PARKS IN NEWS
♻️MedSpark (Medical Device Park) : KERALA (Thonnakkal , Trivananhtpuram)

♻️iNDIA'S First Electric Vehicle Park : TamilNadu

♻️Monkey Park : Simoga, Karnataka

♻️India's First Lichen Park : Uttrakhand (Munshiyari,Pithoragarh)

♻️Green Ramayan Park : Haldwani , Uttrakhand

♻️India's First Snow Leopard Park : Uttarkashi, Uttrakhand

Monday, November 9, 2020

ವಿಂಡೋಸ್ 10 ನಲ್ಲಿ ಅಡ್ಮಿನಿಸ್ಟ್ರೇಟರ್ ಅಕೌಂಟ್‌ ಸಕ್ರಿಯಗೊಳಿಸುವುದು ಹೇಗೆ?

November 09, 2020 0

 


ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್ ಬಳಕೆದಾರ ಸ್ನೇಹಿ ಎನಿಸಿಕೊಂಡಿದ್ದು, ಬಳಕೆದಾರರಿಗೆ ಹಲವು ಹೊಸ ಮಾದರಿಯ ಫೀಚರ್ಸ್‌ಳನ್ನ ಸೆಟ್ಟಿಗ್ಸ್‌ಗಳನ್ನ ನೀಡಿದೆ. ಇನ್ನು ವಿಂಡೋಸ್‌ 10 ಅಲ್ಲಿ ಬಳಕೆದಾರರು ತಮ್ಮ ಇಚ್ಚೆಯಂತೆ ಕಾರ್ಯನಿರ್ವಹಿಸಲು, ಕೆಲವು ಸುಧಾರಿತ ಸೆಟ್ಟಿಂಗ್ಸ್‌ಗಳನ್ನು ನೀಡಲಾಗಿದೆ. ಆದರೆ, ಕೆಲವು ಫೀಚರ್ಸ್‌ಗಳು ಮತ್ತು ಆಯ್ಕೆಗಳನ್ನು ಅಡ್ಮಿನಿಸ್ಟ್ರೇಟರ್(administrator) ಅಕೌಂಟ್‌ನಿಂದ ಮಾತ್ರ ಸಕ್ರಿಯಗೊಳಿಸಲು ಸಾಧ್ಯವಾಗಲಿದೆ. ಇಂತಹ ಫೀಚರ್ಸ್‌ಗಳು ಅಡ್ಮಿನ್‌ ಖಾತೆ ಬಿಟ್ಟು ಇನ್ಯಾರಿಗೂ ದೊರೆಯದಂತೆ ನಿರ್ಬಂಧಿಸಲಾಗಿದೆ. ಹೌದು, ವಿಂಡೋಸ್‌ 10 ಆಪರೇಟಿಂಗ್‌ ಸಿಸ್ಟಂನಲ್ಲಿ ಕೆಲವು ಫೀಚರ್ಸ್‌ಗಳನ್ನ ಅಡ್ಮಿನಿಸ್ಟ್ರೇಟರ್(administrator) ಖಾತೆಗೆ ಬಿಟ್ಟು ಇನ್ಯಾರಿಗೂ ಪ್ರವೇಶವಿಲ್ಲದಂತೆ ನಿರ್ಬಂಧಿಸಲಾಗಿದೆ. 

ಈ ಫೀಚರ್ಸ್‌ಗಳು ನಿಮ್ಮ ವಿಂಡೋಸ್ 10 ಕಂಪ್ಯೂಟರ್‌ನಲ್ಲಿ ಸಂಭವಿಸುವ ದೋಷನಿವಾರಣೆಗೆ ಸಹ ಇದು ಅಗತ್ಯವಾಗಿರುತ್ತದೆ. ಆದಾಗ್ಯೂ, ಈ ಫೀಚರ್ಸ್‌ಗಳು ಬಾಕ್ಸ್‌ನಿಂದ ಹೊರಗೆ ಸಕ್ರಿಯಗೊಳ್ಳುವುದಿಲ್ಲ ಮತ್ತು ಕೈಯಾರೆ ಸಕ್ರಿಯಗೊಳಿಸಬೇಕಾಗಿದೆ. ನಿಮ್ಮ ವಿಂಡೋಸ್ 10 ಕಂಪ್ಯೂಟರ್‌ನಲ್ಲಿ ನೀವು ಸಕ್ರಿಯ ನಿರ್ವಾಹಕ ಖಾತೆಯನ್ನು ನೋಡದಿದ್ದರೆ ಆದರೆ ನೀವು ಅದನ್ನು ಸಕ್ರಿಯಗೊಳಿಸಲು ಬಯಸಿದರೆ, ಅದನ್ನು ಹೇಗೆ ಮಾಡಬಹುದು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ. 

ವಿಂಡೋಸ್‌ 10ನಲ್ಲಿ ಕೆಲವು ಪ್ರಮುಖ ಫೀಚರ್ಸ್‌ಗಳನ್ನ ಅಡ್ಮಿನಿಸ್ಟ್ರೇಟರ್ ಅಕೌಂಟ್‌ ಬಿಟ್ಟು ಇನ್ನೆಲ್ಲಿಯೂ ಆಕ್ಟಿವ್‌ ಆಗದಂತೆ ನಿರ್ಬಂಧಿಸಲಾಇದೆ. ಹೀಗಾಗಿ ನಿಮ್ಮ ವಿಮಡೋಸ್‌ 10 ಕಂಪ್ಯೂಟರ್‌ನಲ್ಲಿ ದೋಷಗಳು ಉಂಟಾದರೆ ನೀವು ಅಡ್ಮಿನಿಸ್ಟ್ರೇಟರ್ ಅಕೌಂಟ್‌ಗೆ ಹೋಗಬೇಕಾಗುತ್ತದೆ. ಇದರಲ್ಲಿ ಇರುವ ಫೀಚರ್ಸ್‌ಗಳ ಮೂಲಕ ನಿಮ್ಮ ಕಂಪ್ಯೂಟರ್‌ನಲ್ಲಿ ಕಾಣಿಸಿಕೊಂಡಿರುವ ದೋಷಗಳನ್ನ ನಿವಾರಿಸಬಹುದಾಗಿರುತ್ತದೆ. ಅಷ್ಟಕ್ಕೂ ನೀವು ವಿಂಡೋಸ್‌ 10ನಲ್ಲಿ ಅಡ್ಮಿನಿಸ್ಟ್ರೇಟರ್ ಅಕೌಂಟ್‌ ಅನ್ನು ಆಕ್ಟಿವ್ ಮಾಡುವುದು ಹೇಗೆ ಅನ್ನೊದನ್ನ ಈ ಕೆಳಗಿನ ಹಂತಗಳಲ್ಲಿ ತಿಳಿಸಿಕೊಡಲಾಗಿದೆ

ಹಂತ 1: ಮೊದಲನೆಯದಾಗಿ, ನಿಮ್ಮ ಕಂಪ್ಯೂಟರ್‌ನಲ್ಲಿ ಕಮಾಂಡ್ ಪ್ರಾಂಪ್ಟ್ ಅನ್ನು ಅಡ್ಮಿನಿಸ್ಟ್ರೇಟರ್ ಮೋಡ್‌ನಲ್ಲಿ ತೆರೆಯಿರಿ. ಇದಕ್ಕಾಗಿ, ಸ್ಟಾರ್ಟ್‌ ಮೆನುವಿನಲ್ಲಿ ಕಮಾಂಡ್ ಪ್ರಾಂಪ್ಟ್‌ಗಾಗಿ ಸರ್ಚ್‌ ಮಾಡಿ ನಂತರ ಐಕಾನ್ ಮೇಲೆ ರೈಟ್‌ ಕ್ಲಿಕ್ ಮಾಡಿ, ತದನಂತರ "Run as Administrator" ಆಯ್ಕೆಯ ಮೇಲೆ ಕ್ಲಿಕ್ ಮಾಡಿ. 

ಹಂತ 2: ಕಮಾಂಡ್‌ ಪ್ರಾಂಪ್ಟಿನಲ್ಲಿ, "ನೆಟ್ ಯೂಸರ್ ಅಡ್ಮಿನಿಸ್ಟ್ರೇಟರ್" ಕಮಾಂಡ್‌ ಅನ್ನು ಟೈಪ್ ಮಾಡಿ ನಂತರ ಎಂಟರ್ ಒತ್ತಿರಿ. ಖಾತೆ ಸಕ್ರಿಯ ಸ್ಥಿತಿ ಹೌದು ಅಥವಾ ಇಲ್ಲವೇ ಎಂದು ಅದು ತೋರಿಸುತ್ತದೆ. ಸ್ಥಿತಿ ಇಲ್ಲದಿದ್ದರೆ, ಮುಂದಿನ ಹಂತಕ್ಕೆ ಮುಂದುವರಿಯಿರಿ. 

ಹಂತ 3: ಅಡ್ಮಿನಿಸ್ಟ್ರೇಟರ್ ಖಾತೆಯನ್ನು ಸಕ್ರಿಯಗೊಳಿಸಲು, ಕಮಾಂಡ್ ಪ್ರಾಂಪ್ಟಿನಲ್ಲಿ "ನೆಟ್ ಯೂಸರ್ ಅಡ್ಮಿನಿಸ್ಟ್ರೇಟರ್ / ಆಕ್ಟಿವ್:Yes" ಕಮಾಂಡ್‌ ಅನ್ನು ಟೈಪ್ ಮಾಡಿ ಮತ್ತು ಎಂಟರ್ ಒತ್ತಿರಿ. ಹಂತ 4: ಈಗ, ಅಡ್ಮಿನಿಸ್ಟ್ರೇಟರ್ ಖಾತೆಯನ್ನು ಸಕ್ರಿಯಗೊಳಿಸಲಾಗಿದೆಯೇ ಅಥವಾ ಇಲ್ಲವೇ ಎಂದು ಪರಿಶೀಲಿಸಿ. ಇದಕ್ಕಾಗಿ, ಹಂತ 2 ರಲ್ಲಿ ಉಲ್ಲೇಖಿಸಲಾದ ಅದೇ ಪ್ರಕ್ರಿಯೆಯನ್ನು ಅನುಸರಿಸಿ. ಈ ಮೂಲಕ ನಿಮ್ಮ ವಿಂಡೋಸ್ 10 ಸಿಸ್ಟಂನಲ್ಲಿ ಅಡ್ಮಿನಿಸ್ಟ್ರೇಟರ್ ಅಕೌಂಟ್‌ ಅನ್ನು ಸಕ್ರಿಯಗೊಳಿಸಬಹುದಾಗಿದೆ.



Sunday, November 8, 2020

ಗಾಯಗಳು

November 08, 2020 0
ಗಾಯಗಳು

 

ಕತ್ತರಿಸಿದ ಗಾಯಗಳು

  • ಆ ಜಾಗವನ್ನು ಸೋಪು ಮತ್ತು ಬೆಚ್ಚಗಿನ ನೀರು ಹಾಕಿ ಚೆನ್ನಾಗಿ ತೊಳೆಯಿರಿ. ಮಣ್ಣು ಇದ್ದರೆ ಹುಷಾರಾಗಿ ತೊಳೆಯಿರಿ.
  • ಗಾಯದ ಮೇಲೆ ರಕ್ತ ನಿಲ್ಲುವವರೆಗೆ ನೇರವಾಗಿ ಒತ್ತಡಹಾಕಿ
  • ಗಾಯಕ್ಕೆ ಸ್ಟೆರೈಲ್ ಬ್ಯಾಂಡೇಜು ಹಾಕಿ.
  • ಗಾಯವು ಆಳವಾಗಿದ್ದರೆ ಕೂಡಲೇ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ

ತರೆಚುಗಾಯ

  • ಸೋಪು ಮತ್ತು ಬೆಚ್ಚಗಿನ ನೀರಿನಿಂದ ಗಾಯವನ್ನು ತೊಳೆಯಿರಿ.
  • ಅದರಿಂದ ರಕ್ತ ಸುರಿಯುತ್ತಿದ್ದರೆ, ಒಸರುತ್ತಿದ್ದರೆ ಅದನ್ನು ಸೋಂಕಿನಿಂದ ರಕ್ಷಿಸಲು ಬ್ಯಾಂಡೇಜು ಹಾಕಿ.

ಸೋಂಕು ತಗುಲಿದ ಗಾಯದ ಚಿಹ್ನೆಗಳು

  • ಬಾವು
  • ಕೆಂಪಾಗುವುದು
  • ನೋವು
  • ಜ್ವರ ಬರಬಹುದು
  • ಕೀವು ಆಗ ಬಹುದು

ಮೂಲ: ಪೋರ್ಟಲ್ ತಂಡ

ಜನನಿ -ಶಿಶು ಸುರಕ್ಷಾ ಯೋಜನೆ

November 08, 2020 0
ಜನನಿ -ಶಿಶು ಸುರಕ್ಷಾ ಯೋಜನೆ

 ೨೦೧೧ ರ ಸೆಪ್ಟಂಬರ್ ೮ ರಂದು ಕರ್ನಾಟಕದಲ್ಲಿ ಈ ಯೋಜನೆ ಜಾರಿಯಾಗಿದೆ. ಈ ಯೋಜನೆ ಅನ್ವಯ ಸಾರ್ವಜನಿಕ ಸಂಸ್ಥೆಯಲ್ಲಿ ಹೆರಿಗೆಗೆ ಸಂಬಂದಿಸಿದ ಎಲ್ಲಾ ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ ಮಾತ್ರವಲ್ಲ ಯಾವುದೇ ವಿಧದ ಸೇವಾ ಶುಲ್ಕಗಳನ್ನು ವಿಧಿಸುವುದಿಲ್ಲ. ಗರ್ಭಿನಿಗೆ ಮನೆಯಿಂದ ಸರಕಾರೀ ಆಸ್ಪತ್ರೆಗೆ ಹಾಗೂ ಗಂಭೀರ ಸಮಸ್ಯೆ ಇದ್ದಲ್ಲಿ ದೊಡ್ಡ ಆಸ್ಪತ್ರೆಗೆ ಸಾಗಿಸಲು ಉಚಿತವಾದ ಸಾರಿಗೆ ವ್ಯವಸ್ಥೆ ದೊರೆಯುತ್ತಿದೆ.

ಹೆರಿಗೆ ಸಂಬಂಧಿ ಕಾಯಿಲೆ ಹಾಗೂ ಸಮಸ್ಯೆಗಳಿಂದಾಗಿ ಕರ್ನಾಟಕದಲ್ಲಿ ಪ್ರತೀ ವರ್ಷ ಸುಮಾರು ೧೨೦೦ ಮಂದಿ ಮಹಿಳೆಯರು ಸಾವನ್ನಪ್ಪುತ್ತಿದ್ದಾರೆ. ಜನಿಸಿದ ಒಂದು ವರ್ಷದೊಳಗೆ ೩೬ ಸಾವಿರ ನವಜಾತ ಶಿಶುಗಳು ಮರಣ ಹೊಂದುತ್ತಿವೆ. ಹುಟ್ಟಿದ ನಾಲ್ಕೇ ವಾರಗಳಲ್ಲಿ ೨೨ ಸಾವಿರ ನವಜಾತ ಶಿಶುಗಳು ಹಾಗೂ ಹುಟ್ಟಿದ ಮೊದಲನೇ ವಾರದಲ್ಲಿ ಸುಮಾರು ೧೪ ಸಾವಿರ ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ.

ದಿಗ್ಬ್ರಮೆಗೊಳಿಸುವ ಈ ಅಂಕಿ-ಅಂಶಗಳಿಗೆ ಕಾರಣ ಹುಡುಕುತ್ತಾ ಹೋದರೆ ಸಿಗುವ ಉತ್ತರ. ಆರ್ಥಿಕ ಹೊರೆಯಲ್ಲದ ತುರ್ತು ವೈದ್ಯಕೀಯ ಸೇವೆಗಳು ಸಕಾಲದಲ್ಲಿ ಸಿಗದಿರುವುದು. ಇದಕ್ಕೆ ಪರಿಹಾರವೂ ಈ ಉತ್ತರದಲ್ಲೇ ಇದೆ. ಉತ್ತಮ ಗುಣಮಟ್ಟದ ಅತ್ಯಾವಶ್ಯಕ ಹಾಗೂ ತುರ್ತು ಸಾರ್ವಜನಿಕ ವೈದ್ಯಕೀಯ ಸೇವೆಗಳು ಆರ್ಥಿಕ ಹೊರೆಯಾಗದಂತೆ ಸಕಾಲದಲ್ಲಿ ಲಭಿಸುವಂತಾದರೆ ತಾಯಿ ಹಾಗೂ ಶಿಶುಗಳನ್ನು ರಕ್ಷಿಸಬಹುದು.

ಜನನಿ ಸುರಕ್ಷಾ ಯೋಜನೆ (ಜೆ ಎಸ್ ವೈ) ಜಾರಿಗೊಳಿಸಿದ ನಂತರ ದೇಶದಲ್ಲಿ ಸಾಂಸ್ಥಿಕ ಹೆರಿಗೆಗಳ ಸಂಖ್ಯೆಯಲ್ಲಿ ಬಹಳಷ್ಟು ಹೆಚ್ಚಳವಾಗಿದೆ. ಆದರೂ, ಹೆಚ್ಚಿನ ಮಹಿಳೆಯರು ಇನ್ನೂ ವೈದ್ಯಕೀಯ ಸೇವೆಗಳನ್ನು ಪಡೆಯುವಲ್ಲಿ ಹಿಂಜರಿಯುತ್ತಿದ್ದಾರೆ. ಸಾಂಸ್ಥಿಕ ಹೆರಿಗೆಗೆ ಮುಂದೆ ಬಂಡ ಮಹಿಳೆಯರೂ ಸಹ ೪೮ ತಾಸುಗಳ ತನಕ ಆಸ್ಪತ್ರೆಗಳಲ್ಲಿ ಇರಲು ಇಷ್ಟಪಡುವುದಿಲ್ಲ. ಇದರ ಪರಿಣಾಮವಾಗಿ, ತಾಯಿ ಮತ್ತು ನವಜಾತ ಶಿಶುಗಳಿಗೆ ಸೂಕ್ತ ಸೇವೆಗಳನ್ನು ಒದಗಿಸುವುದು ಕಷ್ಟಕರ. ಪ್ರಸೂತಿಯಾದ ಮೊದಲ ೪೮ ಗಂಟೆಗಳಲ್ಲಿ ಶುಶ್ರೂಷೆ ಲಭಿಸಿದಲ್ಲಿ ಯಾವುದೇ ಸಮಸ್ಯೆ-ತೊಂದರೆಗಳನ್ನು ಗುರುತಿಸಿ ಯೋಗ್ಯ ಪರಿಹಾರ ನೀಡುವುದು ಸುಲಭ.

ಗರ್ಭಿಣಿಯರಿಗೆ ಮತ್ತು ನವಜಾತ ಶಿಶುಗಳಿಗೆ ಸಾಂಸ್ಥಿಕ ಆರೋಗ್ಯ ಸವಲತ್ತುಗಳನ್ನು ಬಳಸುವಲ್ಲಿ ದುಬಾರಿ ಹೆಚ್ಚುವರಿ ವೆಚ್ಚಗಳು ದೊಡ್ಡ ಹೊರೆಯಾಗಿ ಪರಿಣಮಿಸುವುದು ನಿಸ್ಸಂದೇಹ. ಬಡ ಕುಟುಂಬಗಳು ಇಂತಹ ವೆಚ್ಚಗಳನ್ನು ಭರಿಸುವುದು ಕಷ್ಟಕರ ಎನ್ನುವುದು ಸ್ಪಷ್ಟ.

ಇಂತಹ ಪರಿಸ್ಥಿತಿಯಲ್ಲಿ, ಜನರಿಗೆ ಸುಲಭದಲ್ಲೇ ದೊರಕುವಂತಹ ಆರೋಗ್ಯ ಸೇವೆಗಳನ್ನು ಒದಗಿಸುವ ಎನ್ ಆರ್ ಎಚ್ ಎಮ್ ಗುರಿ ಮತ್ತು ಉದ್ದೇಶಗಳಿಗೆ ಸೋಲು ಉಂಟಾಗುತ್ತದೆ. ಎನ್ ಆರ್ ಎಚ್ ಎಮ್ ಅನ್ವಯ ಪ್ರತೀ ಗರ್ಭಿಣಿಗೆ ಅಗತ್ಯವಿರುವ ಪ್ರಸೂತಿ ಪೂರ್ವ, ಪ್ರಸೂತಿ ವೇಳೆ ಮತ್ತು ಪ್ರಸೂತಿ ನಂತರದ ಆರೋಗ್ಯ ಸೇವೆಗಳು ಮತ್ತು ರೋಗದ ವಿರುದ್ದ ರಕ್ಷಣೆ ಉಚಿತವಾಗಿ ಹಾಗೂ ಸಕಾಲದಲ್ಲಿ ಸಿಗುವಂತಾಗಬೇಕು.

ಈ ನಿಟ್ಟಿನಲ್ಲಿ ಇಟ್ಟಿರುವ ಹೊಸ ಹೆಜ್ಜೆಯೇ "ಜನನಿ - ಶಿಶು ಸುರಕ್ಷಾ ಕಾರ್ಯಕ್ರಮ" (ಜೆಎಸಎಸಕೆ ). ೨೦೧೧ ರ ಸೆಪ್ಟೆಂಬರ್ ೮ ರಂದು ಕರ್ನಾಟಕದಲ್ಲಿ ಈ ಯೋಜನೆ ಜಾರಿಯಾಗಿದೆ. ಈ ಯೋಜನೆ ಅನ್ವಯ ಸಾರ್ವಜನಿಕ ಸಂಸ್ಥೆಯಲ್ಲಿ ಹೆರಿಗೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಸರಕಾರವೇ ಭರಿಸುತ್ತದೆ ಮಾತ್ರವಲ್ಲ ಯಾವುದೇ ವಿಧದ ಸೇವಾಶುಲ್ಕಗಳನ್ನು ವಿಧಿಸುವುದಿಲ್ಲ. ಗರ್ಭಿಣಿಗೆ ಮನೆಯಿಂದ ಸರಕಾರಿ ಆಸ್ಪತ್ರೆಗೆ, ಹಾಗೂ ಗಂಭೀರ ಸಮಸ್ಯೆಯಿದ್ದಲ್ಲಿ ದೊಡ್ಡ ಆಸ್ಪತ್ರೆಗೆ ಸಾಗಿಸಲು ಉಚಿತವಾದ ಸಾರಿಗೆ ವ್ಯವಸ್ಥೆ ದೊರೆಯುತ್ತಿದೆ.

ಉಚಿತವಾದ ಔಷಧ ಮತ್ತು ಅವಶ್ಯಕ ಉಪಯೋಗದ ವಸ್ತುಗಳು, ರೋಗ ಪತ್ತೆ ಹಚ್ಚಲು ಪರೀಕ್ಷಾ ವೆಚ್ಹ. ಅಗತ್ಯವಿದ್ದಾಗ ರಕ್ತ ಪೂರೈಕೆ ಮತ್ತು ಗರ್ಭಿಣಿ ಆಸ್ಪತ್ರೆಯಲ್ಲಿ ಇರಬೇಕಾಗುವಷ್ಟು ಕಾಲ- ಸಾಧಾರಣವಾಗಿ ಸಾಮಾನ್ಯ ಹೆರಿಗೆಗೆ ಎರಡು ದಿನ ಮತ್ತು  ಸಿಜೇರಿಯನ್ ಶಸ್ತ್ರ ಚಿಕಿತ್ಸೆಯ ವೇಳೆ ಏಳು ದಿನ-ಉಚಿತ ಆಹಾರ ನೀಡುವುದೂ ಈ ಯೋಜನೆಯಡಿ ಸೇರಿದೆ.

ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ಜನನವಾದಂದಿನಿಂದ ೩೦ ದಿನಗಳವರೆಗೆ ಇಂತಹ ಉಚಿತ ಸೇವೆಗಳನ್ನು ಈ ಯೋಜನೆಯಲ್ಲಿ ನೀಡಲಾಗುತ್ತದೆ. ಉಚಿತ ಚಿಕಿತ್ಸೆಯೊಂದಿಗೆ, ಮನೆಯಿಂದ ಆಸ್ಪತ್ರೆಗೆ ಮತ್ತು ಅಗತ್ಯವಿದ್ದಲ್ಲಿ ಮೇಲ್ದರ್ಜೆಯ ಆಸ್ಪತ್ರೆಗೆ ಕೊಂಡೊಯ್ಯಬೇಕಾದಲ್ಲಿ ಉಚಿತ ಸಾರಿಗೆ ವ್ಯವಸ್ಥೆಯನ್ನು ಪಡೆಯಬಹುದಾಗಿದೆ.

ಜೆ ಎಸ್ಎಸ್ ಕೆ ಯಲ್ಲಿ ಗರ್ಭಿಣಿಯರು ಹಾಗೂ ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಿಗುವ ಸವಲತ್ತುಗಳು.

ಗರ್ಭಿಣಿಯರಿಗೆ

  • ಉಚಿತ ಹೆರಿಗೆ ಸೇವೆಗಳು
  • ಉಚಿತ ಸಿಜೇರಿಯನ್ ಶಸ್ತ್ರ ಚಿಕಿತ್ಸೆ
  • ಉಚಿತ ಪ್ರಯೋಗ ಶಾಲೆ ಸೇವೆಗಳು
  • ಉಚಿತ ಔಷಧಿಗಳು ಮತ್ತು ಬಳಕೆ ಸಾಮಗ್ರಿಗಳು
  • ಗರ್ಭಿಣಿಯರು ಹೆರಿಗೆಯ ಸಮಯದಲ್ಲಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗ ಉಚಿತ ಊಟ -ತಿಂಡಿ  (ಸಾಮಾನ್ಯ ಹೆರಿಗೆಗೆ ೨ ದಿನ ಮತ್ತು ಸಿಜೇರಿಯನ್ ಹೇರಿಗೆಯಾದರೆ ೭ ದಿನ )
  • ಅವಶ್ಯಕತೆಯಿರುವ ಗರ್ಭಿಣಿಯರಿಗೆ ಉಚಿತ ರಕ್ತದ ವ್ಯವಸ್ಥೆ.
  • ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಮೇಲ್ದರ್ಜೆ ಆಸ್ಪತ್ರೆಗಳಿಗೆ ಉಚಿತ ಸಾರಿಗೆ ವ್ಯವಸ್ಥೆ.
  • ಎಲ್ಲಾ ರೀತಿಯ ಸೇವಾ ಶುಲ್ಕ ಪಾವತಿಯಿಂದ ವಿನಾಯಿತಿ.

ಅನಾರೋಗ್ಯದಿಂದ ನರಳುವ ನವಜಾತ ಶಿಶುಗಳಿಗೆ ಸಿಗುವ ಸೇವೆಗಳು

  • ಯಾವುದೇ ಹಣಕಾಸು ಖರ್ಚು ಮಾಡಿಸದ ಉಚಿತ ಸೇವೆಗಳು.
  • ಉಚಿತ ಔಷಧಿಗಳು ಮಾತು ಬಳಕೆ ಸಾಮಗ್ರಿಗಳು.
  • ಉಚಿತ ಪ್ರಯೋಗಶಾಲೆ ಪರೀಕ್ಷೆಗಳು.
  • ಅವಶ್ಯಕತೆಯಿರುವ ಶಿಶುಗಳಿಗೆ ಉಚಿತ ರಕ್ತದ ವ್ಯವಸ್ಥೆ.
  • ಮನೆಯಿಂದ ಆಸ್ಪತ್ರೆಗೆ, ಆಸ್ಪತ್ರೆಯಿಂದ ಆಸ್ಪತ್ರೆಗಳಿಗೆ ಸಾರಿಗೆ ವ್ಯವಸ್ಥೆ.
  • ಎಲ್ಲ ರೀತಿಯ ಸೇವಾ ಶುಲ್ಕದಿಂದ ವಿನಾಯಿತಿ

ಗರ್ಭಿಣಿಯರಿಗೆ ಔಷಧಿಗಳು ಮತ್ತು ಕಬ್ಬಿಣ ಮತ್ತು ಫೋಲಿಕ್ ಆಮ್ಲ ಮುಂತಾದ ಪೂರಕ ಅಂಶಗಳು ಸೇರಿದಂತೆ ಅಗತ್ಯ ಬಳಕೆಯ ವಸ್ತುಗಳನ್ನು ಪ್ರಸವ - ಪೂರ್ವ, ಪ್ರಸೂತಿ-ವೇಳೆ ಮತ್ತು ಪ್ರಸೂತಿ-ನಂತರ ೬ ವಾರಗಳ ತನಕ ಉಚಿತವಾಗಿ ನೀಡಲಾಗುತ್ತದೆ.

ಬಸಿರುತನ, ಹೆರಿಗೆ ಮತ್ತು ಪ್ರಸೂತಿ ಸಮಯದಲ್ಲಿ ಎದುರಿಸುವ ಸಂಭಾವ್ಯ ಸಮಸ್ಯೆಗಳನ್ನು ಸಕಾಲದಲ್ಲಿ ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆಗಳು ಅಗತ್ಯವಿದೆ. ಇಂತಹ ಸೂಕ್ತ ಮತ್ತು ಅಗತ್ಯವಾಗಿರುವ ವೈದ್ಯಕೀಯ ಪರೀಕ್ಷೆಗಳನ್ನು ಗರ್ಭಿಣಿಯರಿಗೆ ಪ್ರಸವ-ಪೂರ್ವ, ಪ್ರಸೂತಿ-ವೇಳೆ ಮತ್ತು ಪ್ರಸೂತಿ-ನಂತರ ೬ ವಾರಗಳ ತನಕ ಉಚಿತವಾಗಿ ನೀಡಲಾಗುತ್ತದೆ. ನವಜಾತ ಶಿಶು ರೋಗಗ್ರಸ್ಥವಾಗಿದ್ದು ಸೋಂಕು, ನ್ಯುಮೋನಿಯಾ ಮುಂತಾದುಗಳ ತುರ್ತು ಚಿಕಿತ್ಸೆ ಬೇಕಾದ ವೇಳೆ ಇಂತಹುದೇ ಸೌಲಭ್ಯ ದೊರೆಯುತ್ತದೆ.

ಮೂಲ:ಕುಟುಂಬ ವಾರ್ತೆ

ಉಸಿರು ಗಟ್ಟುವುದು

November 08, 2020 0
ಉಸಿರು ಗಟ್ಟುವುದು

 ಯಾವುದೆ ಒಬ್ಬವ್ಯಕ್ತಿಗೆ ಉಸಿರು ಗಟ್ಟಿದರೆ , ಅವನು ಕೆಮ್ಮುತ್ತಿರುವ ತನಕ ನೀವು ಮಧ್ಯ ಪ್ರವೇಶಿಸಬಾರದು ಕೆಮ್ಮಿದಾಗಲೂ ಗಂಟಲಲ್ಲಿ ಸಿಕ್ಕಿರುವ ವಸ್ತು ಹೊರಬರದಿದ್ದರೆ ಮತ್ತು ಅವನಿಗೆ ಉಸಿರಾಡಲು ಬಹಳ ತೊಂದರೆಯಾದರೆ ಅಥವ ಅವನ ಮೈ ಬಣ್ಣ ನೀಲಿಯಾದರೆ, ಮತ್ತು ಉಸಿರು ಗಟ್ಟಿರುವುದರಿಂದ ಕೆಮ್ಮಲು ಅಥವ ತಕ್ಷಣವೆ ಮಾತನಾಡಲು ಸಾಧ್ಯವಾಗದಿದ್ದರೆ, “ನಿನಗೆ ಉಸಿರು ಗಟ್ಟಿದೆಯಾ?” ಎಂದು ಪ್ರಶ್ನಿಸಿ.ಉಸಿರು ಗಟ್ಟಿದ ವ್ಯಕ್ತಿಯು “ ಹೌದು” ಎಂದು ತಲೆಯಾಡಿಸುವನು ಆದರೆ ಮಾತನಾಡಲು ಸಾಧ್ಯವಾಗುವುದಿಲ್ಲ ಪ್ರಶ್ನೆ ಕೇಳುವುದು ಅತಿ ಮುಖ್ಯವಾಗಿದೆ . ಏಕೆಂದರೆ ಹೃದಯಾಘಾತ ವಾದವರಿಗೂ ಇದೇ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಆದರೆ ಅವರು ಮಾತನಾಡಬಲ್ಲರು.

ಹೊಟ್ಟೆಯ ಮೇಲೆ ಒತ್ತಡವನ್ನು ತುರ್ತು ಪರಿಸ್ಥೀತಿಯಲ್ಲಿ ಮಾತ್ರ ಹಾಕಿರಿ

  1. ಆ ವ್ಯಕ್ತಿಯ ಹಿಂದೆ ನಿಂತು ಅವನ ಸೊಂಟವನ್ನು ತೋಳಿನಿಂದ ಬಳಸಿ.
  2. ನೀವು ಮುಷ್ಠಿ ಕಟ್ಟಿ ಹೆಬ್ಬೆರಳಿನ ಬುಡವುಅವನ ಹೊಟ್ಟೆಯ ಮಧ್ಯ ಭಾಗದಲ್ಲಿರಲಿ. ಹೊಕ್ಕಳಿನ ಮೇಲೆ ಆದರೆ ಎದೆಗೂಡಿನ ಮೂಳೆಯ ಕೆಳಗೆ ಇರಲಿ.
  3. ಮುಷ್ಟಿಯನ್ನು ಗಟ್ಟಿಯಾಗಿ ಹಿಡಿದು ಅದನ್ನು ಇನ್ನೊಂದುಕೈನಿಂದ ಒತ್ತಿರಿ ಮತ್ತು ಎರಡೂ ಕೈಗಳನ್ನು ನಿಮ್ಮಕಡೆ ಬಲವಾಗಿ ಎಳೆಯಿರಿ. ಹಿಡಿತವನ್ನು ತುಸು ಮೇಲೆ ಕೆಳಗೆ ಜರುಗಿಸಿ.
  4. ಈ ಪ್ರಕ್ರಿಯೆಯನ್ನು ಸತತವಾಗಿ ಆ ವಸ್ತುವು ಹೊರಬರುವ ವರೆಗೆ ಇಲ್ಲವೆ ವ್ಯಕ್ತಿಯು ಎಚ್ಚರತಪ್ಪುವವರೆಗೆ ಮುಂದುವರಿಸಿ.

ತುರ್ತು ಪರಿಸ್ಥೀತಿಯನ್ನು ನಿರ್ವಹಿಸಲು ನಿಮಗೆ ಆಗದಿದ್ದರೆ ತಕ್ಷಣ ರೋಗಿಯನ್ನು ವೈದ್ಯರಲ್ಲಿಗೆಕರೆದುಕೊಂಡು ಹೋಗಿ

ಮೂಲ: ಪೋರ್ಟಲ್ ತಂಡ