ಕತ್ತರಿಸಿದ ಗಾಯಗಳು
- ಆ ಜಾಗವನ್ನು ಸೋಪು ಮತ್ತು ಬೆಚ್ಚಗಿನ ನೀರು ಹಾಕಿ ಚೆನ್ನಾಗಿ ತೊಳೆಯಿರಿ. ಮಣ್ಣು ಇದ್ದರೆ ಹುಷಾರಾಗಿ ತೊಳೆಯಿರಿ.
- ಗಾಯದ ಮೇಲೆ ರಕ್ತ ನಿಲ್ಲುವವರೆಗೆ ನೇರವಾಗಿ ಒತ್ತಡಹಾಕಿ
- ಗಾಯಕ್ಕೆ ಸ್ಟೆರೈಲ್ ಬ್ಯಾಂಡೇಜು ಹಾಕಿ.
- ಗಾಯವು ಆಳವಾಗಿದ್ದರೆ ಕೂಡಲೇ ವೈದ್ಯರಲ್ಲಿಗೆ ಕರೆದುಕೊಂಡು ಹೋಗಿ
ತರೆಚುಗಾಯ
- ಸೋಪು ಮತ್ತು ಬೆಚ್ಚಗಿನ ನೀರಿನಿಂದ ಗಾಯವನ್ನು ತೊಳೆಯಿರಿ.
- ಅದರಿಂದ ರಕ್ತ ಸುರಿಯುತ್ತಿದ್ದರೆ, ಒಸರುತ್ತಿದ್ದರೆ ಅದನ್ನು ಸೋಂಕಿನಿಂದ ರಕ್ಷಿಸಲು ಬ್ಯಾಂಡೇಜು ಹಾಕಿ.
ಸೋಂಕು ತಗುಲಿದ ಗಾಯದ ಚಿಹ್ನೆಗಳು
- ಬಾವು
- ಕೆಂಪಾಗುವುದು
- ನೋವು
- ಜ್ವರ ಬರಬಹುದು
- ಕೀವು ಆಗ ಬಹುದು
ಮೂಲ: ಪೋರ್ಟಲ್ ತಂಡ
No comments:
Post a Comment