Join Us on : WhatsApp | Mobile app

Showing posts with label mahabharat. Show all posts
Showing posts with label mahabharat. Show all posts

Sunday, December 15, 2024

ನೀತಿ ಕಥೆ

December 15, 2024 0
ನೀತಿ ಕಥೆ

 ಒಮ್ಮೆ ...

ದುರ್ಯೋಧನನಿಗೂ..
ಭೀಮನಿಗೂ ಜಗಳ ಶುರುವಾಗುತ್ತದೆ..

ಇಬ್ಬರೂ
ಒಬ್ಬರನ್ನೊಬ್ಬರು ದೂಷಿಸಿಕೊಳ್ಳುತ್ತಾರೆ...

ಮಾತಿನ ಮಧ್ಯದಲ್ಲಿ ದುರ್ಯೋಧನ...

"ನೀನು ವಿಧವೆಯ ಮಗ...
ಮುಂಡೆ ಮಗ "

ಎಂದು ಹೀಯಾಳಿಸುತ್ತಾನೆ..

ಅದು ನಿಜವಾಗಿತ್ತು..

ತಾಯಿ ಕುಂತಿದೇವಿ
ಪಾಂಡುವನ್ನು ಕಳೆದುಕೊಂಡು ವಿಧವೆಯಾಗಿದ್ದಳು..

ಭೀಮ
ನಿರುತ್ತರನಾಗಿ ತಾಯಿ ಬಳಿ ಬರುತ್ತಾನೆ..

"ಗಾಂಧಾರಿಯೂ ಕೂಡ ವಿಧವೆ..

ನೀನೂ ಸಹ
ದುರ್ಯೋಧನನ್ನು "ಮುಂಡೆ ಮಗ" ಎಂದು ಬಯ್ಯ ಬಹುದು.." ..

"ಧೃತರಾಷ್ಟ್ರ
ಬದುಕಿದ್ದಾನಲ್ಲ.. ಗಾಂಧಾರಿ ವಿಧವೆ ಹೇಗಾಗುತ್ತಾಳೆ...? "..

"ಹಾಗಲ್ಲ ಅದು..
ಮದುವೆಯ
ಪೂರ್ವದಲ್ಲಿ ಗಾಂಧಾರಿಯ ಜಾತಕದಲ್ಲಿ ದೋಷವಿತ್ತು..

ವಿಧವಾ ಯೋಗ
ಅವಳ ಜಾತಕದಲ್ಲಿತ್ತು..

ಹಾಗಾಗಿ..
ಗಾಂಧಾರಿಯ
ನೂರಾ ಒಂದು ಸಹೋದರರು..
ಗಾಂಧಾರಿಯನ್ನು
ಮೊದಲು ಒಂದು ಕುರಿಗೆ ಮದುವೆ ಮಾಡಿ..
ಕುರಿಯನ್ನು ಕಡಿದು ಸಾಯಿಸುತ್ತಾರೆ..

ಅಮೇಲೆ
ಧೃತರಾಷ್ಟ್ರನಿಗೆ ಮದುವೆ ಮಾಡಿದ್ದಾರೆ..." ...

::::::::::::::::::::::::::::::

ಭೀಮನಿಗೆ ಇಷ್ಟು ಸಾಕಾಗಿತ್ತು...

ನೇರವಾಗಿ ಧುರ್ಯೋಧನನ ಬಳಿ ಹೋಗಿ..

" ನೀನು..
ಕುರಿ
ಮುಂಡೆ ಮಗ....!!..." ...

ಎಂದು ಜರೆಯುತ್ತಾನೆ..

ಧುರ್ಯೋಧನ
ಕೆಂಡಾಮಂಡಲವಾಗುತ್ತಾನೆ...

ಧುರ್ಯೋಧನ
ವಸ್ತು ಸ್ಥಿತಿಯನ್ನು ವಿಚಾರಿಸುತ್ತಾನೆ...

ತನ್ನ

ಅವಮಾನಕ್ಕೆ ಕಾರಣರಾದ ...
ಗಾಂಧಾರ ದೇಶದ
ಸೋದರ ಮಾವಂದಿರನ್ನು ಜೈಲಿಗಟ್ಟುತ್ತಾನೆ....

::::::::::::::::::::::::::::::::::::::::::::::::::::::::::::::::::::::

ಶಕುನಿ....
ಗಾಂಧಾರ ದೇಶದ ರಾಜ ಕುವರ...

ಧೃತರಾಷ್ಟ್ರನ ಮಡದಿ ಗಾಂಧಾರಿಯ ಸಹೋದರ...

ದುರ್ಯೋಧನನಿಗೆ ಗಾಂಧಾರ ದೇಶದ ರಾಜರಿಂದ ಅವಮಾನವಾಗಿ..
ಅವರನ್ನು ಜೈಲಿಗೆ ಅಟ್ಟುತ್ತಾನೆ...

ಅವರು
ತನ್ನ ಸ್ವಂತ ಸೋದರ ಮಾವಂದಿರು...

ಅವಮಾನ..
ದುರಭಿಮಾನ..
ಅಧಿಕಾರದ ಮದ ಏನೆಲ್ಲ ಮಾಡಿಸಿಬಿಡುತ್ತದೆ.. !

ತನಗಾದ ಅವಮಾನಕ್ಕೆ
ಶಿಕ್ಷೆಯಾಗಿ...
ಜೈಲಿಗಟ್ಟಿದ ತನ್ನ ಸೋದರ ಮಾವಂದಿರಿಗೆ
ಒಬ್ಬನ
ಊಟ ಮಾತ್ರ ಕಳುಹಿಸುತ್ತಾನೆ...

ಗಾಂಧಾರ ದೇಶದ ರಾಜಕುವರರು ವಿಚಾರ ಮಾಡುತ್ತಾರೆ...

"ಒಬ್ಬನ ಊಟದಿಂದ
ನಾವು
ನೂರಾ ಒಂದು ಸಹೋದರರು ಬದುಕಲಾಗದು...

ನಮ್ಮಲ್ಲಿ
ಅತಿ ಹೆಚ್ಚು ಬುದ್ಧಿವಂತ ಬದುಕ ಬೇಕು...
ಹಾಗು ..
ನಮ್ಮನ್ನು ಈ ಸ್ಥಿತಿಗೆ ತಂದವನ
ವಂಶವನ್ನು ನಿರ್ನಾಮ ಮಾಡಬೇಕು..."

ಸರಿ...
ಬುದ್ಧಿವಂತನನ್ನು ಗುರುತಿಸುವುದು ಹೇಗೆ ?

"ಒಂದು
ಸಣ್ಣ ಶಂಖದ ಒಳಗೆ ದಾರ ತೂರಿಸ ಬೇಕು...."

ಎಲ್ಲರೂ
ಪ್ರಯತ್ನ ಪಟ್ಟರು.. ಆಗಲಿಲ್ಲ...

ಶಕುನಿ...
ಊಟದಲ್ಲಿ ಬಂದ ಸಕ್ಕರೆಯನ್ನು
ಶಂಖದ ಒಂದು ತುದಿಗೆ ಅಂಟಿಸಿದ..

ಇನ್ನೊಂದು
ಬದಿಯಿಂದ
ಸಣ್ಣ ದಾರವನ್ನು ಇರುವೆಗೆ ಕಟ್ಟಿ ಬಿಟ್ಟ..

ಇರುವೆ
ಸಕ್ಕರೆಯನ್ನು ಅರಸುತ್ತ
ಶಂಖದ ಮತ್ತೊಂದು ತುದಿ ತಲುಪಿತು ! ....

ಬುದ್ಧಿವಂತಿಕೆ
ಹೆಚ್ಚಾಗಿ ಸಾಮಾನ್ಯ ಜ್ಞಾನದಲ್ಲಿರುತ್ತದೆ...

ಸಹೋದರರೆಲ್ಲರೂ
ಶಕುನಿಯನ್ನು ಅಭಿನಂದಿಸಿದರು ..!

ಹಾಗು
ಊಟವನ್ನು ತ್ಯಾಗ ಮಾಡಿ ಪ್ರಾಣ ಬಿಟ್ಟರು...

ಸಾಯುವಾಗ ಒಂದು ಮಾತನ್ನು ಹೇಳಿದರು...

"ನೀನು
ನಮ್ಮೆಲ್ಲರ ಸೇಡನ್ನು ತೀರಿಸಬೇಕು..

ನಮ್ಮ
ಎಲುಬನ್ನು ನೀನು ಬಳಸಿಕೊ..
ಅವು ನಿನ್ನ ಮಾತನ್ನು ಕೇಳುತ್ತವೆ.."

ತನ್ನೆದುರಿಗೆ..
ತನ್ನ ನೂರು ಜನ ಸಹೋದರರು
ಉಪವಾಸದಿಂದ..
ನರಳಿ ನರಳಿ..
ಕಣ್ಣೆದುರಿಗೆ ಸತ್ತ ಚಿತ್ರವನ್ನು ಶಕುನಿ ಮರೆಯದಾದ...

ಒಳಗೊಳಗೆ..
ದ್ವೇಷದ ಕಿಚ್ಚು ಉರಿಯುತ್ತಿತ್ತು...

ಸಹೋದರ
ಎಲುಬಿನಿಂದ ಪಗಡೆಯ ದಾಳವನ್ನು ಮಾಡಿಟ್ಟುಕೊಂಡ...

"ತನ್ನ
ಸಹೋದರಿಯ ಮಗ..
ಅಳಿಯ
ದುರ್ಯೋಧನ
ತನ್ನ ಸಹೋದರರ ಸಾವಿಗೆ ಕಾರಣ " .....

ಕೌರವರನ್ನು
ತಾನೊಬ್ಬನೆ ಎದುರಿಸಿ ಗೆಲ್ಲಲು ಸಾಧ್ಯವಿಲ್ಲ...

ಶ್ರೀಕೃಷ್ಣನ
"ಅಭಯ ಹಸ್ತ " ರಕ್ಷಿತರು..
ಪಾಂಡವರಿಂದ ಈ ಕಾರ್ಯ ಸಾಧ್ಯ..." ....

ಶಕುನಿಯ
ಕುತಂತ್ರದ ಲೆಕ್ಕಾಚಾರ ತಪ್ಪಾಗಲಿಲ್ಲ...

ಕಪಟ
ಪಗಡೆಯಾಟದಲ್ಲಿ ಪಾಂಡವರನ್ನು ಸೋಲಿಸಿ...
ಕೌರವನನ್ನು ಗೆಲ್ಲಿಸಿ...
ಸತ್ಯವಂತ..
ಧರ್ಮ ನಡತೆಯ ಪಾಂಡವರಿಗೆ ವನವಾಸ ಮಾಡಿಸಿದ...

ಕುರುಕ್ಷೇತ್ರದ ಯುದ್ಧದ
ಮುನ್ನುಡಿಯನ್ನು..
ಶಕುನಿ..
ತನ್ನ ಕೈಯ್ಯಾರೆ ಬರೆದ....

ಕೌರವ ವಂಶವನ್ನು ನಿರ್ನಾಮ ಮಾಡಿದ...

::::::::::::::::::::::::::::::::::::::::::

ಒಂದು
ಕ್ಷುಲ್ಲಕ ಕಾರಣಕ್ಕಾಗಿ ...
ತನ್ನ
ಸೋದರ ಮಾವಂದಿರನ್ನು ಜೈಲಿಗಟ್ಟಿದ ದುರ್ಯೋಧನ
ತನ್ನ ..
ತನ್ನ ವಂಶದ ವಿನಾಶಕ್ಕೆ ಕಾರಣನಾದ...

ಪಾಂಡವರನ್ನು
ದ್ವೇಷಿಸುವ ಅಬ್ಬರದಲ್ಲಿ
ಶಕುನಿಯ ನಿಜ ಮುಖವನ್ನು ಗುರುತಿಸದಾದ...

:::::::::::::::::::::::::::::::::::::::::::::::::::::::::::::::::

ಪ್ರತಿಯೊಂದು
ವಿನಾಶದ ಹಿಂದೆ...
ಒಂದು ಸ್ವಯಂಕೃತ ಅಪರಾಧವಿದ್ದೇ ಇರುತ್ತದೆ...

ವಿನಾಶದ
ಮೂಲ..
ಆತ್ಮೀಯರ ಮುಖವಾಡದಲ್ಲಿ.. ..

ಹತ್ತಿರದವರಾಗಿ
ಶಕುನಿಯಾಗಿ...
ಕಿಚ್ಚು ಹತ್ತಿಸಿರುವುದು ಗೊತ್ತಾಗುವುದೇ ಇಲ್ಲ..

ಯಾವುದೇ
ಸಾಮ್ರಾಜ್ಯದ..
ದೇಶದ...

ಅತ್ಯುನ್ನತ
ವ್ಯಕ್ತಿಗಳ ಅವನತಿ...

ಸ್ವಂಯಕೃತ ತಪ್ಪುಗಳಿಂದ...

ಹತ್ತಿರದ
ಬಂಧುಗಳಿಂದಲೇ ಆಗುವುದು ಸೋಜಿಗದ ಸಂಗತಿ...

ಮಹಾಭಾರತವನ್ನು
ಒಂದು
ಕಾದಂಬರಿಯನ್ನಾಗಿ ಓದಿದರೂ...
ಪ್ರಸ್ತುತ
ಜಗತ್ತಿನಲ್ಲಿ ನಡೆಯುವ..
ಎಲ್ಲ ವಿದ್ಯಮಾನಗಳ ಪ್ರಶ್ನೆಗಳಿಗೆ ಉತ್ತರವಿದೆ...

ಹರೇ ಕೃಷ್ಣ 🙏🙏🙏

ಕೃಪೆ ವಾಟ್ಸಪ್